ಬೆಂಗಳೂರು: ಚಂದನವನದ 'ಅಂಬಿ'ಗನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಅಕ್ಷರಶಃ ಅನಾಥವಾಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಇಂದು ನಮ್ಮೊಂದಿಗಿಲ್ಲ ಎಂಬ ಕಹಿ ಸತ್ಯವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗಿದೆ.
ಅಂಬರೀಶ್ ಅವರ ಕೊನೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿಯೊಂದಿಗೆ ನಟಿಸಿದ್ದ ಕಿಚ್ಚ ಸುದೀಪ್ ಅಂಬಿ ಮಾಮನ ಜತೆಗಿನ ಒಡನಾಟ ನೆನೆದು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಕೆಲವೊಮ್ಮೆ ದುಃಸ್ವಪ್ನ ಬಿದ್ದಾಗ, ''ಎದ್ದೇಳೋಣ.. ಎದ್ದರೆ ಕೆಟ್ಟ ಕನಸು ಕೊನೆಗೊಳ್ಳುತ್ತದೆ'' ಅಂತ ಭಾವಿಸುತ್ತೀವಲ್ಲಾ.. ಈ ದಿನವೂ ಹಾಗೆಯೇ..
ಚಿತ್ರಜಗತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ. ದೊಡ್ಡ ಲೆಜೆಂಡ್ ಅನ್ನು ನಾವು ಕಳೆದುಕೊಂಡಿದ್ದೇವೆ. ಓರ್ವ ನಾಯಕ, ಪೋಷಕ, ಮಾರ್ಗದರ್ಶಕ, ಒಂದು ಧ್ವನಿ, ಶಕ್ತಿ, ಒಬ್ಬ ಒಳ್ಳೆಯ ಗೆಳೆಯ, ಸಹೃದಯಿಯನ್ನು ನಾವು ಕಳೆದುಕೊಂಡಂತಾಗಿದೆ.
ಈ ಸುದ್ದಿ ಹೃದಯವನ್ನೇ ಛಿದ್ರಗೊಳಿಸಿದೆ... ಆದರೆ ಈ ರೀತಿಯ ಲೆಜೆಂಡ್ ನಿದ್ರೆಯನ್ನು ನೋಡಿದ ಹೃದಯ ಭಾರವಾಗಿದೆ. ನಮಗೆಲ್ಲ ಅವರ ವ್ಯಕ್ತಿತ್ವದ ಪರಿಚಯವಿದೆ. ಅವರು ಒಬ್ಬ ಡೈನಾಮಿಕ್ ವ್ಯಕ್ತಿಯಂತೆ ಕಂಡರೂ, ಪ್ರತಿಯೊಂದು ಸ್ಥಳದಲ್ಲಿ ಅವರಿಗಿದ್ದ ಗೌರವವನ್ನು ನಾವು ನೋಡಿದ್ದೇವೆ. ಯಾವುದೇ ಗಡಿ ಇಲ್ಲದೆ, ರಾಜನ ಹಾಗೆ ಬದುಕಿದ ವ್ಯಕ್ತಿ ಅಂಬರೀಶ್.
ಅವರೊಬ್ಬ ಅದೃಷ್ಟವಂತ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಏಕೆಂದರೆ ಅವರನ್ನು ಇಷ್ಟ ಪಡದವರು ಯಾರೂ ಇರಲಿಲ್ಲ. ಯಾರೊಬ್ಬರೂ ಅವರನ್ನು ದ್ವೇಷಿಸುತ್ತಿರಲಿಲ್ಲ. ಹೋದಲ್ಲೆಲ್ಲಾ ಸ್ನೇಹ ಸಂಪಾದಿಸುತ್ತಿದ್ದ ವ್ಯಕ್ತಿ. ವೈರಿಗಳೇ ಇಲ್ಲದೇ ಕೇವಲ ಸ್ನೇಹಿತರನ್ನು ಮಾತ್ರ ಹೊಂದಿರುವುದು ಹೇಗೆ ಎಂಬುದೇ ನಿಗೂಢ.
ನಿಖರವಾಗಿ ಹೇಳಬೇಕೆಂದರೆ ಅವರೊಬ್ಬ ಅಪರೂಪದ ವ್ಯಕ್ತಿ. ಕೆಲವು ಘಟನೆಗಳು ಮತ್ತು ಕೆಲವು ಸನ್ನಿವೇಶಗಳು ಎಂದಿಗೂ ಕೊನೆಗೊಳ್ಳಬಾರದು ಎಂದು ಕೊಳ್ಳುತ್ತೇವೆ. "ಕೆಲವು ಸಂದರ್ಭಗಳನ್ನು ನಾನು ರಿವೈಂಡ್ ಮಾಡಿಕೊಳ್ಳಲು ಇಷ್ಟ ಪಡುತ್ತೇನೆ. ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ... ಅಂಬರೀಶ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಚಿತ್ರರಂಗದಲ್ಲಿ ಮೊದಲ ಶಾಟ್ ಎದುರಿಸಿದ ಕ್ಷಣಕ್ಕೆ ಹೋಗಬೇಕೆಂದು ಅನಿಸುತ್ತದೆ. ಮೊಟ್ಟ ಮೊದಲ ಬಾರಿಗೆ ನಾನು ಅವರು ನೋಡಿದ ಕ್ಷಣಕ್ಕೆ ಹಿಂದಿರುಗಬೇಕೆಂಬ ಆಶಯವಿದೆ. ಶಿವಮೊಗ್ಗದಲ್ಲಿ ಮನೆಯ ಬೆಲ್ ಸದ್ದಾದ ಕೂಡಲೇ ಬಾಗಿಲು ತೆರೆಯಲು ಹೋದಾಗ ಬಿಳಿ ಕುರ್ತಾ ಧರಿಸಿ ಬಂದಿದ್ದ ಅಂಬಿ ಮಾಮನನ್ನು ಕಂಡಿದ್ದೆ. ನನ್ನ ಹಿಂದೆ ಬಂದ ನನ್ನ ತಂದೆ 'ಒಳಗೆ ಬಾರಯ್ಯ ಅಂಬಿ' ಎಂದಿದ್ದರು".
ಮಿಸ್ ಯು ಮಾಮಾ.
ದೀಪು
It really hurts. ...... pic.twitter.com/YmQZeB7LEx
— Kichcha Sudeepa (@KicchaSudeep) November 25, 2018
— Kichcha Sudeepa (@KicchaSudeep) November 25, 2018
ಹೀಗೆ ಅಂಬಿ ಮಾಮನನ್ನು ಉದ್ದೇಶಿಸಿ ಕಿಚ್ಚ ಬರೆದಿರುವ ಪತ್ರ ಓದುಗರನ್ನು ಭಾವುಕರನ್ನಾಗಿಸುತ್ತದೆ.