Censor Certificate For Kaatera Movie: ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿಯಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಚಿತ್ರ ತೆರೆಗಪ್ಪಳಿಸಿದಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು ಫ್ಯಾನ್ಸ್ ಫಸ್ಟ್ ಡೇ 'ಕಾಟೇರ'ನ ಆರ್ಭಟ ನೋಡೋಕೆ ಕಾತರದಿಂದ ಕಾಯುತ್ತಿದ್ದಾರೆ. ಡೈರೆಕ್ಟರ್ ತರುಣ್ ಸುಧೀರ್ ನಿರ್ದೇಶನದ ಹಳ್ಳಿ ಸೊಗಡಿನ 'ಕಾಟೇರ'ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ದರ್ಶನ್ ಹೊಸ ಅವತಾರದಲ್ಲಿ ಅಭಿನಯಿಸುತ್ತಿದ್ದು, ಹಾಗೆಯೇ ಹಲವಾರು ಘಟಾನುಘಟಿ ಕಲಾವಿದರು ಕಾಟೇರ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಸಾಂಗ್ಸ್, ಟ್ರೇಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದೀಗ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದು, ಒಂದಷ್ಟು ಬದಲಾವಣೆಗಳನ್ನು ಹೇಳಿದ್ದು ಅದಕ್ಕೆಲ್ಲಾ ಒಪ್ಪಿ ಚಿತ್ರತಂಡ ಯು/ಎ ಸರ್ಟಿಫಿಕೇಟ್ ಪಡೆದಿದೆ. ಇದೀಗ 'ಕಾಟೇರ' ಚಿತ್ರದ ಸೆನ್ಸಾರ್ ಕಾಪಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#Kaatera is certified U/A 🤗
Get ready for the mass festival! Just a week's time before we see you at the cinemas ♥️#KaateraStormFromDec29
Challenging🌟 @dasadarshan @RocklineEnt @TharunSudhir @Aradhanaa_r @harimonium @aanandaaudio#KaateraTrailer #DBoss #Darshan pic.twitter.com/a8ZbycHoRv
— RocklineEnt (@RocklineEnt) December 22, 2023
ಇದನ್ನೂ ಓದಿ: Kaatera: ರಿಲೀಸ್ಗೂ ಮುನ್ನವೇ 'ಕಾಟೇರ' ಆರ್ಭಟ.. ಅಡ್ವಾನ್ಸ್ ಬುಕಿಂಗ್ನಲ್ಲಿ ಗಳಿಸಿದ್ದೆಷ್ಟು?
ಇತ್ತೀಚೆಗೆ ಕಾಟೇರ ಚಿತ್ರದ ಟ್ರೇಲರ್ನಲ್ಲಿದ್ದ ಡೈಲಾಗ್ವೊಂದರ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಡೈಲಾಗ್ ಅನ್ನು ಸಿನಿಮಾದಲ್ಲಿ ಬದಲಿಸಲಾಗಿದೆ. ಇನ್ನು ಸನ್ನಿವೇಶವೊಂದರಲ್ಲಿ ವ್ಯಕ್ತಿಯ ತಲೆಯನ್ನು ಕಡಿಯುವ ದೃಶ್ಯದ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು ಚಿತ್ರತಂಡ ಅದನ್ನು ಬದಲಿಸಿದೆ. ಮತ್ತೆ ಕೈ ಕತ್ತರಿಸುವ ದೃಶ್ಯವನ್ನು ಸಹ ತೆಗೆಯಲಾಗಿದೆ. ಮತ್ತೊಂದು ದೃಶ್ಯದಲ್ಲಿ ಧಾರಾಕಾರವಾಗಿ ರಕ್ತ ಹರಿಯುವ ಸನ್ನಿವೇಶಕ್ಕೆ ಕತ್ತರಿ ಹಾಕಲಾಗಿದೆ.
ಒಂದು ಪದವನ್ನು ಕತ್ತರಿಸಲು ಸೂಚಿಸಿದ್ದು ಸೂಕ್ತ ಕಾರಣ ಕೊಟ್ಟು ಅದನ್ನು ಚಿತ್ರತಂಡ ಉಳಿಸಿಕೊಂಡಿದ್ದು, ಇನ್ನು ಧೂಮಪಾನ, ಪ್ರಾಣಿ ಬಲಿ ಸನ್ನಿವೇಶಕ್ಕೆ ಡಿಸ್ಕ್ಲಮೇರ್ ಹಾಕುವನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ. ಅದಕ್ಕೆ ಚಿತ್ರತಂಡ ಒಪ್ಪಿಕೊಂಡಿದ್ದು ಚಿತ್ರಕ್ಕೆ ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಸೆನ್ಸಾರ್ ಕಾಪಿಯಲ್ಲಿ ಚಿತ್ರದ ರನ್ಟೈಮ್ ಕೂಡ ರಿವೀಲ್ ಆಗಿದೆ. 'ಕಾಟೇರ' ಚಿತ್ರದ ರನ್ಟೈಮ್ 183 ನಿಮಿಷಗಳಾಗಿದ್ದು, ಅಂದ್ರೆ 3 ಗಂಟೆ 3 ನಿಮಿಷ ಎನ್ನುವುದು ಗೊತ್ತಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.