ನಕಲಿ ‘ಕೊರೊನಾ’ ರಿಪೋರ್ಟ್ ಕೊಟ್ಟ ಆರೋಪ - ನಾಲ್ಕು ಜನರ ಬಂಧನ

ಚಿಬಾಬಾಯಿ 72 ಗಂಟೆ ಅವಧಿಯಲ್ಲಿ 2 ಕಡೆ ಕೊರೊನಾ ಟೆಸ್ಟ್ (Corona test) ಮಾಡಿಸಿದ್ದ. ಜಯನಗರದ ಎಸ್.ಆರ್.ಲ್ಯಾಬ್​ನಲ್ಲಿ  ಪಾಸಿಟಿವ್ ವರದಿ ನೀಡಲಾಗಿತ್ತು. ಹೀಗಾಗಿ ಏರ್‌ಪೋರ್ಟ್‌ ರಸ್ತೆಯ ಸಿಂಜಿನ್‌ ಲ್ಯಾಬ್‌ನಿಂದ ನಕಲಿ ನೆಗೆಟಿವ್ ವರದಿ ಪಡೆದಿದ್ದ ಆರೋಪ ಚಿಬಾಬಾಯಿ ವಿರುದ್ಧ ಇತ್ತು. 

Written by - Zee Kannada News Desk | Last Updated : Dec 13, 2021, 09:54 AM IST
  • ಚಿಬಾಬಾಯಿ 72 ಗಂಟೆ ಅವಧಿಯಲ್ಲಿ 2 ಕಡೆ ಕೊರೊನಾ ಟೆಸ್ಟ್ (Corona test) ಮಾಡಿಸಿದ್ದ. ಜಯನಗರದ ಎಸ್.ಆರ್.ಲ್ಯಾಬ್​ನಲ್ಲಿ ಪಾಸಿಟಿವ್ ವರದಿ ನೀಡಲಾಗಿತ್ತು. ಹೀಗಾಗಿ ಏರ್‌ಪೋರ್ಟ್‌ ರಸ್ತೆಯ ಸಿಂಜಿನ್‌ ಲ್ಯಾಬ್‌ನಿಂದ ನಕಲಿ ನೆಗೆಟಿವ್ ವರದಿ ಪಡೆದಿದ್ದ ಆರೋಪ ಚಿಬಾಬಾಯಿ ವಿರುದ್ಧ ಇತ್ತು.
ನಕಲಿ ‘ಕೊರೊನಾ’ ರಿಪೋರ್ಟ್ ಕೊಟ್ಟ ಆರೋಪ - ನಾಲ್ಕು ಜನರ ಬಂಧನ  title=
ಆಫ್ರಿಕನ್ ಪ್ರಜೆಗೆ ನಕಲಿ ವರದಿ ಕೊಟ್ಟ ಆರೋಪ (file photo)

ಬೆಂಗಳೂರು : ನಕಲಿ ಕೊರೊನಾ ರಿಪೋರ್ಟ್ (fake corona report) ಕೊಟ್ಟ ಆರೋಪದ ಮೇಲೆ ನಾಲ್ವರನ್ನು ಸೆರೆ ಹಿಡಿಯಲಾಗಿದೆ. ದಕ್ಷಿಣ ಆಫ್ರಿಕಾದ ಮಹೇಂದ್ರ ಚಿಬಾಬಾಯಿ ಎಂಬಾತ ಏರ್‌ಪೋರ್ಟ್‌ ರಸ್ತೆಯ ಸಿಂಜಿನ್‌ ಲ್ಯಾಬ್‌ನಿಂದ ನಕಲಿ ನೆಗೆಟಿವ್ ವರದಿ (fake negetive report) ತಂದು ಎಸ್ಕೇಪ್ ಆಗಿದ್ದ ಆರೋಪ ಕೇಳಿಬಂದಿತ್ತು.

ಪ್ರಕರಣ ಬೆನ್ನತ್ತಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಲ್ಯಾಬ್‌ನ ಕಿಂಗ್‌ಪಿನ್‌ ಮನೋಜ್, ರವೀಂದ್ರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಸ್ವ್ಯಾಬ್‌ ಪಡೆದು ನಕಲಿ ನೆಗೆಟಿವ್ (fake report) ವರದಿ ಕೊಟ್ಟಿರುವ ಆರೋಪದಡಿ ಇವರನ್ನೆಲ್ಲಾ ಬಂಧಿಸಲಾಗಿದೆ. ಆರೋಪಿಗಳನ್ನ ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು (high ground police) ಸದ್ಯ ವಿಚಾರಣೆ ನಡಸುತ್ತಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಕಾನೂನು ವಿವಿಯ ಸರ್ವಾಧಿಕಾರಿ ಧೋರಣೆ ಖಂಡಿಸಿ ವಿದ್ಯಾರ್ಥಿಗಳಿಂದ ಸುವರ್ಣ ಸೌಧ ಚಲೋ

ನಕಲಿ ರಿಪೋರ್ಟ್..?
ಚಿಬಾಬಾಯಿ 72 ಗಂಟೆ ಅವಧಿಯಲ್ಲಿ 2 ಕಡೆ ಕೊರೊನಾ (Coronavirus) ಟೆಸ್ಟ್ ಮಾಡಿಸಿದ್ದ. ಜಯನಗರದ ಎಸ್.ಆರ್.ಲ್ಯಾಬ್​ನಲ್ಲಿ (S.R Lab) ಪಾಸಿಟಿವ್ ವರದಿ ನೀಡಲಾಗಿತ್ತು. ಹೀಗಾಗಿ ಏರ್‌ಪೋರ್ಟ್‌ ರಸ್ತೆಯ ಸಿಂಜಿನ್‌ ಲ್ಯಾಬ್‌ನಿಂದ ನಕಲಿ ನೆಗೆಟಿವ್ ವರದಿ ಪಡೆದಿದ್ದ ಆರೋಪ ಚಿಬಾಬಾಯಿ ವಿರುದ್ಧ ಇತ್ತು. ನವೆಂಬರ್ 20ರಂದು ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಯನ್ನ ಪರೀಕ್ಷೆ ಮಾಡಿದಾಗ ಏರ್‌ಪೋರ್ಟ್‌ನಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ 14 ದಿನ ಕ್ವಾರಂಟೈನ್‌ (quarantine)  ಮಾಡಲಾಗಿತ್ತು. ಆದರೆ, ನಕಲಿ ರಿಪೋರ್ಟ್‌ ತೋರಿಸಿ ನವೆಂಬರ್ 27ರಂದು ದೇಶ ಬಿಟ್ಟಿದ್ದ.

ಇದಾದ ಬಳಿಕ ದಕ್ಷಿಣ ಆಫ್ರಿಕಾದ ಮಹೇಂದ್ರ ಚಿಬಾಬಾಯಿಗೆ ‘ಒಮಿಕ್ರಾನ್’ (Omicron) ಇರುವುದು ಕನ್ಫರ್ಮ್ ಆಗಿತ್ತು. ಆದರೆ ಅಷ್ಟರಲ್ಲೇ ಆತ ನಕಲಿ ರಿಪೋರ್ಟ್ ತೋರಿಸಿ ದೇಶ ಬಿಟ್ಟು ಎಸ್ಕೇಪ್ ಆಗಿದ್ದ. ಹೀಗಾಗಿ ಆಫ್ರಿಕಾ ಪ್ರಜೆ ಸೇರಿದಂತೆ ಬೆಂಗಳೂರಿನ ಖಾಸಗಿ ಹೋಟೆಲ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಇದನ್ನೂ ಓದಿ : ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಕನಿಷ್ಠ 10 ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕೊರೊನಾ ಧೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News