ಬೆಳ್ಳಿತೆರೆಯ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ..!

ತಲೈವಿ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸಿದ ನಂತರ, ಕಂಗನಾ ರನೌತ್ ಮುಂಬರುವ ಚಿತ್ರದಲ್ಲಿ ಇನ್ನೊಬ್ಬ ರಾಜಕೀಯ ನಾಯಕಿಯ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬರಲಿರುವ ರಾಜಕೀಯ ಚಿತ್ರದಲ್ಲಿ ಕಂಗನಾ ರನೌತ್ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ.

Last Updated : Jan 30, 2021, 09:18 AM IST
  • ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬರಲಿರುವ ರಾಜಕೀಯ ಚಿತ್ರದಲ್ಲಿ ಕಂಗನಾ ರನೌತ್ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ.
  • ಪ್ರಸ್ತುತ ಭಾರತದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಅರ್ಥಮಾಡಿಕೊಳ್ಳಲು ನನ್ನ ಪೀಳಿಗೆಗೆ ಸಹಾಯ ಮಾಡುತ್ತದೆ ”ಎಂದು ಕಂಗನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ಬೆಳ್ಳಿತೆರೆಯ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ..! title=

ನವದೆಹಲಿ: ತಲೈವಿ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸಿದ ನಂತರ, ಕಂಗನಾ ರನೌತ್ ಮುಂಬರುವ ಚಿತ್ರದಲ್ಲಿ ಇನ್ನೊಬ್ಬ ರಾಜಕೀಯ ನಾಯಕಿಯ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬರಲಿರುವ ರಾಜಕೀಯ ಚಿತ್ರದಲ್ಲಿ ಕಂಗನಾ ರನೌತ್ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಬೆಳವಣಿಗೆಯನ್ನು ಧೃಡಪಡಿಸಿರುವ ಕಂಗನಾ,ಈ ಚಲನಚಿತ್ರವು ಜೀವನಚರಿತ್ರೆಯಾಗುವುದಿಲ್ಲ ಆದರೆ ಆಪರೇಷನ್ ಬ್ಲೂ ಸ್ಟಾರ್ ಮತ್ತು ದಿ ಎಮರ್ಜೆನ್ಸಿ ಸೇರಿದಂತೆ ಭಾರತೀಯ ರಾಜಕೀಯ ಇತಿಹಾಸದ ಮಹತ್ವದ ಕ್ಷಣಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ಇಂದಿರಾ ಗಾಂಧಿಯವರ ಮೊಮ್ಮಗಳು, ಬಿಜೆಪಿಯ ಅಘೋಷಿತ ವಕ್ತಾರರ ಹಾಗೆ ಅಲ್ಲ -ಪ್ರಿಯಾಂಕಾ ಗಾಂಧಿ

'ಹೌದು, ನಾವು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ.ಇದು ಇಂದಿರಾ ಗಾಂಧಿಯವರ ಜೀವನಚರಿತ್ರೆಯಲ್ಲ. ಇದು ಗ್ರ್ಯಾಂಡ್ ಪೀರಿಯಡ್ ಚಿತ್ರ. ನಿಖರವಾಗಿ ಹೇಳುವುದಾದರೆ, ಇದು ರಾಜಕೀಯ ನಾಟಕವಾಗಿದ್ದು, ಪ್ರಸ್ತುತ ಭಾರತದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಅರ್ಥಮಾಡಿಕೊಳ್ಳಲು ನನ್ನ ಪೀಳಿಗೆಗೆ ಸಹಾಯ ಮಾಡುತ್ತದೆ ”ಎಂದು ಕಂಗನಾ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಗನಾ ರನೌತ್ (Kangana Ranaut) ಅವರು ಇಂದಿರಾ ಗಾಂಧಿಯವರ ಪಾತ್ರವನ್ನು ಎದುರು ನೋಡುತ್ತಿದ್ದಾರೆ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ರಾಜಕೀಯ ನಾಯಕರ ಪಾತ್ರದಲ್ಲಿ ಅನೇಕ ಪ್ರಮುಖ ನಟರು ಈ ಚಿತ್ರದ ಭಾಗವಾಗಲಿದ್ದಾರೆ" ಎಂದು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಮೆಂಟಲ್ ಹೈ ಕ್ಯಾ' ಅಂತಿರೋ ಕಂಗನಾ ರಾವತ್ ನಿಜವಾಗ್ಲೂ ಮೆಂಟಲ್ ಆಗಿದಾಳಾ?

ಈ ಚಿತ್ರದ ಹೊರತಾಗಿ ಕಂಗನಾ ಧಕಾಡ್ ಮತ್ತು ತೇಜಸ್ ನಂತಹ ಚಲನಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆಕ್ಷನ್ ಥ್ರಿಲ್ಲರ್ ದಕಾದ್ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಪ್ರಸ್ತುತ ಭೋಪಾಲ್‌ನಲ್ಲಿದ್ದಾರೆ.ಈ ತಿಂಗಳ ಆರಂಭದಲ್ಲಿ, ಅವರು ಮಣಿಕರ್ನಿಕಾ ಫ್ರ್ಯಾಂಚೈಸ್‌ನ ಎರಡನೇ ಕಂತು ಮಣಿಕರ್ನಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಎಂಬ ಶೀರ್ಷಿಕೆಯನ್ನು ಪ್ರಕಟಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News