ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು, ಕಾರಣ ಇದೇ ನೋಡಿ.!

Complaint against Vicky Kaushal: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಮುಂಬರುವ ಚಿತ್ರಕ್ಕಾಗಿ ಇಂದೋರ್‌ನ ಬೀದಿಗಳಲ್ಲಿ ಕಾಣಿಸಿಕೊಂಡ ನಂತರ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

Edited by - Zee Kannada News Desk | Last Updated : Jan 2, 2022, 08:53 AM IST
  • ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು
  • ಪೊಲೀಸ್ ದೂರು ದಾಖಲಿಸಿದ ಇಂದೋರ್ ನಿವಾಸಿ
  • ಸಿನಿಮಾದಲ್ಲಿ ಬಳಸಲಾದ ವಾಹನದ ಸಂಖ್ಯೆ ತನ್ನದಾಗಿದೆ ಎಂದು ದೂರು
ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು, ಕಾರಣ ಇದೇ ನೋಡಿ.!  title=
ಬಾಲಿವುಡ್ ನಟ ವಿಕ್ಕಿ ಕೌಶಲ್

ಇಂದೋರ್ (ಮಧ್ಯಪ್ರದೇಶ): ಇಂದೋರ್ ನಿವಾಸಿಯೊಬ್ಬರು ತಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸಿದ್ದಾರೆಂದು ಆರೋಪಿಸಿ ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ಪೊಲೀಸ್ ದೂರು (Complaint against Vicky Kaushal) ದಾಖಲಿಸಿದ್ದಾರೆ. 

ವಿಕ್ಕಿ ಕೌಶಲ್ ತಮ್ಮ ಮುಂಬರುವ ಚಿತ್ರಕ್ಕಾಗಿ ಇಂದೋರ್‌ನ (Indore) ಬೀದಿಗಳಲ್ಲಿ ಬೈಕ್ ಓಡಿಸುತ್ತಿರುವುದನ್ನು ನೋಡಿದ ನಂತರ ದೂರು ದಾಖಲಿಸಲಾಗಿದೆ.  ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ (Sara Ali Khan) ಅವರ ಮುಂಬರುವ ಚಿತ್ರಕ್ಕಾಗಿ ಇಂದೋರ್‌ನ ಬೀದಿಗಳಲ್ಲಿ ಬೈಕ್ ಮೇಲೆ ಕಾಣಿಸಿಕೊಂಡ ನಂತರ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಫಿರ್ಯಾದುದಾರ ಜೈ ಸಿಂಗ್ ಯಾದವ್ (Jai Singh Yadav), ಚಲನಚಿತ್ರದಲ್ಲಿ ಬಳಸಲಾದ ವಾಹನದ ಸಂಖ್ಯೆ (vehicle numbervehicle number) ತನ್ನದಾಗಿದೆ ಎಂದು ಹೇಳಿಕೊಂಡಿದ್ದು, ನಟನು ತನ್ನ ಅನುಮತಿಯಿಲ್ಲದೆ ಆ ನಂಬರ್ ಪ್ಲೇಟ್ ಅನ್ನು ಬಳಸುವಂತಿಲ್ಲ ಎಂದು ಹೇಳಿದರು.

 

 

"ಸಿನಿಮಾದಲ್ಲಿ ಬಳಸಿರುವ ವಾಹನದ ಸಂಖ್ಯೆ ನನ್ನದು. ಇದು ಚಿತ್ರತಂಡಕ್ಕೆ ತಿಳಿದಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇದು ಕಾನೂನುಬಾಹಿರವಾಗಿದೆ. ಅವರು ಅನುಮತಿಯಿಲ್ಲದೆ ನನ್ನ ನಂಬರ್ ಪ್ಲೇಟ್ ಅನ್ನು ಬಳಸಲಾಗುವುದಿಲ್ಲ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು" ಎಂದು ಜೈ ಸಿಂಗ್ ಯಾದವ್ ಹೇಳಿದ್ದಾರೆ. 

"ನಮಗೆ ದೂರು ಬಂದಿದ್ದು, ನಂಬರ್ ಪ್ಲೇಟ್ ದುರ್ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಮೋಟಾರು ವಾಹನ ಕಾಯಿದೆಯಲ್ಲಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಬೇಕು. ಚಿತ್ರತಂಡ ಇಂದೋರ್‌ನಲ್ಲಿದ್ದರೆ, ಅವರನ್ನು ತನಿಖೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಎಸ್‌ಐ ರಾಜೇಂದ್ರ ಸೋನಿ ಹೇಳಿದ್ದಾರೆ. 

ಇದನ್ನೂ ಓದಿ: ಧೋನಿ ಅಥವಾ ಗಂಗೂಲಿ ನಡುವೆ ಉತ್ತಮ ನಾಯಕ ಯಾರು? ಹರ್ಭಜನ್ ಆಘಾತಕಾರಿ ಉತ್ತರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News