ಹೆಂಡತಿ ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್

Rocking Star Yash In Dharmashthala: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಸೂರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಐರಾ ಮತ್ತು ಯಥರ್ವ್ ಸಮೇತರಾಗಿ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ (Rocking star Yash) ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

Written by - Yashaswini V | Last Updated : Aug 6, 2024, 01:39 PM IST
  • ಸದ್ಯ ಮತ್ತೊಂದು ಬಾರೀ ಬಜೆಟ್ ಸಿನಿಮಾದಲ್ಲಿ ಯಶ್ ನಟನೆ
  • ಬಾರಿ ಬಜೆಟ್​ನ ಪ್ಯಾನ್​ ಇಂಡಿಯಾ ಸಿನಿಮಾ 'ಟಾಕ್ಸಿಕ್'ನಲ್ಲಿ ನಟ ಯಶ್​ ನಟಿಸುತ್ತಿದ್ದಾರೆ.
  • ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ಹೊಸ ಹೇರ್ ಸ್ಟೈಲ್ ಸದ್ಯ ಸಖತ್ ಟ್ರೆಂಡಿಂಗ್​ನಲ್ಲಿದೆ
ಹೆಂಡತಿ ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್ title=

PAN India star Yash In Dharmashthala: ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್​ (Pan India star actor Yash) ಇಂದು ಪತ್ನಿ ಮತ್ತು ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ನಿಯಮದಂತೆ ಪಂಚೆ, ಶರ್ಟ್​ ಧರಿಸಿ ಸೂರ್ಯ ಶ್ರೀಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ಮಣ್ಣಿನ ಹರಕೆ (Mannina Harake) ಅರ್ಪಿಸಿದ್ದಾರೆ.

 

ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಸೂರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಐರಾ ಮತ್ತು ಯಥರ್ವ್ ಸಮೇತರಾಗಿ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ (Rocking star Yash) ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

 

ಇದನ್ನೂ ಓದಿ- ವಿಶ್ವದ ಶ್ರೀಮಂತ ವ್ಯಕ್ತಿಯ ಮಗನ ಮದುವೆಯಲ್ಲಿ ಸಾಮಾನ್ಯ ಬಸ್ ಡ್ರೈವರ್‌ನ ಮಗ..! ಸಾಧನೆ ಅಂದ್ರೆ ಇದಪ್ಪಾ ಎಂದ ನೆಟ್ಟಿಗರು

ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಯಶ್​ ಕುಟುಂಬ (Yash Family In Dharmashthala) ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಂತರ ಇಬ್ಬರೂ ಕುಳಿತು ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. 

ಇದೇ ವೇಳೆ 'ಟಾಕ್ಸಿಕ್'​ ಚಿತ್ರದ ನಿರ್ದೇಶಕ ವೆಂಕಟ್​ ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಇದನ್ನೂ ಓದಿ- 4 ಕೋಟಿ ಬಂಗಲೆ, ದುಬಾರಿ ಕಾರುಗಳು.. ಕೆಜಿಎಫ್ ಸ್ಟಾರ್ ಯಶ್ ಆಸ್ತಿ ಒಟ್ಟು ಎಷ್ಟು ಕೋಟಿ ಗೊತ್ತಾ?

ಗಮನಾರ್ಹವಾಗಿ, ಕೆಜಿಎಫ್​ ಸಿನಿಮಾದ ಬಳಿಕ ಮತ್ತೊಂದು ಬಾರಿ ಬಜೆಟ್​ನ ಪ್ಯಾನ್​ ಇಂಡಿಯಾ ಸಿನಿಮಾ 'ಟಾಕ್ಸಿಕ್'ನಲ್ಲಿ ನಟ ಯಶ್​ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್​ ಹೆಗಲ ಮೇಲಿದ್ದು, ಚಿತ್ರಕ್ಕಾಗಿ ಹೊಸ ಹೇರ್​ ಸ್ಟೈಲ್​ ನೊಂದಿಗೆ ಸದ್ಯ ಯಶ್​ ಟ್ರೆಂಡಿಂಗ್​ನಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News