ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’!

ಮೂಲತಃ ಇಂಜಿನಿಯರ್ ಆಗಿರುವ ಶ್ರೀಧರ್ ಅವರು ‘ನೈನಾ’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ.

Written by - Malathesha M | Edited by - Puttaraj K Alur | Last Updated : Mar 8, 2022, 04:33 PM IST
  • ಹೊಸಬರ ‘ನೈನಾ’ ಸಿನಿಮಾ ಮತ್ತೊಮ್ಮೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ
  • ಫ್ಯಾಮಿಲಿ ಓರಿಯಂಟೆಡ್ ‘ನೈನಾ’ ಸಿನಿಮಾವನ್ನು ಮೆಚ್ಚಿಕೊಂಡ ಪ್ರೇಕ್ಷಕರು
  • ಮಹಿಳಾ ದಿನಾಚರಣೆ ಪ್ರಯುಕ್ತ BIFFES-2022ನಲ್ಲಿ ಮತ್ತೊಮ್ಮೆ ಪ್ರದರ್ಶನ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’! title=
‘ನೈನಾ’ ಸಿನಿಮಾವನ್ನು ಮೆಚ್ಚಿಕೊಂಡ ಪ್ರೇಕ್ಷಕರು

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(Bengaluru International Film Festival)ದಲ್ಲಿ ಮೊದಲು ಪ್ರದರ್ಶನಗೊಂಡು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿರುವ ಹೊಸಬರ ‘ನೈನಾ’ ಸಿನಿಮಾ ಮತ್ತೊಮ್ಮೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಮೂಲತಃ ಇಂಜಿನಿಯರ್ ಆಗಿರುವ ಶ್ರೀಧರ್ ಅವರು ಈ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ‘ನೈನಾ’(Naina Cinema)ದಲ್ಲಿ ಬಹುಭಾಷಾ ನಟಿ ಗೌರಿ ನಾಯರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ನೇಹಾ ಐತಾಳ್, ‘ಮಜಾ ಭಾರತ’ ಖ್ಯಾತಿಯ ಪಲ್ಟಿ ಗೋವಿಂದ್, ಕೆಜಿಎಫ್ ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪವರ್‌ ಸ್ಟಾರ್‌ ಪುನೀತ್‌ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!‌

ಸಾಮಾನ್ಯ ವರ್ಗದ ಮಹಿಳೆಯ ಮನಸ್ಥಿತಿ ಮತ್ತು ಪರಿಸ್ಥಿತಿ, ಜೀವನದ ಸತ್ಯಾಸತ್ಯತೆಯ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ‘ನೈನಾ’ ಚಿತ್ರ(Naina  Film)ಕ್ಕೆ ಕಲ್ಕಿ ಅಭಿಷೇಕ್ ಸಂಗೀತ ನೀಡಿದ್ದು, ಸುಮಂತ್ ರೈ ನಟನೆ ಜೊತೆಗೆ ಎಡಿಟಿಂಗ್ ಕೆಲಸ ನಿರ್ವಹಿಸಿದ್ದಾರೆ. ಪ್ರದೀಪ್ ಪಿ ಬಂಗಾರಪೇಟೆ ಅವರ ಕ್ಯಾಮೆರಾ ಕೈಚಳಕದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ.  

ಇಂದು ಅಂದರೆ ಮಾರ್ಚ್ 8ರ ಮಂಗಳವಾರ ಮಹಿಳಾ ದಿನಾಚರಣೆ(International Women's Day) ಪ್ರಯುಕ್ತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(BIFFES-2022)ದಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳಲು ‘ನೈನಾ’ ಸಿನಿಮಾ ಆಯ್ಕೆಯಾಗಿದೆ.

ಇದನ್ನೂ ಓದಿ: Women's day special: ಬಾಲಿವುಡ್ ತಾರೆಯಾಗಲು ಬಂದವಳು ಮಾಫಿಯಾ ಕ್ವೀನ್ ಆದ ನೈಜ ಕಹಾನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News