ಇಡೀ ವಿಶ್ವವೇ ತಿರುಗಿ ನೋಡುವಂತಿದೆ "ಕಬ್ಜ" ಸಿನಿಮಾ ಟೀಸರ್..!

Written by - YASHODHA POOJARI | Last Updated : Sep 17, 2022, 08:13 PM IST
  • ಅಬ್ಬಬ್ಬಾ.. ಟೀಸರ್ ನೋಡಿದ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.
  • ಯಾಕಂದ್ರೆ ಟೀಸರ್ನಲ್ಲಿ ಕಂಡು ಬರೋ ಚಿತ್ರಣ ಮೈರೋಮಾಂಚನವೆನಿಸುವಂತಿದೆ.
ಇಡೀ ವಿಶ್ವವೇ ತಿರುಗಿ ನೋಡುವಂತಿದೆ "ಕಬ್ಜ" ಸಿನಿಮಾ ಟೀಸರ್..! title=

ಕಬ್ಜ... ವೆರಿ ಟ್ಯಾಲೆಂಟ್ ಡೈರೆಕ್ಟರ್ ಆರ್ ಚಂದ್ರು ನಿರ್ದೇಶನದ ಸಿನಿಮಾ.ಟೈಟಲ್ ಮೂಲಕವೇ ಸದ್ದು ಮಾಡಿದ್ದ ಕಬ್ಜ ಸಿನಿಮಾದ ಟೀಸರ್ ಫೈನಲಿ ರಿಲೀಸ್ ಆಗಿದ್ದು,ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಜನಪ್ರಿಯ ನಟ ರಾಣಾ ದಗ್ಗುಬಾಟಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು ಸಿನಿಮಾಗೆ ಇನ್ನಷ್ಟು ಬಲ ತುಂಬಿದ ಹಾಗಿದೆ. ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಪಕ್ಕಾ ಮೋಡಿ ಮಾಡೋ ಮೂಲಕ ಇಡೀ ವಿಶ್ವವೇ ತಿರುಗಿ ನೋಡೋ ಹಾಗೇ ಮಾಡೋದು ಪಕ್ಕಾ ಆಗಿದೆ.

ಅಬ್ಬಬ್ಬಾ.. ಟೀಸರ್ ನೋಡಿದ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.ಯಾಕಂದ್ರೆ ಟೀಸರ್ನಲ್ಲಿ ಕಂಡು ಬರೋ ಚಿತ್ರಣ ಮೈರೋಮಾಂಚನವೆನಿಸುವಂತಿದೆ. ಪಕ್ಕಾ ಈ ಸಿನಿಮಾ ರಿಲೀಸ್ ಆದ ಬಳಿಕ ಇಡೀ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.ಯಾಕಂದ್ರೆ ಟೀಸರ್ ನೋಡ್ತಾ ಇದ್ರೆ ಇದು ಬಾಲಿವುಡ್ನೂ ಮೀರಿಸೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡಿದೆ.

ಟೀಸರ್ ರಿಲೀಸ್ ಮಾಡಿ ಮಾತನಾಡಿದ ನಟ ರಾಣ ಈಗ ಪ್ಯಾನ್ ಇಂಡಿಯಾ ಅಂತಾರೆ ನಾನು 90 ರಲ್ಲೇ ತೆಲುಗಿನಲ್ಲಿ ಉಪ್ಪಿ ಸರ್ ಸಿನಿಮಾ ನೋಡಿದ್ದೀನಿ.ಕನ್ನಡ ಚಿತ್ರರಂಗ‌ ತುಂಬಾ ಗ್ರೋಥ್ ಆಗಿದೆ.ನನ್ನ ಸಿನಿಮಾ ರಿಲೀಸ್ ಬಂದಾಗ‌ ನಾನು ಕನ್ನಡದಲ್ಲಿ ಮಾತನಾಡ್ತಿನಿ.ನಾವು ಜಗತ್ತಿಗೆ ತೋರಿಸ್ಬೇಕು ಇಂಡಿಯಾದಲ್ಲಿ ಚಿತ್ರರಂಗ ತುಂಬಾ ದೊಡ್ಡದು ಅನ್ನೋದನ್ನ.ಟೀಸರ್ ನನಗೆ ತುಂಬಾ ಇಷ್ಟ ಆಯ್ತು ಮ್ಯೂಸಿಕ್ ಇಷ್ಟ ಆಯ್ತು ಉಪ್ಪಿ ಸರ್ ಪವರ್ ಹೌಸ್ ಇದ್ದ ಹಾಗೇ ಅಂತ ಹಾಡಿಹೊಗಳಿದ್ರು.

1942 ರಲ್ಲಿ ನಡೆಯೋ ಕಥೆ ಇದಾಗಿರುತ್ತೆ.ಉಪ್ಪಿ ಲುಕ್ ಅಂತ ಆಹಾ ಅನ್ನುವಂತಿದೆ. ಬಂದೂಕು,ಕಪ್ಪು ಬಿಳುಪಿನ ಸೆಟ್,ಅಂಬಾಸಿಡರ್ ಕಾರು,ಬೆಂಕಿ,ರಕ್ತ, ಅಳು ಇವೆಲ್ಲವೂ ಟೀಸರ್ ನೋಡಿದ ಬಳಿಕ ಯಾಕೋ ಹೆಚ್ಚಾಗಿ ಕಾಡಲು ಆರಂಭಿಸಿದೆ. 7 ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು,ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News