Lal Salaam: ರಜನಿಕಾಂತ್‌ ʻಲಾಲ್‌ ಸಲಾಂʼ ಗ್ರಾಸ್‌ ಕಲೆಕ್ಷನ್‌ ಎಷ್ಟು? ಓಟಿಟಿ ರಿಲೀಸ್‌ ಯಾವಾಗ?

Lal Salaam Update: ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಂ ಚಿತ್ರಕ್ಕೆ ಈಗಾಗಲೇ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಓಟಿಟಿ ರಿಲೀಸ್‌ ಯಾವಾಗ  ಎಂಬುದರ ಬಗ್ಗೆ ಚರ್ಚೆ ನಡೆಯುತ್ತಾ ಇದೆ. ಹಾಗಾದ್ರೆ ಈ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಓಟಿಟಿ ರಿಲೀಸ್‌ ಯಾವಾಗ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.  

Written by - Zee Kannada News Desk | Last Updated : Feb 12, 2024, 02:44 PM IST
  • ಧಾರ್ಮಿಕ ಸಾಮರಸ್ಯ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದ್ದು, ಹಾಗೆಯೇ ಬಹಳ ದಿನಗಳ ಬಳಿಕ ಐಶ್ವರ್ಯ ರಜನಿಕಾಂತ್ ಈ ಸಿನಿಮಾ ಕಟ್ಟಿಕೊಟ್ಟಿದ್ದರು.
  • ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದ್ದು, ಚಿತ್ರಕಥೆ ಹಿನ್ನೆಡೆಗೆ ಕಾರಣವಾಗಿದೆ.
  • ಸದ್ಯ 'ಲಾಲ್ ಸಲಾಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದ್ದು, ನೆಟ್‌ಫ್ಲಿಕ್ಸ್‌ ಸಂಸ್ಥೆ ಸಿನಿಮಾದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ.
Lal Salaam: ರಜನಿಕಾಂತ್‌ ʻಲಾಲ್‌ ಸಲಾಂʼ ಗ್ರಾಸ್‌ ಕಲೆಕ್ಷನ್‌ ಎಷ್ಟು? ಓಟಿಟಿ ರಿಲೀಸ್‌ ಯಾವಾಗ?  title=

Lal Salaam Gross Collection: ಕಾಲಿವುಡ್‌ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಲಾಲ್ ಸಲಾಂ' ಸಿನಿಮಾ ಇದೇ ಫೆಬ್ರವರಿ 9 ರಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ.ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದರಲ್ಲೂ ಆಂಧ್ರ, ತೆಲಂಗಾಣದಲ್ಲಿ ಹೀನಾಯವಾಗಿ ಸೋಲುಂಡಿದೆ. ತಮಿಳುನಾಡಿನಲ್ಲಿಯೂ ಸಹ ಸಿನಿಮಾಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಕಾರಣಕ್ಕೆ  ಪ್ರೇಕ್ಷಕರ ಬರ ಎದುರಿಸುವಂತಾಗಿದೆ. ಧಾರ್ಮಿಕ ಸಾಮರಸ್ಯ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದ್ದು, ಹಾಗೆಯೇ ಬಹಳ ದಿನಗಳ ಬಳಿಕ ಐಶ್ವರ್ಯ ರಜನಿಕಾಂತ್ ಈ ಸಿನಿಮಾ ಕಟ್ಟಿಕೊಟ್ಟಿದ್ದರು. 

'ಲಾಲ್ ಸಲಾಂ' ಚಿತ್ರದಲ್ಲಿ ಕ್ರಿಕೆಟ್ ಜೊತೆ ಜೊತೆಗೆ ಹಿಂದೂ- ಮುಸ್ಲಿಂ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿ ತೆರೆಗೆ ತರಲಾಗಿದ್ದು, ಇದರಲ್ಲಿ ಮುಸ್ಲಿಂ ಸಮುದಾಯದ ನಾಯಕನಾಗಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಕೀ ರೋಲ್ ಪ್ಲೇ ಮಾಡಿರುವ ರಜನಿಕಾಂತ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುವ ಪ್ರಯತ್ನ ಮಾಡಿದ್ದಾರೆ. ಒಂದೊಳ್ಳೆ ಸಂದೇಶ ಸಾರುವ ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದ್ದು, ಚಿತ್ರಕಥೆ ಹಿನ್ನೆಡೆಗೆ ಕಾರಣವಾಗಿದೆ. 

ಇದನ್ನೂ ಓದಿ: ನಟಿ ಶ್ರೀಲೀಲಾ ಡಯೆಟ್ ಪ್ಲಾನ್..‌ ಫಿಗರ್‌ ಮೈಂಟೇನ್ ಮಾಡೋಕೆ ಏನು ತಿನ್ನೋದು ಗೊತ್ತಾ?

 'ಲಾಲ್ ಸಲಾಂ' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ ವರ್ಲ್ಡ್‌ವೈಡ್ ಕೇವಲ 22 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, ಅಷ್ಟೇನು ನಿರೀಕ್ಷೆ ಮೂಡಿಸದ ಈ ಚಿತ್ರಕ್ಕೆ ಮೊದಲ ದಿನದಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಭಾನುವಾರ ಕೂಡ  ಸಿನಿಪ್ರಿಯರು ಚಿತ್ರವನ್ನು ವೀಕ್ಷಿಸಲು ಹಿಂದೇಟು ಹಾಕಿದ್ದರು. ಈ ಸಿನಿಮಾದಲ್ಲಿ ರಜನಿಕಾಂತ್ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ತಮ್ಮ ಪರ್ಫಾರ್ಮನ್ಸ್ ಮೂಲಕ ವಿಕ್ರಾಂತ್, ವಿಶಾಲ್ ಇಬ್ಬರನ್ನು ಮರೆಸಿಬಿಟ್ಟಿದ್ದಾರೆ. ಆದರೂ ರಜಿನಿಕಾಂತ್‌ನ  ಭಾಯ್ ಪಾತ್ರ, ಅತಿಥಿ ಪಾತ್ರ ಎಂದು ಬಿಂಬಿಸಿದ್ದೇ ಚಿತ್ರದ ಹಿನ್ನೆಡೆಗೆ ಕಾರಣ ಎನ್ನುವವರು ಇದ್ದಾರೆ. 

ಸದ್ಯ 'ಲಾಲ್ ಸಲಾಂ' ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದ್ದು, ನೆಟ್‌ಫ್ಲಿಕ್ಸ್‌ ಸಂಸ್ಥೆ ಸಿನಿಮಾದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಈ ಚಿತ್ರ ತೆರೆಕಂಡ 45 ದಿನಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದವಾಗಿದ್ದು, ಆದರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ತಿಂಗಳಿಗೂ ಮೊದಲೇ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಒಂದೇ ಲೆಕ್ಕದಲ್ಲಿ ಮಾರ್ಚ್ ಮೊದಲ ವಾರವೇ ಸ್ಮಾಲ್‌ ಸ್ಕ್ರೀನ್‌ಗಳಲ್ಲಿ ಮೊಯ್ದೀನ್ ಭಾಯ್ ಆರ್ಭಟ ಶುರುವಾಗುವ ನಿರೀಕ್ಷೆಯಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News