'One Breakfast...' ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಪ್ರೀತಿ ಶುರುವಾಗಿದ್ದೇ ಇಲ್ಲಿಂದ.. ಕೊನೆಗೂ ಬಾಯಿಬಿಟ್ಟ ನಟಿ!

Parineeti Chopra - Raghav Chadha: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರೊಂದಿಗೆ ನಿಶ್ಚಿತಾರ್ಥದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಾಘವ್‌ ಜೊತೆ ಪ್ರೀತಿ ಕುಡುಯೊಡೆದ ಸುಂದರ ಸಮಯದ ಬಗ್ಗೆಯೂ ಹೇಳಿದ್ದಾರೆ.   

Written by - Chetana Devarmani | Last Updated : May 22, 2023, 04:53 PM IST
  • ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ
  • ಇಬ್ಬರ ನಡುವೆ ಲವ್‌ ಶುರುವಾಗಿದ್ದೆಲ್ಲಿ?
  • ಕೊನೆಗೂ ಬಾಯಿಬಿಟ್ಟ ಪರಿಣಿತಿ!
'One Breakfast...' ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಪ್ರೀತಿ ಶುರುವಾಗಿದ್ದೇ ಇಲ್ಲಿಂದ.. ಕೊನೆಗೂ ಬಾಯಿಬಿಟ್ಟ ನಟಿ! title=
Parineeti Chopra - Raghav Chadha

Parineeti Chopra - Raghav Chadha love story: ಪರಿಣಿತಿ ಚೋಪ್ರಾ ತನ್ನ ನಿಶ್ಚಿತ ವರ ರಾಘವ್ ಚಡ್ಡಾ ಅವರ ಜೊತೆ ಪ್ರೀತಿ ಶುರುವಾಗಿದ್ದು ಹೇಗೆ ಮತ್ತು ಎಲ್ಲಿ ಎಂದು ಅಂತಿಮವಾಗಿ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ತಾರೆ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರ ಎಂಗೇಜ್‌ಮೆಂಟ್‌ ಮೇ 13 ರಂದು ನವದೆಹಲಿಯಲ್ಲಿ ನಡೆಯಿತು.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಪರಿಣಿತಿ ಶೇರ್‌ ಮಾಡಿದ್ದಾರೆ. ಆ ಒಂದು ಬೆಳಗಿನ ತಿಂಡಿಯಿಂದ ರಾಘವ್‌ ಜೊತೆ ಪ್ರೀತಿ ಕುಡುಯೊಡೆಯಿತು ಎಂದು ಪರಿಣಿತಿ ಹೇಳಿದ್ದಾರೆ. ಅವರ ನಿಶ್ಚಿತಾರ್ಥದ ಸಮಾರಂಭದಿಂದ ಫೋಟೋಗಳ ಸರಣಿಯನ್ನು ಹಂಚಿಕೊಂಡ ಪರಿಣಿತಿ, "ಒಂದು ಬ್ರೇಕ್‌ಫಾಸ್ಟ್‌ನಿಂದ ನಾನು ಒಬ್ಬರನ್ನು ಭೇಟಿಯಾದೆ. ಅತ್ಯಂತ ಅದ್ಭುತ ವ್ಯಕ್ತಿ. ಅವರ ಬೆಂಬಲ, ಹಾಸ್ಯ, ಬುದ್ಧಿ ಮತ್ತು ಸ್ನೇಹವು ಶುದ್ಧ ಸಂತೋಷವಾಗಿದೆ. ಅವರು ನನ್ನ ಮನೆ. ಪ್ರೇಮ, ನಗು, ಭಾವ, ಕುಣಿತಗಳ ನಡುವೆ ಸುಂದರವಾಗಿ ಬಿಚ್ಚಿಕೊಂಡ ಕನಸು! ನಾವು ಅತ್ಯಂತ ಪ್ರಿಯರಾದವರನ್ನು ತಬ್ಬಿ ಸಂಭ್ರಮಿಸಿದಾಗ, ಭಾವೋದ್ವೇಗಗಳು ಉಕ್ಕಿ ಬಂದವು. ರಾಜಕುಮಾರಿಯ ಕಥೆಗಳ ಭಯದಲ್ಲಿರುವ ಪುಟ್ಟ ಹುಡುಗಿಯಾಗಿ, ನನ್ನ ಕಾಲ್ಪನಿಕ ಕಥೆ ಹೇಗೆ ಆರಂಭವಾಗುವುದೆಂದು ನಾನು ಊಹಿಸಿದ್ದೆ. ಈಗ ಅದು ಶುರುವಾಗಿದ್ದು, ನಾನು ಊಹಿಸಿದ್ದಕ್ಕಿಂತಲೂ ಉತ್ತಮವಾಗಿದೆ." ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎರಡು ಮದುವೆಯಾಗಿದ್ದರೂ ಸಹ ಶರತ್‌ ʼಒಂಟಿʼಯಾಗಿದ್ದರು..! ಕಾರಣ ಏನ್‌ ಗೊತ್ತಾ..?

ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥ ಸಮಾರಂಭವು ಸೆಂಟ್ರಲ್ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಡೆಯಿತು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪರಿಣಿತಿ ಅವರ ಸೋದರಸಂಬಂಧಿ, ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಸೇರಿದಂತೆ ಸುಮಾರು 150 ಅತಿಥಿಗಳು ಭಾಗವಹಿಸಿದ್ದರು.

 

 
 
 
 

 
 
 
 
 
 
 
 
 
 
 

A post shared by @parineetichopra

 

ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ವಿವಾಹದ ವದಂತಿಗಳು ಮಾರ್ಚ್‌ನಲ್ಲಿ ಪ್ರಾರಂಭವಾದವು. ವರದಗಳ ಪ್ರಕಾರ, ಇವರ ಪ್ರೇಮಕಥೆಯು ಕಳೆದ ವರ್ಷ ಪ್ರಾರಂಭವಾಯಿತು. ಚಮ್ಕಿಲಾ ಸೆಟ್‌ನಲ್ಲಿ ಪರಿಣಿತಿ ಮತ್ತು ರಾಘವ್ ನಡುವೆ ಲವ್‌ ಶುರುವಾಯ್ತು. ಪರಿಣಿತಿ ಅವರು ಪಂಜಾಬ್‌ನಲ್ಲಿ ಚಿತ್ರದ ಶೂಟಿಂಗ್‌ನಲ್ಲಿದ್ದರು ಮತ್ತು ರಾಘವ್ ಅವರನ್ನು ಸ್ನೇಹಿತನಾಗಿ ಭೇಟಿಯಾಗಲು ಸೆಟ್‌ಗೆ ಹೋಗಿದ್ದರು. ಕೊನೆಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದರು.

ರಾಘವ್ ಮತ್ತು ಪರಿಣಿತಿ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರು. ಬಹು ವರದಿಗಳ ಪ್ರಕಾರ, ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದಾರೆ.  

ಇದನ್ನೂ ಓದಿ: ʻಕಾಂತಾರʼ ಪದದ ಅರ್ಥವೇನು ಗೊತ್ತಾ? ರಿಷಬ್ ಶೆಟ್ಟಿ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದೇಕೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News