Kannada Actress: ಕನ್ಹಯ್ಯಾ ಹತ್ಯೆಯನ್ನು ಕೆದಕಿದ ಪ್ರಣಿತಾಸುಭಾಷ್....!

ಜೂನ್ 28ರಂದು ಹಾಡುಹಗಲೇ ಆರೋಪಿಗಳು ಹಿಂದೂ ವ್ಯಕ್ತಿ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯ ಲಾಲ್   ಅವರನ್ನು ಹತ್ಯೆ ಮಾಡಲಾಗಿತ್ತು.

Written by - Zee Kannada News Desk | Last Updated : Jan 30, 2023, 02:35 PM IST
  • ಹಿಂದೂ ಲೀವ್ಸ್‌ ಮ್ಯಾಟರ್‌ ಎಂದು ಬರೆದುಕೊಳ್ಳುವ ಮೂಲಕ ಹತ್ಯೆಯನ್ನು ಪ್ರಣಿತಾಸುಭಾಷ್ ಖಂಡಿಸಿದ್ದಾರೆ.
  • ಜೂನ್ 28ರಂದು ಹಾಡುಹಗಲೇ ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್
  • ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲುತೂರಾಟ, ಪೊಲೀಸರ ಮೇಲೆ ಹಲ್ಲೆ , ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತ
Kannada Actress: ಕನ್ಹಯ್ಯಾ ಹತ್ಯೆಯನ್ನು ಕೆದಕಿದ ಪ್ರಣಿತಾಸುಭಾಷ್....!  title=

Kannada Actress : ಹಿಂದೂ ಲೀವ್ಸ್‌ ಮ್ಯಾಟರ್‌ ಎಂದು ಬರೆದುಕೊಳ್ಳುವ ಮೂಲಕ ಹತ್ಯೆಯನ್ನು ಪ್ರಣಿತಾಸುಭಾಷ್ ಖಂಡಿಸಿದ್ದಾರೆ.

ರಾಷ್ಟ್ರ ವ್ಯಾಪಿ ಸದ್ದು ಮಾಡಿದ್ದ   ಕನ್ಹಯ್ಯಾ ಹತ್ಯೆಯನ್ನು  ಖಂಡಿಸಿ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ  ಹಿಂದೂ ಲೀವ್ಸ್‌ ಮ್ಯಾಟರ್‌ ಎಂದು ಬರೆದುಕೊಂಡಿದ್ದಾರೆ.ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದೇಶ ವಿದೇಶಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆ ನೂಪುರ್ ಅವರನ್ನು ಬೆಂಬಲಿಸಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದವರಲ್ಲಿ   ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್  ಕೂಡ ಒಬ್ಬರು. 

ಇದನ್ನೂ ಓದಿ: “ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ”

ಜೂನ್ 28ರಂದು ಹಾಡುಹಗಲೇ ಆರೋಪಿಗಳು ಹಿಂದೂ ವ್ಯಕ್ತಿ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯ ಲಾಲ್   ಅವರನ್ನು ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ
ಕನ್ಹಯ್ಯಾ ಹತ್ಯೆ ಖಂಡಿಸಿ ದೇಶಾದ್ಯಂತ ಕಲ್ಲುತೂರಾಟ, ಪೊಲೀಸರ ಮೇಲೆ  ಹಲ್ಲೆ , ಪ್ರತಿಕೃತಿ ದಹನ  ಹಲವು ರಾಜ್ಯಗಳಲ್ಲಿ ಹಿಂದೂ ಸಂಘಟನೆಗಳು  ಆಕ್ರೋಶ ವ್ಯಕ್ತ ಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ತನಿಖೆಗೆ ಒಳಪಡಿಸಲಾಗಿತ್ತು.  
ಘಟನೆಗೆ ಕುರಿತಂತೆ ಕೆಲವು ತಿಂಗಳು ಬಳಿಕ  ಬಹುಭಾಷಾ ನಟಿ ಪ್ರಣಿತಾಸುಭಾಷ್  ತಮ್ಮ ಟ್ವೀಟರ್‌ ಖಾತೆಯಲ್ಲಿ  ಹಿಂದೂ ಲೀವ್ಸ್‌ ಮ್ಯಾಟರ್‌ ಎಂದು ಬರೆದುಕೊಳ್ಳುವ ಮೂಲಕ ಕನ್ಹಯ್ಯಾ ಹತ್ಯೆಯನ್ನು ನೆನಪಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News