800 Movie : '800' ಚಲನಚಿತ್ರವು ಲೆಜೆಂಡರಿ ಕ್ರಿಕೆಟಿಗ, ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಜೀವನ ಆಧಾರಿತ ಸಿನಿಮಾ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 800 ವಿಕೆಟ್ಗಳನ್ನು ಪಡೆದ ಏಕೈಕ ಬೌಲರ್. ಈ ಸಿನಿಮಾವನ್ನು ಎಂಎಸ್ ಶ್ರೀಪತಿ ನಿರ್ದೇಶಿಸಿದ್ದಾರೆ. ಬೂಕರ್ ಪ್ರಶಸ್ತಿ (2022) ವಿಜೇತ ಶೆಹನ್ ಕರುಣಾತಿಲಕ ಸ್ಕ್ರಿಪ್ಟ್ ಬರೆದಿದ್ದಾರೆ. ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾದ 800 ಚಿತ್ರವನ್ನು ಶ್ರೀದೇವಿ ಮೂವೀಸ್ ಮುಖ್ಯಸ್ಥ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಾಣಮಾಡಿದ್ದಾರೆ.
ಅಕ್ಟೋಬರ್ 6 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾದ '800' ಚಿತ್ರ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. OTT ಪ್ಲಾಟ್ಫಾರ್ಮ್ 'ಜಿಯೋ ಸಿನಿಮಾ' '800' ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಡಿಸೆಂಬರ್ 2 ರಿಂದ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ.
ಇದನ್ನೂ ಓದಿ:ಖ್ಯಾತ ಗಾಯಕನೊಂದಿಗೆ ಮೃಣಾಲ್ ಠಾಕೂರ್ ಡೇಟಿಂಗ್!
'800' ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಸಿಂಹಳ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಮಯದಲ್ಲಿ ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಆದರೆ... ನಿರೀಕ್ಷೆಯಂತೆ ಆದಾಯ ಗಳಿಸಲಿಲ್ಲ. ಈ ಕಾರಣದಿಂದಾಗಿ, ಹೆಚ್ಚಿನ ಜನರು Jio OTT ಯಲ್ಲಿ ಈ ಚಿತ್ರವನ್ನು ವೀಕ್ಷಿಸುವ ಸಾಧ್ಯತೆ ಇದೆ.
கிரிக்கெட் உலகை புரட்டி போட்ட #MuthiahMuralidaran என்னும் மாமனிதனின் உண்மை கதை.
டிசம்பர் 2 முதல் #800 திரைப்படத்தை #JioCinema-வில் இலவசமாய் காணுங்கள்#800onJioCinema@Murali_800 @Mahima_Nambiar #MadhurrMittal @MovieTrainMP pic.twitter.com/as03GoaPyn
— JioCinema (@JioCinema) November 14, 2023
'800' ಚಿತ್ರದಲ್ಲಿ 'ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ಮಧುರ್ ಮಿತ್ತಲ್ ಮುರಳೀಧರನ್ ಮತ್ತು ಮಹಿಮಾ ನಂಬಿಯಾರ್ ಮುರಳೀಧರನ್ ಅವರ ಪತ್ನಿ ಮಡಿ ಮಲಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ ನಟ ಶರತ್ ಲೋಹಿತಾಶ್ವ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಟು ಪೂಜಾ ಹೆಗ್ಡೆ.. ಈ ಸೌತ್ ಬ್ಯೂಟಿಸ್ ವಿದ್ಯಾರ್ಹತೆ ಏನು ಗೊತ್ತಾ?
ಚಿತ್ರ ಬಿಡುಗಡೆಗೂ ಮುನ್ನ ಮುತ್ತಯ್ಯ ಮುರಳೀಧರನ್ ಅವರು '800' ಕೇವಲ ಕ್ರಿಕೆಟ್ಗೆ ಸಂಬಂಧಿಸಿದ್ದ ಸಿನಿಮಾ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಬದುಕಿನ ವಿಷಯಗಳ ಕಥೆ ಅಂತ ಹೇಳಿಕೊಂಡಿದ್ದರು. ಇದು ಅವರ ಬಾಲ್ಯದಲ್ಲಿ ಶ್ರೀಲಂಕಾದಲ್ಲಿ ತಮಿಳರ ಮೇಲಿನ ದಾಳಿ ಮತ್ತು ಅವರ ಕ್ರಿಕೆಟ್ ವೃತ್ತಿಜೀವನದ ಕುರಿತು ದಂತಕಥೆಯಾಗಿದೆ.
ಈ ಹಿಂದೆ ವಿಜಯ್ ಸೇತುಪತಿ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ... ತಮಿಳುನಾಡಿನ ಇದಕ್ಕೆ ಕೆಲವರ ವಿರೋಧ ವ್ಯಕ್ತವಾದ ಹಿನ್ನೆಲೆ ಕೈಬಿಟ್ಟಿದ್ದರು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.