ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..'ಅಹೋ ವಿಕ್ರಮಾರ್ಕ' ಸಿನಿಮಾದ ಸಾಂಗ್‌ ರಿಲೀಸ್‌..!

Aho Vikramarka: ಮಗಧೀರ  ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್‌ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ. ರಾಮ್‌ ಚರಣ್‌ ಹಾಗೂ ಕಾಜಲ್‌ ಅಗರ್‌ವಾಲ್‌ ಟನೆಯ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು, ಈ ಸಿನಿಮಾದಲ್ಲಿ ವಿಲನ್‌ ಆಗಿ ನಟಿಸಿದ್ದ ವಿಲನ್‌ ಪಾತ್ರವನ್ನು ಪ್ರೇಕ್ಷಕರು ಕೊಂಡಾಡಿದ್ದರು " ನಾಕು ದಕ್ಕನಿದಿ ಎವರಿಕಿ ದಕ್ಕನಿವ್ವನು" ಎನ್ನುವ ವಿಲನ್‌ನ ಈ ಡೈಲಾಗ್‌ ಇಂದಿಗೂ ಹಲವರ ಬಾಯಲ್ಲಿ ಕೇಳಬಹುದು.  

Written by - Zee Kannada News Desk | Last Updated : Aug 8, 2024, 11:44 AM IST
  • ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಇದೀಗ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರ ಕೊಟಿದ್ದಾರೆ
  • ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ.
  • ಸಂಗೀತ ನಿರ್ದೇಶಕ ರವಿ ಬಸ್ರೂರು ಮೀನಾಕ್ಷಿ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್‌ ಕೊಟ್ಟರು.
ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಬ್ಬರಿಸಲು ಮುಂದಾದ ʻಮಗಧೀರʼ ವಿಲನ್‌..'ಅಹೋ ವಿಕ್ರಮಾರ್ಕ' ಸಿನಿಮಾದ ಸಾಂಗ್‌ ರಿಲೀಸ್‌..! title=

Aho Vikramarka: ಮಗಧೀರ  ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್‌ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ. ರಾಮ್‌ ಚರಣ್‌ ಹಾಗೂ ಕಾಜಲ್‌ ಅಗರ್‌ವಾಲ್‌ ಟನೆಯ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು, ಈ ಸಿನಿಮಾದಲ್ಲಿ ವಿಲನ್‌ ಆಗಿ ನಟಿಸಿದ್ದ ವಿಲನ್‌ ಪಾತ್ರವನ್ನು ಪ್ರೇಕ್ಷಕರು ಕೊಂಡಾಡಿದ್ದರು " ನಾಕು ದಕ್ಕನಿದಿ ಎವರಿಕಿ ದಕ್ಕನಿವ್ವನು" ಎನ್ನುವ ವಿಲನ್‌ನ ಈ ಡೈಲಾಗ್‌ ಇಂದಿಗೂ ಹಲವರ ಬಾಯಲ್ಲಿ ಕೇಳಬಹುದು.

ರಣದೇವ್ ಬಿಲ್ಲಾ ಎನ್ನುವ  ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಇದೀಗ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರ ಕೊಟಿದ್ದಾರೆ, ವಿಲನ್‌ ಆಗಿ ಪ್ರೇಕ್ಷಕರ ಮನ ಗೆದ್ದಿದ್ದ ಈತ ಇದೀಗ ಹೀರೋ ಆಗಿ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. 'ಅಹೋ ವಿಕ್ರಮಾರ್ಕ' ಸಿನಿಮಾದಲ್ಲಿ ದೇವ್ ಗಿಲ್ ನಾಯಕನಟನಾಗಿ ನಟಿಸುತ್ತಿದ್ದು, ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರ ಈಗಾಗಲೆ ಭರದಿಂದ ಸಾಗುತ್ತಿದ್ದು, ಚಿತ್ರದ ಮತ್ತೊಂದು ಹಾಡು ಇದೀಗ ರಿಲೀಸ್‌ ಆಗಿದೆ.

ಅಹೋ ವಿಕ್ರಮಾರ್ಕ ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ಈ ಚಿತ್ರ ಕನ್ನಡಲ್ಲಿಯೂ ರಿಲೀಸ್‌ ಆಗಲಿದ್ದು, ಬೆಂಗಳುರಿನ ಊರ್ವಶಿ ಚಿತ್ರಮಂದಿರದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಮೀನಾಕ್ಷಿ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್‌ ಕೊಟ್ಟರು.

ಇದನ್ನೂ ಓದಿ: 'ಪೆಪೆ' ಸಿನಿಮಾದ ಹೊಸ ಹಾಡಿಗೆ ಅಭಿಮಾನಿಗಳು ಫಿದಾ..! ಹೇಗಿದೆ ಗೊತ್ತಾ ಜೇನು ಕುರುಬ ಸಾಂಗ್..?

ಪ್ರಚಾರದ ವೇಳೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ದೇವ್ ಗಿಲ್ ಅವರನ್ನು ಸಿನಿಮಾದಲ್ಲಿ ನೋಡಿದಾಗ ಭಯವಾಗಿತ್ತು. ಆದರೆ ಅವರು ನಮ್ಮ ಮನೆಗೆ ಬಂದು ನನ್ನೊಂದಿಗೆ ಮಾತನಾಡಿದಾಗ ಅವರ ಸರಳತೆ ಹಾಗೂ ವಿನಯತೆ ನನಗೆ ತುಂಬಾ ಇಷ್ಟವಾಯ್ತು. ಸಿನಿಮಾದ ಮೇಲೆ ದೇವ್‌ ಗಿಲ್‌  ಅವರಿಗೆ ತುಂಬಾನೇ ಪ್ರೀತಿ ಇದೆ. ಥಿಯೇಟರ್ ನಲ್ಲಿ ಅಹೋ ವಿಕ್ರಮಾರ್ಕ್  ಚಿತ್ರ ಬೇರೆ ರೀತಿಯ ಅನುಭವ ನೀಡಲಿದೆ ಎಲ್ಲರೂ ತಪ್ಪದೆ ಸಿನಿಮಾ ನೋಡಿ ಎಂದರು. 

ಇನ್ನೂ ಚಿತ್ರದ ನಾಯಕ ದೇವಗಿಲ್ ಮಾತನಾಡಿ, ಮೊದಲಿನಿಂದಲೂ ನಮ್ಮ ಸಿನಿಮಾಗಳಿಗೆ ಜನರು ಪ್ರೀತಿ ಹಾಗೂ ಬೆಂಬಲ ನೀಡುತ್ತಿದ್ದೀರಾ. ಈಗ ಅಹೋ ವಿಕ್ರಮಾರ್ಕ ಚಿತ್ರಕ್ಕೂ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಹೇಳಿದ್ದಾರೆ. 

ಈ ಚಿತ್ರದ ಹೊಸ ಹಾಡು ರಿಲೀಸ್‌ ಆಗಿದ್ದು, ಮೀನಾಕ್ಷಿ ಎಂಬ ಈ ಹಾಡಿನಲ್ಲಿ ನಟ ದೇವಗಿಲ್ ಹಾಗೂ ನಾಯಕಿ ಚಿತ್ರ ಶುಕ್ಲಾ ಸಕತ್‌ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಗೀಚಿದ್ದು, ಈ ಹಾಡಿಗೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ, ಮನೀಶ್ ದಿನಕರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. 

ಅಹೋ ವಿಕ್ರಮಾರ್ಕ ಸಿನಿಮಾಗೆ ನಿರ್ದೇಶಕ ತ್ರಿಕೋಟಿ ಆಕ್ಷನ್ ಕಟ್ ಹೇಳಿದ್ದು, ಪ್ರವೀಣ್ ತಾರ್ಡೆ, ತೇಜಸ್ವಿನಿ ಪಂಡಿತ್, ಪೋಸಾನಿ ಮುರಳಿ ಕೃಷ್ಣ, ಬಿಟ್ಟಿರಿ ಸತ್ತಿ, ಸಯಾಜಿ ಶಿಂಧೆ, ಕಾಲಕೇಯ ಪ್ರಭಾಕರ್, ವಿಕ್ರಮ್ ಶರ್ಮಾ ತಾರಾಬಳಗದಲ್ಲಿದಲ್ಲಿದ್ದಾರೆ.ಆರತಿ ದೇವಿಂದರ್ ಗಿಲ್,  ಮೀಹಿರ್ ಕುಲಕರ್ಣಿ, ಅಶ್ವಿನಿ ಕುಮಾರ್ ಮಿಶ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News