Prabhas Wedding : ಮಂಡಿಯೂರಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ರಾ ನಟ ಪ್ರಭಾಸ್? ಶೀಘ್ರದಲ್ಲೇ ನಿಶ್ಚಿತಾರ್ಥ ಫಿಕ್ಸ್‌!

Prabhas - Kriti Sanon : ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್‌ ನಟಿ ಕೃತಿ ಸನೊನ್‌ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವರುಣ್ ಧವನ್ ಇವರ ನಡುವಿನ ಸಂಬಂಧದ ಬಗ್ಗೆ ಭಾರಿ ಸುಳಿವನ್ನು ನೀಡಿದ್ದಾರೆ. 

Written by - Chetana Devarmani | Last Updated : Nov 30, 2022, 12:24 PM IST
  • ಮಂಡಿಯೂರಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ರಾ ನಟ ಪ್ರಭಾಸ್?
  • ಶೀಘ್ರದಲ್ಲೇ ಪ್ರಭಾಸ್ ಮತ್ತು ಕೃತಿ ಸನೊನ್‌ ನಿಶ್ಚಿತಾರ್ಥ ಫಿಕ್ಸ್‌!
  • ಇವರ ನಡುವಿನ ಸಂಬಂಧದ ಬಗ್ಗೆ ಸುಳಿವು ನೀಡಿದ ವರುಣ್ ಧವನ್!
Prabhas Wedding : ಮಂಡಿಯೂರಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ರಾ ನಟ ಪ್ರಭಾಸ್? ಶೀಘ್ರದಲ್ಲೇ ನಿಶ್ಚಿತಾರ್ಥ ಫಿಕ್ಸ್‌! title=
ಪ್ರಭಾಸ್ ಮತ್ತು ಕೃತಿ ಸನೊನ್‌

Prabhas - Kriti Sanon : ತೆಲುಗು ನಟ ಪ್ರಭಾಸ್ ಮತ್ತು ಬಾಲಿವುಡ್‌ ನಟಿ ಕೃತಿ ಸನೊನ್‌ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವರುಣ್ ಧವನ್ ಇವರ ನಡುವಿನ ಸಂಬಂಧದ ಬಗ್ಗೆ ಭಾರಿ ಸುಳಿವನ್ನು ನೀಡಿದ್ದಾರೆ. ಮುಂಬೈನಲ್ಲಿ ಇಲ್ಲದ ಮತ್ತು ಇದೀಗ ದೀಪಿಕಾ ಪಡುಕೋಣೆ ಅವರೊಂದಿಗೆ ಶೂಟಿಂಗ್ ಮಾಡುತ್ತಿರುವ ನಟನ ಹೃದಯದಲ್ಲಿ ಕೃತಿ ಅವರ ಹೆಸರನ್ನು ಬರೆಯಲಾಗಿದೆ ಎಂದು ಹೇಳಿದರು. ಹಿಂದಿ ಶೋ ಒಂದರ ವೇದಿಕೆಯ ಮೇಲೆ ನಟ ವರುಣ್ ಧವನ್ ಆಡಿದ ಈ ಮಾತುಗಳೆ ಈ ವದಂತಿಗೆ ಪುಷ್ಠಿ ನೀಡಿವೆ. ಈಗ ಉದ್ಯಮದ ಒಳಗಿನವರೊಬ್ಬರು ಪ್ರಭಾಸ್ ಮತ್ತು ಕೃತಿ ಸಂಬಂಧದಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಈ ಪ್ರೇಮ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂದು ಸಹ ಹೇಳಿದ್ದಾರಂತೆ. 

 

 

ಇದನ್ನೂ ಓದಿ : 

ಆದಿಪುರುಷ ಚಿತ್ರದ ಸೆಟ್‌ನಲ್ಲಿ ಮಂಡಿಯೂರಿ ಕೃತಿ ಸನೊನ್‌ ಗೆ ಪ್ರಪೋಸ್ ಮಾಡಲು ಪ್ರಭಾಸ್ ಪ್ರಪೋಸ್‌ ಮಾಡಿದ್ದರಂತೆ. ಪ್ರಭಾಸ್‌ ಅವರ ಈ ಪ್ರಪೋಸಲ್‌ಗೆ ಕೃತಿ ಸಹ ಒಪ್ಪಿಕೊಂಡಿದ್ದಾರಂತೆ. ಪ್ರಭಾಸ್ ಮತ್ತು ಕೃತಿ ಕುಟುಂಬ ಕೂಡ ಈ ಸಂಬಂಧದಿಂದ ಸಂತಸಗೊಂಡಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆದಿಪುರುಷ ಸಿನಿಮಾ ಬಿಡುಗಡೆಯಾದ ಕೂಡಲೇ ಕೃತಿ ಮತ್ತು ಪ್ರಭಾಸ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ಈ ಸುದ್ದಿಯಿಂದ ಪ್ರಭಾಸ್‌ ಮತ್ತು ಕೃತಿ ಸನೊನ್‌ ಅಭಿಮಾನಿಗಳು ಸಹ ಸಂತಸಗೊಂಡಿದ್ದಾರೆ. ಆದಿಪುರುಷ ಸೆಟ್‌ನಲ್ಲಿ ಆರಂಭವಾಗಿದೆ ಎನ್ನಲಾದ ಈ ಪ್ರೀತಿಗೆ ಮದುವೆ ರೂಪ ನೀಡಲು ಇಬ್ಬರೂ ಸ್ಟಾರ್‌ಗಳು ಸಿದ್ಧರಾಗಿದ್ದಾರಂತೆ. ಅಲ್ಲದೇ ಇನ್ನೇನೂ ಕೆಲವೇ ದಿನಗಳಲ್ಲಿ ಇಬ್ಬರು ಎಂಗೇಜ್‌ಮೆಂಟ್‌ ಕೂಡ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.  

ಇದನ್ನೂ ಓದಿ : 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News