ಆ ಫೋಟೋ ಲೀಕ್‌ ಆಗುತ್ತಿದ್ದಂತೆ... ದಯವಿಟ್ಟು ಹಂಚಿಕೊಳ್ಳಬೇಡಿ ಅಂತ ಮನವಿ ಮಾಡಿದ ವಿಜಯ್‌..!

Vijay Devarakonda leak : ಸ್ಟಾರ್ ಹೀರೋ ಸಿನಿಮಾಗಳು ಲೀಕ್ ಆಗುವ ಸಾಧ್ಯತೆ ಹೆಚ್ಚು. ಎಷ್ಟೇ ಮುಂಜಾಗ್ರತೆ ವಹಿಸಿದರೂ ಒಂದಷ್ಟು ಫೋಟೋ ಅಥವಾ ವಿಡಿಯೋ ಲೀಕ್ ಆಗುತ್ತಲೇ ಇರುತ್ತದೆ. ಕೆಲವರು ಬೇಕು ಅಂತಲೇ ಸಿನಿಮಾ ಹಾಳು ಮಾಡಲು ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಸಿನಿಮಾದ ಲೀಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Krishna N K | Last Updated : Jul 24, 2024, 05:00 PM IST
    • ʼಲೀಕ್‌ʼ ಇತ್ತೀಚಿಗೆ ಚಿತ್ರರಂಗವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ.
    • ಸ್ಟಾರ್ ಹೀರೋ ಸಿನಿಮಾಗಳು ಲೀಕ್ ಆಗುವ ಸಾಧ್ಯತೆ ಹೆಚ್ಚು.
    • ಲೀಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ಫೋಟೋ ಲೀಕ್‌ ಆಗುತ್ತಿದ್ದಂತೆ... ದಯವಿಟ್ಟು ಹಂಚಿಕೊಳ್ಳಬೇಡಿ ಅಂತ ಮನವಿ ಮಾಡಿದ ವಿಜಯ್‌..!  title=
Vijay Deverakonda

VD12 Photo leak : ʼಲೀಕ್‌ʼ ಇತ್ತೀಚಿಗೆ ಚಿತ್ರರಂಗವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಬಿಗ್‌ ಬಜೆಟ್‌ ಸಿನಿಮಾದಿಂದ ಹಿಡಿದು ಸಣ್ಣ ಸಿನಿಮಾದವರೆಗೂ ಈ ತೊಂದರೆ ಯಾರನ್ನೂ ಬಿಟ್ಟಿಲ್ಲ.. ಸ್ಟಾರ್ ಹೀರೋ ಸಿನಿಮಾಗಳು ಲೀಕ್ ಆಗುವ ಸಾಧ್ಯತೆ ಹೆಚ್ಚು. ಎಷ್ಟೇ ಮುಂಜಾಗ್ರತೆ ವಹಿಸಿದರೂ ಒಂದಷ್ಟು ಫೋಟೋ ಅಥವಾ ವಿಡಿಯೋ ಲೀಕ್ ಆಗುತ್ತಲೇ ಇರುತ್ತವೆ.

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮುಂಬರುವ ಸಿನಿಮಾದ ಫೋಟೋವೊಂದು ಲೀಕ್‌ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಜುನ್ ರೆಡ್ಡಿ ಮತ್ತು ಗೀತಾ ಗೋವಿಂದಂ ನಂತರ ವಿಜಯ್ ಗೆ ಆ ರೇಂಜ್ ನಲ್ಲಿ ಹಿಟ್ ಸಿಗುತ್ತಿಲ್ಲ. 

ಇದನ್ನೂ ಓದಿ:ಪ್ರಭಾಸ್‌ ಅಲ್ಲ.. ʼಈʼ ಖ್ಯಾತ ವ್ಯಕ್ತಿಯನ್ನು ಮದುವೆಯಾಗಲು ಗ್ರೀನ್‌ ಸಿಗ್ನಲ್‌ ಕೊಟ್ಟ ಅನುಷ್ಕಾ ಶೆಟ್ಟಿ..! ಸ್ವೀಟಿ ಕೈ ಹಿಡಿಯೋ ಲಕ್ಕಿ ಬಾಯ್‌ ಇವರೇ?!

ಇತ್ತೀಚೆಗಷ್ಟೇ ವಿಜಯ್ ಅಭಿನಯದ ಲೈಗರ್, ಖುಷಿ ಹಾಗೂ ಫ್ಯಾಮಿಲಿ ಸ್ಟಾರ್ ಚಿತ್ರಗಳು ನಿರೀಕ್ಷೆಯಂತೆ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ವಿಫಲವಾದವು. ಸಧ್ಯ ರೌಡಿ ಬೇಬಿ ಜರ್ಸಿ ನಿರ್ದೇಶಕ ಗೌತಮ್ ತಿನ್ನನೂರಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ವಿಜಯ್ ಅವರ 12 ನೇ ಚಿತ್ರ. ಸದ್ಯ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. 

ಈಗ ಈ ಚಿತ್ರದ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಬೀಚ್ ಲೊಕೇಶನ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದ ಫೋಟೋವೊಂದು ಲೀಕ್ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.. ಫೋಟೋದಲ್ಲಿ ವಿಜಯ್ ವಿಭಿನ್ನವಾಗಿ ಕಾಣುತ್ತಿದ್ದಾರೆ. 

ಇದನ್ನೂ ಓದಿ:ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು 'ಈ' ಕಾರಣಕ್ಕೆ!

ಇನ್ನೂ ಫೋಟೋ ಸೋರಿಕೆಯಾದ ಬೆನ್ನಲ್ಲೇ ನಿರ್ಮಾಪಕರು ಆತಂಕಗೊಂಡಿದ್ದಾರೆ. ಹಾಗಾಗಿ ಸಿನಿಮಾ ನಿರ್ಮಾಪಕರ ಜೊತೆಗೆ ವಿಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ಲೀಕ್‌ ಆಗಿರುವ ಫೋಟೋವನ್ನು ಎಲ್ಲಿಯೂ ಶೇರ್‌ ಮಾಡ್ಬೇಕಿ ಅಂತ ಮನವಿ ಮಾಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News