ಮನೆ ಬಳಿ ಬರುವ ಅಭಿಮಾನಿಗಳು ಥೀಯೇಟರ್ ಗೆ ಯಾಕೆ ಬರಲ್ಲ ? ರವಿಚಂದ್ರನ್ ಮನದ ನೋವು

ಶೂಟಿಂಗ್ ನಡುವೆ ಸಿಕ್ಕಿರೋ ಸ್ವಲ್ಪ ಸಮಯದದಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ ರವಿಚಂದ್ರನ್. ನೆಚ್ಚಿನ ನಟನಿಗೆ ಶುಭ ಕೋರಲು ಕಾಯುತ್ತಿರುವ ಅಭಿಮಾನಿ ಬಳಗ. 

Written by - YASHODHA POOJARI | Last Updated : May 30, 2023, 12:50 PM IST
  • ರವಿಚಂದ್ರನ್ ನಿವಾಸದ ಬಳಿ ಅಭಿಮಾನಿಗಳ ದಂಡು
  • ವಿಶ್ ಮಾಡಲು ಕಾಯಿತ್ತಿರುವ ಫ್ಯಾನ್ಸ್
  • ನೆಚ್ಚಿನ ನಟನನ್ನು ನೋಡಲು ಪಟ್ಟು
ಮನೆ ಬಳಿ ಬರುವ ಅಭಿಮಾನಿಗಳು ಥೀಯೇಟರ್ ಗೆ ಯಾಕೆ ಬರಲ್ಲ ? ರವಿಚಂದ್ರನ್ ಮನದ ನೋವು   title=

ಬೆಂಗಳೂರು : ಇವತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ಕ್ರೇಜಿಸ್ಟಾರ್ ಕುಟುಂಬವರ ಜೊತೆ ಸಮಯ ಕಳೆಯೋದಾಗಿ ಮೊದಲೇ ಮಾಹಿತಿ ಸಿಕ್ಕಿತ್ತು. 62 ನೇ ವಸಂತಕ್ಕೆ ಕಾಲಿಟ್ಟ ಪ್ರೇಮಲೋಕದ ಜನಕನನ್ನ ನೋಡಲು ಜನಸಾಗರವೇ ಕಾದಿದೆ. ಆದರೆ, ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿದಿದ್ದಾರೆ ಕ್ರೇಜಿಸ್ಟಾರ್. 

ರವಿಚಂದ್ರನ್ ಹುಟ್ಟುಹಬ್ಬ ಆಚರಣೆ ಮಾಡದಿದ್ರು ಮನೆ ಬಳಿ ಬಂದಿರುವ ಅಭಿಮಾನಿಗಳು ಅವರನ್ನ ನೋಡಲೇಬೇಕು ಅಂತ ಕಾಯುತ್ತಿದ್ದಾರೆ. ಆದ್ರೆ ಸದ್ಯ ಜಡ್ಜ್ ಮೆಂಟ್ ಶೂಟಿಂಗ್ ನಲ್ಲಿ ಬ್ಯುಸಿಯಿರುವ ರವಿಚಂದ್ರನ್ ಅಭಿಮಾನಿಗಳ  ಜೊತೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ಶೂಟಿಂಗ್ ನಡುವೆ ಸಿಕ್ಕಿರೋ ಸ್ವಲ್ಪ ಸಮಯದದಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. 

ಇದನ್ನೂ ಓದಿ : ಕ್ರೇಜಿಸ್ಟಾರ್ ಬಗ್ಗೆ ನಿಮಗೆ ಗೊತ್ತಿರದ ಹಲವು ವಿಶೇಷಗಳಿವು

ಆದರೆ ಬರ್ತ್ ಡೇ ಆಚರಣೆ ಮಾಡದಿದಕ್ಕೆ ಅಸಮಧಾನ ವ್ಯಕ್ತ ಪಡಸ್ತಿರುವ ಅಭಿಮಾನಿಗಳನ್ನ ಸಮಾಧಾನ ಮಾಡೋದೇ ಕಷ್ಟವಾಗಿದೆ. ನಾವು ದೂರದ ಊರುಗಳಿಂದ ಬಂದಿದ್ದೀವಿ. ಅವರು ಯಾಕೆ ಬರ್ತ್ ಡೇ ಆಚರಿಸಲ್ಲ ಅಂತ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟು ಜನರನ್ನು ಸಂಪಾದನೆ ಮಾಡಿ ಈಗ ಹುಟ್ಟು ಹಬ್ಬ ಯಾಕೇ ಆಚರಿಸ್ತಿಲ್ಲ.ಅವರು ಬರುವ ತನಕ ನಾವು ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ  ಅಭಿಮಾನಿಗಳು.

ಅಭಿಮಾನಿಗಳ ಆಸೆಯನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಈಡೇರುಸುತ್ತಾರಾ ಅನ್ನೋದನ್ನ ಕಾದುನೋಡಬೇಕು. ಆದ್ರೆ ಮನೆ ಬಳಿ ಬರೋ ಅಭಿಮಾನಿಗಳು ಥೀಯೇಟರ್ ಗೆ ಯಾಕೆ ಬರಲ್ಲ ಅನ್ನೋ ನೋವು ಖಂಡಿತಾ ರವಿಚಂದ್ರನ್ ಅವರಿಗಿದೆ. 

ಇದನ್ನೂ ಓದಿ : ನನ್ನ ಕಷ್ಟ ಸುಖಕ್ಕೆ ದರ್ಶನ್ - ಸುದೀಪ್ ಇದ್ದಾರೆ ಅಂದಿದ್ಯಾಕೆ ಕ್ರೇಜಿಸ್ಟಾರ್?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News