ನಮ್ಮ ಕುಟುಂಬದ ಭಾಷೆ ಕನ್ನಡ ಎಂದ ಸೂಪರ್ ಸ್ಟಾರ್ ರಜನಿಕಾಂತ್!

ಮೊನ್ನೆಯಷ್ಟೆ ರಾಜ್ ಕುಮಾರ್ ಭೇಟಿಯ ಸಂದರ್ಭವನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದ ಅವರು, ಇಂದು ಮತ್ತೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ರಜಿನಿ ಸಿನಿಮಾ ಅವಕಾಶಕ್ಕಾಗಿ ತಮ್ಮ ಗುರು ಕೆ.ಬಾಲಚಂದರ್ ಮೊದಲ ಭೇಟಿಯನ್ನು ಹಂಚಿಕೊಂಡರು.

Last Updated : Dec 30, 2017, 11:43 AM IST
ನಮ್ಮ ಕುಟುಂಬದ ಭಾಷೆ ಕನ್ನಡ ಎಂದ ಸೂಪರ್ ಸ್ಟಾರ್ ರಜನಿಕಾಂತ್! title=

ಚೆನ್ನೈ : ತಮಿಳುಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತೊಮ್ಮೆ ಕನ್ನಡತನ, ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ. 

ಮೊನ್ನೆಯಷ್ಟೆ ರಾಜ್ ಕುಮಾರ್ ಭೇಟಿಯ ಸಂದರ್ಭವನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದ ಅವರು, ಇಂದು ಮತ್ತೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ರಜಿನಿ ಸಿನಿಮಾ ಅವಕಾಶಕ್ಕಾಗಿ ತಮ್ಮ ಗುರು ಕೆ.ಬಾಲಚಂದರ್ ಮೊದಲ ಭೇಟಿಯನ್ನು ಹಂಚಿಕೊಂಡರು.

'ನಾನು ಕಲಿತಿದ್ದು ಕನ್ನಡದಲ್ಲಿ, ಬೆಳೆದಿದ್ದು ಕರ್ನಾಟಕದಲ್ಲಿ. ನಾನು, ನನ್ನ ಕುಟುಂಬದವರು ಕನ್ನಡಿಗರು. ನನ್ನ ಕುಟುಂಬ, ಸಹೋದರರು ಕನ್ನಡದವರಾಗಿ ಬಾಳುತ್ತಿದ್ದಾರೆ. ನನಗೆ ಆರಂಭದಲ್ಲಿ ಸ್ಪಷ್ಟವಾಗಿ ತಮಿಳು ಭಾಷೆ ಬರುತ್ತಿರಲಿಲ್ಲ. ಆದರೆ ತಮಿಳು ಚಿತ್ರರಂಗ ತಮಿಳು ಕಲಿಯುವಂತೆ ಮಾಡಿತು. ಮೊದಲ ಬಾರಿಗೆ ಗುರುಗಳಾದ ಕೆ.ಬಾಲಚಂದರ್ ಅವರನ್ನು ಭೇಟಿ ಮಾಡಿ, ನನಗೆ ತಮಿಳು ಬರುವುದಿಲ್ಲ. ಇಂಗ್ಲಿಷ್ ಕೂಡ ಬರುವುದಿಲ್ಲ. ನಾನು ಕನ್ನಡದವನು, ಪಾಲಿಕೆ ಶಾಲೆಯಲ್ಲಿ  ಕನ್ನಡ ಮಾಧ್ಯಮದಲ್ಲೇ ಓದಿದ್ದು. ನನ್ನ ಕುಟುಂಬದವರು ಕನ್ನಡಿಗರು. ಕನ್ನಡದವರಾಗಿ ಬಾಳುತ್ತಿದ್ದಾರೆ' ಎಂದೆ. ಪರವಾಗಿಲ್ಲ ಕನ್ನಡದಲ್ಲಿಯೇ ಅಭಿನಯ ಪ್ರದರ್ಶಿಸು' ಎಂದು ಹೇಳಿದರು. 

ಅಭಿನಯ ಮಾಡಿದ ನಂತರ ಮೆಚ್ಚಿಕೊಂಡ ಅವರು ತಮಿಳು ಕಲಿಯುವಂತೆ ಸಲಹೆ ನೀಡಿದರು. ಅವರ ಮಾರ್ಗದರ್ಶನದಲ್ಲಿ ತಮಿಳು ಕಲಿತು 'ತಮಿಳಿನವನಾಗಿ' ನಿಮ್ಮೆಲ್ಲರ ದಯೆಯಿಂದ ಸೂಪರ್ 'ಸ್ಟಾರ್ ಕೂಡ ಆದೆ' ಎಂದು ಅಭಿಮಾನಿಗಳ ಜತೆ ಸಂವಾದದ ವೇಳೆ ತಿಳಿಸಿದರು. 

''ನನ್ನ ಕುಟುಂಬದ ಭಾಷೆ ಕನ್ನಡ, ಕನ್ನಡವೇ ನಮ್ಮ ಮನೆ ಭಾಷೆ. ನಾನು, ನನ್ನ ಸಹೋದರರು ಕನ್ನಡದಲ್ಲಿಯೇ ಮಾತನಾಡುತ್ತೇವೆ. ತಮಿಳನ್ನು ಈಗಲೂ ನಿರರ್ಗಳವಾಗಿ ಮಾತನಾಡಲು ಬರಲ್ಲ. ಆದ್ರೆ ಪರ್ಫೆಕ್ಟ್ ಆಗಿ ತಮಿಳು ಚಿತ್ರದಲ್ಲಿ ಅಭಿನಯಿಸುತ್ತೇನೆ. ನನ್ನ ಆರೋಗ್ಯ ಹದಗೆಟ್ಟಿತ್ತು. ಆದರೆ ನಿಮ್ಮೆಲ್ಲರ ಹಾರೈಕೆಯಿಂದ ನನಗೆ ಮರುಜೀವ ಸಿಕ್ಕಿದೆ. ಅಭಿಮಾನಿಗಳು ತೋರಿದ ಪ್ರೀತಿಗೆ ನಾನು ಚಿರಋಣಿ" ಎಂದು ರಜನಿಕಾಂತ್ ಭಾವುಕರಾಗಿ ಹೇಳಿದರು. 

Trending News