Kangana Ranaut into politics : ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದು, ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇಂದು ಬೆಳಗ್ಗೆ ದ್ವಾರಕೆಗೆ ಭೇಟಿ ನೀಡಿದ ನಟಿ ಶ್ರೀಕೃಷ್ಣನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಹೌದು... ದ್ವಾರಕಾಧೀಶನ ದರ್ಶನಕ್ಕೆ ಬಂದಿದ್ದ ನಟಿ ಕಂಗನಾಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಅಂತ ಸುದ್ದಿಗಾರರು ಪ್ರಶ್ನೆ ಮಾಡಿದ್ದರು. ಆಗ ಅವರು ʼಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಹೋರಾಡುತ್ತೇನೆʼ ಎಂದು ಪರೋಕ್ಷವಾಗಿ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದರು.. ಅಲ್ಲದೆ, 600 ವರ್ಷಗಳ ಸುದೀರ್ಘ ಹೋರಾಟದ ನಂತರ ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಮುಂದಾಗಿರುವ ಬಿಜೆಪಿ ಪಕ್ಷದ ನಡೆಯನ್ನು ನಟಿ ಶ್ಲಾಘಿಸಿದರು.
ಇದನ್ನೂ ಓದಿ:BBK 10: ಬಿಗ್’ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ನಿಜವಾದ ವಿದ್ಯಾರ್ಹತೆ ಏನು ಗೊತ್ತಾ?
ಬಿಜೆಪಿ ಸರ್ಕಾರದ ಪ್ರಯತ್ನದಿಂದ ಭಾರತೀಯರಾದ ನಮಗೆ 600 ವರ್ಷಗಳ ಹೋರಾಟದ ನಂತರ ಈ ಸುದಿನವನ್ನು ನಾವು ನೋಡುತ್ತಿದ್ದೇವೆ. ನಾವು ಬಹಳ ಸಂಭ್ರಮದಿಂದ ಮಂದಿರವನ್ನು ಸ್ಥಾಪಿಸುತ್ತೇವೆ. ಸನಾತನ ಧರ್ಮದ ಧ್ವಜವನ್ನು ವಿಶ್ವದಾದ್ಯಂತ ಹಾರಿಸಬೇಕಾಗಿದೆ ಎಂದು ಕಂಗನಾ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು.
ಅಲ್ಲದೆ, ಸಮುದ್ರದಡಿಯಲ್ಲಿ ಮುಳುಗಿರುವ ಕಳೆದುಹೋದ ದ್ವಾರಕಾ ನಗರದ ಅವಶೇಷಗಳನ್ನು ಯಾತ್ರಾರ್ಥಿಗಳಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸುವ ಸೌಲಭ್ಯವನ್ನು ರಚಿಸುವಂತೆ ರಣಾವತ್ ಸರ್ಕಾರವನ್ನು ಒತ್ತಾಯಿಸಿದರು. ನಾನು ಯಾವಾಗಲೂ ದ್ವಾರಕಾ ದಿವ್ಯ ನಗರಿ ಎಂದು ಹೇಳುತ್ತೇನೆ. ಇಲ್ಲಿ ಎಲ್ಲವೂ ಅದ್ಭುತವಾಗಿದೆ. ದ್ವಾರಕಾಧೀಶ ಪ್ರತಿ ಕಣದಲ್ಲಿಯೂ ಇದ್ದಾನೆ. ನಾವು ಅವನ ದರ್ಶನ ಪಡೆದದಾಗ ಧನ್ಯರಾಗುತ್ತೇವೆ ಎಂದರು.
ಇದನ್ನೂ ಓದಿ:ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿಯ ಸ್ಪೆಷಲ್ ಪೋಸ್ಟರ್: Kiccha 47
ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರವು ಮೇಲಿನಿಂದ ಕೂಡ ಗೋಚರಿಸುತ್ತದೆ, ನೀರಿನೊಳಗೆ ಹೋಗಿ ಅವಶೇಷಗಳನ್ನು ನೋಡಬಹುದಾದಂತಹ ಸೌಲಭ್ಯವನ್ನು ಸರ್ಕಾರ ಭಕ್ತರಿಗೆ ನೀಡಬೇಕು ಎಂದು ನಾನು ಕೋರುತ್ತೇನೆ. ನನಗೆ ಕೃಷ್ಣ ನಗರವು ಸ್ವರ್ಗದಂತೆ ಎಂದರು. ಇನ್ನು ರಣಾವತ್ ನಟನೆ ತೇಜಸ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಮೊದಲ ಬಾರಿಗೆ ಕಂಗನಾ ನಿರ್ದೇಶಿಸಿರುವ ʼಎಮರ್ಜೆನ್ಸಿʼ ಸಿನಿಮಾ ಶಿರ್ಘದಲ್ಲೇ ತೆರೆಗೆ ಬರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.