Horror Movie Actress : ನಟನೆಗೆ ಗುಡ್ ಬೈ ಹೇಳಿ ಸನ್ಯಾಸಿನಿಯಾದ ಖ್ಯಾತ ನಟಿ!

Barkha Madan: ಹೆಸರು, ಕೀರ್ತಿ, ಹಣ, ಮನ್ನಣೆ ಯಾವುದು ನಟಿಯನ್ನು ತೃಪ್ತಿಪಡಿಸಲಿಲ್ಲ. ಹೀಗಾಗಿ ಆಕೆ ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿನಿಯಾದಳು. ಹಾಗಾದರೆ ಆ ನಟಿ ಯಾರು ಅಂತೀರಾ.. ಈ ಸ್ಟೋರಿ ಓದಿ.. 

Written by - Savita M B | Last Updated : Feb 7, 2024, 06:03 PM IST
  • ಈ ನಟಿ ಮಾಡೆಲ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದರು.
  • ಜೊತೆಗೆ ಒಳ್ಳೆಯ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು..
  • ಆದರೆ ಇದ್ದಕ್ಕಿದ್ದಂತೆ ಸನ್ಯಾಸಿನಿಯಾಗಿ ಬದಲಾಗಿದ್ದಾರೆ
Horror Movie Actress : ನಟನೆಗೆ ಗುಡ್ ಬೈ ಹೇಳಿ ಸನ್ಯಾಸಿನಿಯಾದ ಖ್ಯಾತ ನಟಿ! title=

Actress Barkha Madan: ಈ ನಟಿ ಮಾಡೆಲ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ಜೊತೆಗೆ ಒಳ್ಳೆಯ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದರು.. ಆದರೆ ಇದ್ದಕ್ಕಿದ್ದಂತೆ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.. ಹಾಗಾದರೆ ಕಾರಣ ಏನು? ಯಾರ ಆ ನಟಿ? ಇಲ್ಲಿದೆ ಉತ್ತರ.. 

ಇದನ್ನೂ ಓದಿ-Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ತಂದೆ ಯಾರು ಗೊತ್ತಾ? ಇಲ್ಲಿದೆ ವೈರಲ್‌ ಫೋಟೋ!

ಬರ್ಖಾ ಮದನ್.. ಒಂದು ಕಾಲದಲ್ಲಿ ಫೇಮಸ್ ಮಾಡೆಲ್. 1994 ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್. ಕಿರೀಟಕ್ಕಾಗಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆದರು. ಅದರ ನಂತರ, ಮಿಸ್ ಟೂರಿಸಂ ವರ್ಲ್ಡ್ ವೈಡ್ ರನ್ನರ್ ಅಪ್ ಆದರು. 1996ರಲ್ಲಿ ‘ಖಿಲಾಡಿ ಕಾ ಕಿಲಾಡಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 2003 ರಲ್ಲಿ, ರಾಮ್ ಗೋಪಾಲ್ ವರ್ಮಾ 'ಭೂತ' ಚಿತ್ರದಲ್ಲಿ ಕಾಣಿಸಿಕೊಂಡರು. ದೆವ್ವದ ಪಾತ್ರದಲ್ಲಿ ಹೆದರಿಸಿದ್ದು ಮಾತ್ರವಲ್ಲದೆ ಒಳ್ಳೆಯ ಹೆಸರು ಕೂಡ ಗಳಿಸಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಾ.. ಇನ್ನೊಂದೆಡೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಬರ್ಖಾ ಇದ್ದಕ್ಕಿದ್ದಂತೆ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ..

ಇದನ್ನೂ ಓದಿ-Sandalwood Actor: ಕೋಟಿ ಸಂಭಾವನೆ ಪಡೆದ ಕನ್ನಡದ ಮೊದಲ ಹೀರೋ ಇವರು..!

ಬರ್ಖಾ ಮದನ್ ಹೆಸರು ಈಗ 'ಗಾಲ್ಟೆನ್ ಸ್ಯಾಮ್ಟೆನ್'. ಅವರು ಪರ್ವತಗಳು ಮತ್ತು ಆಶ್ರಮಗಳಿಗೆ ಭೇಟಿ ನೀಡುವ ಕಾರ್ಯವನ್ನು ಮಾಡಲಿದ್ದಾರೆ... ಬರ್ಖಾ ಮದನ್ ಅವರು ತಮ್ಮ ಆಧ್ಯಾತ್ಮಿಕ ವಿಷಯಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ದಲೈ ಲಾಮಾ ಅವರ ಅನುಯಾಯಿಯಾಗಿರುವ ಬರ್ಖಾ ಅವರು 2012 ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಲು ಬಯಸಿದ್ದರು. ಪ್ರಸ್ತುತ ಬರ್ಖಾ ಅವರ ಜೀವನವು ಧ್ಯಾನ, ಪ್ರಾರ್ಥನೆ ಮತ್ತು ಜನರ ಸೇವೆಯಿಂದ ತುಂಬಿದೆ. ರೂಪದರ್ಶಿ, ನಟಿ, ನಿರ್ಮಾಪಕಿಯೂ ಆಗಿರುವ ಬರ್ಖಾ ಅವರು ಸನ್ಯಾಸಿನಿಯಾಗಲು ಬಲವಾದ ಕಾರಣಗಳು ಇದ್ದಿರಬಹುದು ಎನ್ನಲಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News