400 ಎಪಿಸೋಡ್ ಗಳನ್ನು ಪೂರೈಸಿದ ಸತ್ಯ, ಫ್ಯಾನ್ಸ್ ಗಳಂತೂ ಫುಲ್ ಖುಷ್...!

ಸೈಲೆಂಟ್‌ ಆಗಿ ಸೈಡಲ್ಲಿದ್ದ ಬಿಡಿ ಈ ಸತ್ಯ ಬಂದ್ಮೇಲೆ ಅವಳದ್ದೇ ಹವಾ...ಈ ಟೈಟಲ್‌ ಟ್ರ್ಯಾಕ್‌ ಕೇಳಿದ್ರೆ ಈಗ್ಲೂ ಮೈ ಜುಮ್‌ ಅನ್ನತ್ತೆ.. ಏನ್ರಿ ನಮ್‌ ಸತ್ಯಾ ಹವಾ..ಸಖತ್‌ ಜೋರ್ ಇದೆ ರೀ.. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಧಾರವಾಹಿ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡ್ತಾನೇಯಿದೆ.. ನಮ್‌ ಸತ್ಯ ಅದೇಷ್ಟೊ ಹೆಣ್ಣ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾಳೆ.

Written by - CHARITHA PATEL | Edited by - Manjunath N | Last Updated : Jun 24, 2022, 05:57 PM IST
  • ಹೌದು, ನಮ್‌ ಹೆಣ್ಣು ಹುಲಿ ಸತ್ಯಾಳ ಆಟಿಟ್ಯೂಡ್‌, ಖದರ್‌, ಪಂಚಿಂಗ್‌ ಡೈಲಾಗ್‌ ನೋಡಿ ಅದೆಷ್ಟೋ ಹುಡುಗಿಯರು ಫಿದಾ ಆಗಿ..
  • ಇದ್ರೆ ಸತ್ಯಾಳ ತರ ಇರ್ಬೆಕು ಅಂತಿದ್ದಾರೆ..
  • ಇನ್ನೂ ಗಂಡೈಕ್ಳು ಏನ್‌ ಕಡಿಮೆಯಿಲ್ಲ ಸತ್ಯಾಳ ಸ್ಟೈಲ್‌ ನೋಡಿ ದಿಲ್‌ ಖುಷ್‌ ಆಗಿದ್ದಾರೆ.
400 ಎಪಿಸೋಡ್ ಗಳನ್ನು ಪೂರೈಸಿದ ಸತ್ಯ, ಫ್ಯಾನ್ಸ್ ಗಳಂತೂ ಫುಲ್ ಖುಷ್...! title=

ಬೆಂಗಳೂರು: ಸೈಲೆಂಟ್‌ ಆಗಿ ಸೈಡಲ್ಲಿದ್ದ ಬಿಡಿ ಈ ಸತ್ಯ ಬಂದ್ಮೇಲೆ ಅವಳದ್ದೇ ಹವಾ...ಈ ಟೈಟಲ್‌ ಟ್ರ್ಯಾಕ್‌ ಕೇಳಿದ್ರೆ ಈಗ್ಲೂ ಮೈ ಜುಮ್‌ ಅನ್ನತ್ತೆ.. ಏನ್ರಿ ನಮ್‌ ಸತ್ಯಾ ಹವಾ..ಸಖತ್‌ ಜೋರ್ ಇದೆ ರೀ.. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸತ್ಯ ಧಾರವಾಹಿ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡ್ತಾನೇಯಿದೆ.. ನಮ್‌ ಸತ್ಯ ಅದೇಷ್ಟೊ ಹೆಣ್ಣ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾಳೆ..ಸತ್ಯಾ ಧಾರವಾಹಿ ಆರಂಭವಾದಾಗ ಇದಕ್ಕೆ ಸಾಕಷ್ಟು ನೆಗೆಟಿವ್‌ ಕಮೆಂಟ್‌ಗಳು ಹಾಗೂ ಟ್ರೋಲ್‌ಗಳು ಬಂದಿದ್ದವು, ಒಬ್ಬ ಹೆಣ್ಣು ಮಗಳು ಹೀಗೆಲ್ಲಾ ಇರಲಿಕ್ಕೆ ಸಾಧ್ಯನಾ ಎನ್ನುವ ಪ್ರಶ್ನೆಗಳು ಎಲ್ಲರಲ್ಲೋ ಮೂಡಿದ್ದವು..ಆದ್ರೆ ಕಥೆ ಸಾಗ್ತಾ ಸಾಗ್ತಾ ಜನ ಸತ್ಯಾಳಿಗೆ ಉಘೇ ಉಘೇ ಎಂದರು.

ಇದನ್ನೂ ಓದಿ: ರಕ್ಷಿತ್‌ ಶೆಟ್ಟಿಯನ್ನ ನಟ ಕಿಚ್ಚ ಸುದೀಪ್ ಅಪ್ಪಿಕೊಂಡಿದ್ದು ಯಾಕೆ..?

ಹೌದು, ನಮ್‌ ಹೆಣ್ಣು ಹುಲಿ ಸತ್ಯಾಳ ಆಟಿಟ್ಯೂಡ್‌, ಖದರ್‌, ಪಂಚಿಂಗ್‌ ಡೈಲಾಗ್‌ ನೋಡಿ ಅದೆಷ್ಟೋ ಹುಡುಗಿಯರು ಫಿದಾ ಆಗಿ..ಇದ್ರೆ ಸತ್ಯಾಳ ತರ ಇರ್ಬೆಕು ಅಂತಿದ್ದಾರೆ.. ಇನ್ನೂ ಗಂಡೈಕ್ಳು ಏನ್‌ ಕಡಿಮೆಯಿಲ್ಲ ಸತ್ಯಾಳ ಸ್ಟೈಲ್‌ ನೋಡಿ ದಿಲ್‌ ಖುಷ್‌ ಆಗಿದ್ದಾರೆ.No description available.

ಇನ್ನೂ ಸತ್ಯಾ ಧಾರವಾಹಿಯಲ್ಲಿ ನಮ್‌ ಅಮುಲ್‌ ಬೇಬಿ ಹಾಗೂ ಸತ್ಯಾ ಲವ್‌ ಸ್ಟೋರಿ ಒಂಥಾರ ಚೆನ್ನಾಗಿತ್ತು..ಬಳಿಕ ಸಾಕಷ್ಟು ಟ್ವಿಸ್ಟ್‌ ಅಂಡ್‌ ಟರ್ನ್‌ಗಳ ನಂತ್ರ ಇವರಿಬ್ಬರ ಮದುವೆಯಾಗಿದೆ.. ಪಾಪ ಇಷ್ಟು ದಿನ ಟಾಮ್‌ಬಾಯ್‌ ಆಗಿದ್ದ ಸತ್ಯ ಲುಕ್‌ವೈಸ್‌ ಅಂತೂ ಕಂಪ್ಲೀಟ್‌ ಚೇಂಚ್‌ ಆಗಿದ್ದಾಳೆ..ಈಗ ಸತ್ಯಾ ಕಥೆಯಂತೂ ಸೀರೆಯನ್ನು ಉಡಲು ಕೂಡ ಹರಸಾಹಸ ಪಡುವಂತಾಗಿದೆ.. ಸತ್ಯಾಳ ತಂದೆ ಅವ್ಳು ಯಾವುದೇ ಕಷ್ಟ ಅನುಭವಿಸಬಾರದು ಹುಡುಗನ ರೀತಿ ಬೆಳೆಯಬೇಕು ಎಂಬ ಕನಸು ಇರತ್ತೆ.. ಅವಳು ಕೂಡ ಅದೇ ರೀತಿ ಅವ್ಳು ಬೆಳಿತಾಳೆ ಕೂಡಾ.. ಆದ್ರೆ ಮದುವೆಯ ನಂತ್ರ ಸತ್ಯ ಕೊಂಚ ಕೊಂಚವಾಗಿ ಚೇಂಚ್‌ ಆಗ್ತಾ ಬರ್ತಿದಾಳೆ.. ಸತ್ಯಾಳನ್ನು ಬಿಟ್ಟಿರದ ಅಮುಲ್‌ಬೇಬಿ ಈಗ ಸತ್ಯಾಳನ್ನ ನೋಡಿದ್ರೆ ಉರಿದು ಬೀಳುತ್ತಾನೆ..

ಇದನ್ನೂ ಓದಿ: ಹೇಗಿದೆ ಗೊತ್ತಾ ‘ವಿಕ್ರಾಂತ್ ರೋಣ’ ಟ್ರೈಲರ್‌..? ಹಾಲಿವುಡ್‌ ಲೆವೆಲ್‌ ಅಂದ್ರು ಫ್ಯಾನ್ಸ್..!

ಸದ್ಯ ಎಲ್ಲಡೆ ತನ್ನದೆ ಆದ ಹವಾ ಸೃಷ್ಟಿಸಿರುವ ಸತ್ಯ ಧಾರವಾಹಿ ತಂಡ ಮಾತ್ರ ಸಖತ್‌ ಖುಷಿಯಲ್ಲಿದೆ.. ಎಸ್‌ ಇದಕ್ಕೆ ಕಾರಣ ಈಗ ಸತ್ಯಾ ಧಾರವಾಹಿ ಬರೋಬ್ಬರಿ 400 ಎಪಿಸೋಡ್‌ಗಳನ್ನ ಕಂಪ್ಲೀಟ್‌ ಮಾಡಿ ಫುಲ್‌ ಖುಷ್‌ನಲ್ಲಿದೆ.. ತಾವು ಇಷ್ಟು ದಿನ ಪಟ್ಟ ಶ್ರಮಕ್ಕೆ ಒಂದು ಮಟ್ಟಿಗೆ ಯಶಸ್ಸು ಸಿಕ್ಕಂತಾಗಿದೆ.. ಸದ್ಯ ಈ ಸಂತಸವನ್ನು ಅದು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದೆ.

ಇನ್ನೂ ಧಾರವಾಹಿಯ ಕಥೆ ಬಗ್ಗೆ ಹೇಳೊದಾದ್ರೆ ಸೀರಿಯಲ್‌ನಲ್ಲಿ ಸತ್ಯಾ ಯಶ್‌ ಫ್ಯಾನ್‌ ಆಗಿರ್ತಾಳೆ..ಹಾಗೂ ಗ್ಯಾರೆಜ್‌ನಲ್ಲಿ ಕೆಲಸ ಮಾಡ್ತಾ ತನ್ನದೆ ಒಂದು ಗ್ಯಾಂಗ್‌ ಕಟ್ಟಿಕೊಂಡು ತಪ್ಪು ಮಾಡಿವರಿಗೆ ಬೈದು ಬುದ್ದಿ ಹೇಳುತ್ತಿರುತ್ತಾಳೆ, ಮಾತು ಕೇಳದವರಿಗೆ ಎರಡು ಗುನ್ನ ಕೊಡುವುದರ ಮೂಲಕ ಸರಿ ಮಾಡುವ ಕೆಲಸ ಮಾಡುತ್ತಿದ್ದರು, ಈಗ ಜನರು ಹಳೆಯ ಸತ್ಯಾಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ ಜನರಂತೂ ಸತ್ಯಾಳ ಹೊಸ ಅವತಾರಕ್ಕೆ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.No description available.

ಈ ಧಾರವಾಹಿ ಆರಂಭವಾದಾಗಿನಿಂದ ಹಿಡಿದೂ ಇಲ್ಲಿಯವೆರೆಗೆ ಯಾವತ್ತೂ ಬೋರ್ ಮಾಡಿಲ್ಲ..ಹಾಗೂ ಹಾಗೂ ಟಾಪ್‌ ಲೀಸ್ಟ್‌ನಿಂದ ಕೂಡಾ ಎಂದು ಮಿಸ್‌ ಆಗಿಲ್ಲ.. ಸ್ವಪ್ನ ಕೃಷ್ಣ ಅವ್ರ ನಿರ್ದೇಶನದಲ್ಲಿ ಮೂಡಿ ಬರ್ತಾಯಿರುವ ಈ ಕಥೆ ಮುಂದೆಯೂ ಕೂಡಾ ಹೀಗೆ ಸಾಗುತ್ತಿರಲಿ ಎನ್ನುವುದು ನಮ್ಮೆಲ್ಲರ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News