ಪಠಾಣ್ ದೀಪಿಕಾ ಅವರನ್ನು ಅತ್ಯಂತ ಹಾಟೆಸ್ಟ್ ಮತ್ತು ಕೂಲೆಸ್ಟ್ ಆಗಿ ತೋರಿಸಲಿದೆ: ಸಿದ್ಧಾರ್ಥ್ ಆನಂದ್

ನಿರ್ದೇಶಕ ಸಿದ್ಧಾರ್ಥ್ ಆನಂದ್ ಯಶ್ ರಾಜ್ ಫಿಲ್ಮ್ಸ್ ಅವರ ಪಠಾಣ್ ಚಲನಚಿತ್ರ ನಿರ್ದೇಶನ ಮಾಡುತ್ತಿದ್ದು ಇದು ಭಾರತದ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಗೂಢಚಾರಿ ವಿಶ್ವವನ್ನು ಸೃಷ್ಟಿಸಲು ಬಯಸಿದ ಆದಿತ್ಯ ಛೋಪ್ರಾ ಅವರ ಕನಸು ನನಸಾಗಿಸಿದ ಪ್ರಮುಖ ಚಿತ್ರವಾಗಿದೆ.

Written by - Zee Kannada News Desk | Last Updated : Nov 11, 2022, 10:10 PM IST
  • ಎಸ್‍ಆರ್‍ಕೆ ಮತ್ತು ಡಿಪಿ ಇತ್ತೀಚೆಗೆ ಸ್ಪೇನ್‍ನಲ್ಲಿ ಸೆಟ್‍ನಲ್ಲಿದ್ದ ಸೋರಿಕೆಯಾದ ಫೋಟೋಗಳಿಂದ ಇಂಟರ್‍ನೆಟ್‍ನಲ್ಲಿ ಸಂಚಲನ ಉಂಟು ಮಾಡಿದ್ದರು.
  • ಈ ಗ್ಲಾಮರಸ್ ಜೋಡಿ ಮಲ್ಲೋರ್ಕಾದಲ್ಲಿ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು
  • ಅದರಲ್ಲಿ ಎಸ್‍ಆರ್‍ಕೆ ಎಯ್ಟ್-ಪ್ಯಾಕ್ ಪ್ರದರ್ಶಿಸಿದ್ದರು ಮತ್ತು ಡಿಪಿ ಪರಿಪೂರ್ಣ ಬಿಕಿನಿ ದೇಹ ಪ್ರದರ್ಶನ ಮಾಡಿದ್ದರು.
ಪಠಾಣ್ ದೀಪಿಕಾ ಅವರನ್ನು ಅತ್ಯಂತ ಹಾಟೆಸ್ಟ್ ಮತ್ತು ಕೂಲೆಸ್ಟ್ ಆಗಿ ತೋರಿಸಲಿದೆ: ಸಿದ್ಧಾರ್ಥ್ ಆನಂದ್ title=

ಮುಂಬೈ: ನಿರ್ದೇಶಕ ಸಿದ್ಧಾರ್ಥ್ ಆನಂದ್ ಯಶ್ ರಾಜ್ ಫಿಲ್ಮ್ಸ್ ಅವರ ಪಠಾಣ್ ಚಲನಚಿತ್ರ ನಿರ್ದೇಶನ ಮಾಡುತ್ತಿದ್ದು ಇದು ಭಾರತದ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಗೂಢಚಾರಿ ವಿಶ್ವವನ್ನು ಸೃಷ್ಟಿಸಲು ಬಯಸಿದ ಆದಿತ್ಯ ಛೋಪ್ರಾ ಅವರ ಕನಸು ನನಸಾಗಿಸಿದ ಪ್ರಮುಖ ಚಿತ್ರವಾಗಿದೆ.

ಈ ಚಲನಚಿತ್ರದಲ್ಲಿ ಶಾರೂಕ್ ಖಾನ್ ನಾಲ್ಕು ವರ್ಷಗಳ ಅಂತರ ನಂತರ ಬೆಳ್ಳಿತೆರೆಗೆ ಮರಳಿದ್ದು ಮೋಹಕತಾರೆ ದೀಪಿಕಾ ಪಡುಕೋಣೆ ಮತ್ತು ಎಸ್‍ಆರ್‍ಕೆ ವಿರುದ್ಧ ಖಳನಾಗಿ ಜಾನ್ ಅಬ್ರಹಾಂ ನಟಿಸಿದ್ದಾರೆ! ಸಿದ್ಧಾರ್ಥ್ ಅವರ ಪ್ರಕಾರ ಪಠಾಣ್ ದೀಪಿಕಾ ಅವರನ್ನು ಅತ್ಯಂತ ಹಾಟೆಸ್ಟ್ ಮತ್ತು ಕೂಲೆಸ್ಟ್ ಆಗಿ ಪ್ರಸ್ತುತಪಡಿಸಲಿದೆ ಮತ್ತು ಅವರು ಹಿಂದೆಂದೂ ಕಾಣದಂತೆ ಅವರ ಮಿಂಚಿನ ಉಪಸ್ಥಿತಿಯಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಲಿದ್ದಾರೆ. 

ಸಿದ್ಧಾರ್ಥ್ ಅವರು, “ದೀಪಿಕಾ ಪಡುಕೋಣೆ ಭಾರತೀಯ ಚಲನಚಿತ್ರದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸೂಪರ್‍ಸ್ಟಾರ್ ಆಗಿದ್ದಾರೆ ಮತ್ತು ಅವರ ಪಾತ್ರವನ್ನು ಪಠಾಣ್‍ನಲ್ಲಿ ಮಹತ್ತರವಾಗಿಯೇ ಅಲ್ಲದೆ ಸೂಪರ್‍ಸ್ಟಾರ್‍ಡಂಗೆ ಪೂರಕವಾದಂತೆ ಚಿತ್ರಿಸಲಾಗಿದ್ದು ಅದು ಅವರನ್ನು ಅತ್ಯಂತ ಹಾಟೆಸ್ಟ್ ಹಾಗೆಯೇ ಅತ್ಯಂತ ಕೂಲೆಸ್ಟ್ ಆಗಿ ತಂದಿದೆ” ಎಂದರು. 

ಇದನ್ನೂ ಓದಿ: ಏನ್‌ ಲುಕ್‌ ಗುರು ಸೂಪರ್‌..! : ಹೊಸ ಗೆಟಪ್‌ನಲ್ಲಿ ಜ್ಯೂ.ಎನ್‌ಟಿಆರ್‌

ಎಸ್‍ಆರ್‍ಕೆ ಮತ್ತು ದೀಪಿಕಾ ಇಬ್ಬರೂ ಓಂ ಶಾಂತಿ ಓಂ, ಚೆನ್ನೈ ಎಕ್ಸ್‍ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್‍ನಂತಹ ಬ್ಲಾಕ್‍ಬಸ್ಟರ್‍ಗಳನ್ನು ನೀಡಿದ ಭಾರತದ ಸಿನಿಮಾ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿದ್ದಾರೆ. ಎಸ್‍ಆರ್‍ಕೆ ಮತ್ತು ಡಿಪಿ ಇತ್ತೀಚೆಗೆ ಸ್ಪೇನ್‍ನಲ್ಲಿ ಸೆಟ್‍ನಲ್ಲಿದ್ದ ಸೋರಿಕೆಯಾದ ಫೋಟೋಗಳಿಂದ ಇಂಟರ್‍ನೆಟ್‍ನಲ್ಲಿ ಸಂಚಲನ ಉಂಟು ಮಾಡಿದ್ದರು. ಈ ಗ್ಲಾಮರಸ್ ಜೋಡಿ ಮಲ್ಲೋರ್ಕಾದಲ್ಲಿ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಅದರಲ್ಲಿ ಎಸ್‍ಆರ್‍ಕೆ ಎಯ್ಟ್-ಪ್ಯಾಕ್ ಪ್ರದರ್ಶಿಸಿದ್ದರು ಮತ್ತು ಡಿಪಿ ಪರಿಪೂರ್ಣ ಬಿಕಿನಿ ದೇಹ ಪ್ರದರ್ಶನ ಮಾಡಿದ್ದರು. ಅವರು ನಂತರ ಸ್ಪೇನ್‍ನ ಕಾಡಿಝ್ ಮತ್ತು ಜೆರೆಝ್‍ನಲ್ಲಿ ಚಿತ್ರೀಕರಣ ಪೂರೈಸಿದರು. 

ಇದನ್ನೂ ಓದಿ: Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್

ಎಸ್‍ಆರ್‍ಕೆ ಮತ್ತು ಡಿಪಿಯ ಸೂಪರ್-ಹಾಟ್ ಜೋಡಿಯ ಕುರಿತು ಸಿದ್ಧಾರ್ಥ್, “ದೀಪಿಕಾ ಪಡುಕೋಣೆ ಮತ್ತು ಶಾರೂಕ್ ಖಾನ್ ಅವರ ಆನ್-ಸ್ಕ್ರೀನ್ ಜೋಡಿಯು ಅವರ ಹಿಂದಿನ ಅಸಾಧಾರಣ ಯಶಸ್ಸುಗಳಿಗೆ ಹೋಲಿಸಿದರೆ ಬಹುಶಃ ಭಾರತೀಯ ಚಿತ್ರರಂಗ ಹಿಂದೆಂದೂ ಕಾಣದ ದೊಡ್ಡ ಜೋಡಿಗಳಲ್ಲಿ ಒಂದಾಗಿದೆ. ಮತ್ತು ಪಠಾಣ್‍ನಲ್ಲಿ ನಾವು ಎಸ್‍ಆರ್‍ಕೆ ಮತ್ತು ಪಠಾಣ್ ಅನ್ನು ಅಸಾಧಾರಣ ರೀತಿಯಲ್ಲಿ ಪ್ರಸ್ತುತಪಡಿಸಿದ್ದೇವೆ” ಎಂದರು. 

ಅವರು, “ಅವರಿಗೆ ಪರಸ್ಪರ ಅದ್ಭುತ ಕೆಮಿಸ್ಟಿ ಇದೆ ಮತ್ತು ಅವರು ಒಟ್ಟಿಗೆ ಇರುವಾಗ ಬಹಳ ಆಕರ್ಷಕವಾಗಿ ಕಾಣುತ್ತಾರೆ. ಅವರಂತಹ ಜೋಡಿ ಕಾಣುವುದು ಅಪರೂಪ ಮತ್ತು ಅವರ ಜೋಡಿಯು ಪಠಾಣ್‍ನಲ್ಲಿ ಬಹುದೊಡ್ಡ ಯುಎಸ್‍ಪಿಯಾಗಿದೆ” ಎಂದರು. 

ಪಠಾಣ್ ಜನವರಿ 25, 2023ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News