Kirik keerthi on Om Prakash : ಬಿಗ್ ಬಾಸ್ ಸೀನಸ್ 4ರಲ್ಲಿ ಖ್ಯಾತಿಯ ಕಿರಿಕ್ ಕೀರ್ತಿಗೆ ಸಂಬಂಧಿಸಿದ ಹಲವಾರು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚಿಗೆ ಕೀರ್ತಿ ಆತ್ಮಹತ್ಯೆ ವಿಡಿಯೋ ಸದ್ದು ಮಾಡಿತ್ತು, ಅಲ್ಲದೆ, ಅವರ ವಯಕ್ತಿಕ ವಿಚಾರಗಳ ಕುರಿತು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಈ ಮಧ್ಯ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಅವರ ಕುರಿತು ಕೀರ್ತಿ ಹೇಳಿರುವ ಮಾತುಗಳು ಚರ್ಚೆಗೆ ಕಾರಣವಾಗಿವೆ.
ಹೌದು.. ನೇರ ಮಾತುಗಳಿಂದ ಸದಾ ವಿವಾದಕ್ಕೆ ಸಿಲುಕಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತಿರುವ ಕೀರ್ತಿ ವಯಕ್ತಿಕ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಅವರು ತಮ್ಮ ಪತ್ನಿಗೆ ಡೈವೋಸ್ ನೀಡಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ನಿರ್ದೇಶಕ ಓಂ ಪ್ರಕಾಶ್ ತಮ್ಮ ಮುಂಬರುವ ಸಿನಿಮಾ ʼಕಿರಿಕ್ ಕೀರ್ತಿ' ಬಿಡುಗಡೆಗೆ ತಡ ಯಾಕಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ಅವರು, ಕೀರ್ತಿ ವಿರುದ್ಧ ಅರೋಪ ಮಾಡಿದ್ದರು. ಸದ್ಯ ಓಂ ಆರೋಪಕ್ಕೆ ಕೀರ್ತಿ ವಿಡಿಯೋ ಮೂಲಕ ಸ್ಪಷ್ಟತೆ ನೀಡಿದ್ದಾರೆ.
ಇದನ್ನೂ ಓದಿ: ಬ್ಯಾಡ್ ಮ್ಯಾನರ್ಸ್ ಅಂತ ಸಖತ್ ಸೌಂಡ್ ಮಾಡುತ್ತಿದ್ದಾರೆ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್..!
ವಿಡಿಯೋದಲ್ಲಿ, ಗೌರವಾನ್ವಿತ ಓಂ ಪ್ರಕಾಶ್ ಸರ್ ಅವರೇ ಸಿನಿಮಾ ಯಾಕೆ ನಿಂತ್ತು ಹೋಯ್ತು? ನಾನ್ ಯಾಕೆ ಸಿನಿಮಾದಿಂದ ಹೊರಗೆ ಬಂದೆ? ಮೊದಲ ಹೀರೋಯಿನ್ ಸಿನಿಮಾದಿಂದ ಯಾಕೆ ಹೊರ ಹೋದಳು? ಫೋಟೋಶೂಟ್ ದಿನ ಏನಾಯ್ತು? ಬಿಗ್ ಬಾಸ್ ಮೈಸೂರು ಈವೆಂಟ್ ದಿನ ಏನ್ ಗಲಾಟೆ ಆಯ್ತು? ಅಲ್ಲಿಂದ ಫಸ್ಟ್ ಹೀರೋಯಿನ್ ಯಾಕೆ ಬಿಟ್ಟು ಹೋದಳು? ಆಮೇಲೆ ಸೆಂಕೆಂಡ್ ಹೀರೋಯಿನ್ ಹೆಂಗ್ ಸೆಲೆಕ್ಟ್ ಆದಳು? ಸ್ಕ್ರಿಪ್ಟ್‌ಗೆಂದು ಮೈಸೂರಿನಲ್ಲಿ ರೂಮ್ ಹಾಕಿದ್ರಿ ಅಲ್ವಾ ಅದಾದ ಮೇಲೆ ಸೆಕೆಂಡ್ ಹೀರೋಯಿನ್ ಸಿನಿಮಾದಿಂದ ಯಾಕೆ ಬಿಟ್ಟು ಹೋದಳು? ಆಮೇಲೆ ನಾನು ನಿಮಗೆ ಏನು ಹೇಳಿ ಹೊರ ಬಂದೆ? ಸಿನಿಮಾದಿಂದ ಕಿರಿಕ್ ಕೀರ್ತಿ ಯಾಕೆ ಹೊರ ಬಂದಾ? ಇದೆಲ್ಲಾ ಚರ್ಚೆ ಮಾಡಬೇಕು ಅಂದ್ರೆ ಒಂದು ಸಲ ಕುಳಿತುಕೊಳ್ಳೋಣ ನೇರಾ ನೇರಾ ಲೈವ್‌ನಲ್ಲಿ..
ಸಿನಿಮಾದಿಂದ ಯಾರು ಹೊರ ಬಂದರು ಸಿನಿಮಾದಿಂದ ಯಾರನ್ನು ತೆಗೆದು ಹಾಕಿದರು ಅಂತ ಮಾತನಾಡಬಹುದು. ಸಿನಿಮಾ ಯಾಕೆ ಅರ್ಧಕ್ಕೆ ನಿಂತು ಹೋಯಿತ್ತು? ಪದೇ ಪದೇ ನಾಯಕಿಯರು ಯಾಕೆ ಬದಲಾಗುತ್ತಾರೆ? ಇದರ ಬಗ್ಗೆ ದಯವಿಟ್ಟು ಮಾತಾಡೋಣ. ಮುಂಚೆ ಯಾರು ಏನೇ ಮಾತನಾಡಿದ್ದರೂ ನಾನು ರಿಪ್ಲೈ ಕೊಡುತ್ತಿರಲಿಲ್ಲ ಅಂದ್ರೆ ಕೀರ್ತಿ ಇನ್ನು ಕುಗ್ಗಿ ಹೋಗಿದ್ದಾನೆ ಅಂತ ಮಾತನಾಡಿಕೊಳ್ಳುತ್ತಾರೆ. ಸತ್ಯ ಹೇಳುವುದಕ್ಕೆ ನಾನು ರೆಡಿಯಾಗಿರುವೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.