Viral Video : ಏರ್‌ಪೋರ್ಟ್‌ನಲ್ಲಿ ಪುಟ್ಟ ಅಭಿಮಾನಿಯನ್ನು ಅಪ್ಪಿಕೊಂಡ ಸಲ್ಮಾನ್‌ ಖಾನ್‌

Salman Khan Fan : ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೂ ಅವರ ಅಭಿಮಾನಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಸಲ್ಲು ಅಭಿಮಾನಿಗಳು ಅವರನ್ನು ಎಲ್ಲೆ ಕಂಡರು ಅವರೊಂದಿಗೆ ಬಹಳ ಆತಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ.  

Written by - Zee Kannada News Desk | Last Updated : May 26, 2023, 10:30 AM IST
  • ಸಲ್ಮಾನ್‌ ಖಾನ್‌ ಅವರು ತಮ್ಮ ಪುಟ್ಟ ಅಭಿಮಾನಿಗಳನ್ನು ತುಂಬಾ ಇಷ್ಟಪಡುತ್ತಾರೆ.
  • ಇಂತಹದೇ ಒಂದು ದೃಶ್ಯ ಮುಂಬೈ ಏರ್‌ಪೋರ್ಟ್‌ನಲ್ಲಿ ಕಂಡು ಬಂದಿದ್ದು,
  • ಸಲ್ಲು ಬಾಯ್‌ ತಮ್ಮ ಅಭಿಮಾನಿಯನ್ನು ಅಪ್ಪಿಕೊಂಡ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ.
Viral Video : ಏರ್‌ಪೋರ್ಟ್‌ನಲ್ಲಿ ಪುಟ್ಟ ಅಭಿಮಾನಿಯನ್ನು ಅಪ್ಪಿಕೊಂಡ ಸಲ್ಮಾನ್‌ ಖಾನ್‌

Bollywood : ಸಲ್ಮಾನ್‌ ಖಾನ್‌ ಅವರು ತಮ್ಮ ಪುಟ್ಟ ಅಭಿಮಾನಿಗಳನ್ನು ತುಂಬಾ ಇಷ್ಟಪಡುತ್ತಾರೆ. ನಿನ್ನೆ (ಮೇ26) ಇಂತಹದೇ ಒಂದು ದೃಶ್ಯ ಮುಂಬೈ ಏರ್‌ಪೋರ್ಟ್‌ನಲ್ಲಿ ಕಂಡು ಬಂದಿದ್ದು, ಸಲ್ಲು ಬಾಯ್‌ ತಮ್ಮ ಅಭಿಮಾನಿಯನ್ನು ಅಪ್ಪಿಕೊಂಡ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಸಲ್ಮಾನ್‌ ಖಾನ್‌ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಅವರ ಛೋಟಾ ಅಭಿಮಾನಿಯೊಬ್ಬ ಅವರನ್ನು ನೋಡಲು ಓಡಿ ಬಂದ. ಇದನ್ನು ನೋಡಿದ ಸಲ್ಲು ಬಾಯ್‌ ತಕ್ಷಣ ಅಲ್ಲೆ ನಿಂತು ತಮ್ಮ ಪುಟ್ಟ ಅಭಿಮಾನಿಗೆ ಪ್ರೀತಿಯ ಅಪ್ಪುಗೆ ನೀಡಿ ಮುಂದೆ ಸಾಗಿದರು. ಇದೀಗ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಸಾಕಷ್ಟು ವೀವ್ಸ್‌ಗಳನ್ನು ಪಡೆದುಕೊಳ್ಳುತ್ತಿದೆ. 

ಇದನ್ನೂ ಓದಿ-Bhairati Rangal: ಭೈರತಿ ರಣಗಲ್‌ನಲ್ಲಿ ಶಿವಣ್ಣಗೆ ಹೀರೋಯಿನ್‌ ಯಾರು..!?

ಕೆಲವು ಮಾದ್ಯಮ ಮೂಲಗಳ ಪ್ರಕಾರ, ಸಲ್ಮಾನ್‌ ಖಾನ್‌ ಅಬು ಧಾಬಿಗೆ ಹೊರಟಿದ್ದು, ಅಲ್ಲಿ ನಡೆಯುತ್ತಿರುವ ಐಫಾ ಈವೆಂಟ್‌ನಲ್ಲಿ ಸಲ್ಲು ಭಾಗಿಯಾಗುತ್ತಿದ್ದಾರೆ. ಐಫಾ ಅಬುಧಾಬಿಯ ಯಾಸ್‌ ಐಲ್ಯಾಂಡ್‌ನಲ್ಲಿ ಆರೋಜನೆ ಮಾಡಲಾಗಿದ್ದು, ಕಪ್ಪು ಶರ್ಟ್‌, ಡಾರ್ಟ್‌ ಪ್ಲ್ಯಾಂಟ್‌ ಜೊತೆಗೆ ಲೆದರ್‌ ಜಾಕೆಟ್‌ ಧರಿಸಿ ಸಲ್ಮಾನ್‌ ಖಾನ್‌ ಏರ್‌ಪೋರ್ಟ್‌ಗೆ ಎಂಟ್ರಿಕೊಟ್ಟಿದ್ದರು. ಜೊತೆಗೆ ಇದೇ ವೇಲೆ ಸಲ್ಲು ಬಾಯ್‌ ಹೊಸ ಲುಕ್‌ ಕೂಡ ಸಖತ್‌ ವೈರಲ್‌ ಆಗಿದ್ದು, ಈ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗುತ್ತಿವೆ. 

ಸಲ್ಮಾನ್‌ ಖಾನ್‌ ತಮ್ಮ ಛೋಟಾ ಅಭಿಮಾನಿಯನ್ನು ಅಪ್ಪಿಕೊಂಡ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಬಾರಿ ವೈರಲ್‌ ಆಗಿದೆ ಅದಕ್ಕೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಭಿಮಾನಗಳಿಗೆ ಸ್ಪಂದಿಸುವುದು ನಿಜವಾದ ನಟ ನಟಿಯರ ಕರ್ತವ್ಯ, ಎಷ್ಟೇ ಎತ್ತರಕ್ಕೆ ಬೆಳೆದರು ದುರಹಂಕಾರವಿಲ್ಲ ಸಲ್ಲು ಬಾಯ್‌ ಗೆ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಇದನ್ನೂ ಓದಿ-Ashish Vidyarthi Marriage: 60ರ ಹರೆಯದಲ್ಲಿ ಎರಡನೇ ಮದುವೆಯಾದ ನಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News