ಶಾರುಕ್ ಜೊತೆಗಿನ ಫೇಕ್ ಫೋಟೋ ಹಂಚಿಕೊಂಡ ರಾಖಿ ಸಾವಂತ್, 'ಸಾಕ್ ಮಾಡು ಅಕ್ಕಾ..' ಎಂದ ನೆಟ್ಟಿಗರು

ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋತೊವೊಂದನ್ನು ಹಂಚಿಕೊಂಡಿದ್ದಳು. ಈ ಭಾವಚಿತ್ರದಲ್ಲಿ ಆಕೆ ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ ಜೊತೆ ವೀಡಿಯೊ ಕರೆಯಲ್ಲಿ ನಿರತರಗಿರುವಂತೆ ಕಂಡು ಬಂದಿತ್ತು. ರಾಖಿ ಹಂಚಿಕೊಂಡಿದ್ದ ಈ ಫೋಟೋ ಭಾರಿ ವೈರಲ್ ಕೂಡ ಆಗಿತ್ತು.

Last Updated : Apr 23, 2020, 06:29 PM IST
ಶಾರುಕ್ ಜೊತೆಗಿನ ಫೇಕ್ ಫೋಟೋ ಹಂಚಿಕೊಂಡ ರಾಖಿ ಸಾವಂತ್, 'ಸಾಕ್ ಮಾಡು ಅಕ್ಕಾ..' ಎಂದ ನೆಟ್ಟಿಗರು  title=

ನವದೆಹಲಿ:ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಒಂದಿಲ್ಲ ಒಂದು ಕೃತ್ಯದ ಮೂಲಕ ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತಾಳೆ. ವಿಡಿಯೋ ಆಗಲಿ, ಭಾವಚಿತ್ರಗಳಾಗಲಿ ಅಥವಾ ಪತಿ ರಿತೇಶ್ ಜೊತೆ ಅವಳ ಮದುವೆಯೇ ಆಗಲಿ, ರಾಖಿ ಸಾವಂತ್ ಗೆ ಚರ್ಚೆಯಲ್ಲಿ ಹೇಗೆ ಇರಬೇಕು ಎಂಬುದು ಚೆನ್ನಾಗಿ ಗೊತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯಳಾಗಿರುವ ರಾಖಿ ಸಾವಂತ್ ಹಲವಾರು ಬಾರಿ ತಮ್ಮ ಫೋಟೋ ಅಥವಾ ವಿಡಿಯೋಗಳ ಕಾರಣ ಟ್ರೋಲ್ ಗೂ ಕೂಡ ಒಳಗಾಗುತ್ತಾಳೆ.

 ಕೆಲವು ದಿನಗಳ ಹಿಂದೆ ರಾಖಿ ಸಾವಂತ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋತೊವೊಂದನ್ನು ಹಂಚಿಕೊಂಡಿದ್ದಳು. ಈ ಭಾವಚಿತ್ರದಲ್ಲಿ ಆಕೆ ಬಾಲಿವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ ಜೊತೆ ವೀಡಿಯೊ ಕರೆಯಲ್ಲಿ ನಿರತರಗಿರುವಂತೆ ಕಂಡು ಬಂದಿತ್ತು. ರಾಖಿ ಹಂಚಿಕೊಂಡಿದ್ದ ಈ ಫೋಟೋ ಭಾರಿ ವೈರಲ್ ಕೂಡ ಆಗಿತ್ತು. ಈ ಫೋಟೋ ಹಂಚಿಕೊಂಡಿದ್ದ ರಾಖಿ, ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಶಾರುಕ್ ಅವರಿಗೆ ಧನ್ಯವಾದ ಕೂಡ ಹೇಳಿದ್ದಳು. ಆದರೆ, ರಾಖಿ ಹಂಚಿಕೊಂಡ ಈ ಭಾವಚಿತ್ರ ಒಂದು ಎಡಿಟ್ ಮಾಡಲಾಗಿರುವ ಭಾವಚಿತ್ರವಾಗಿದೆ ಎಂಬುದು ತಿಳಿಯಲು ನೆಟ್ಟಿಗರಿಗೆ ಬಹಳ ಸಮಯ ಬೇಕಾಗಲಿಲ್ಲ. ಕೂಡಲೇ ಅವರು ಆನ್ಲೈನ್ ನಲ್ಲಿಯೇ ರಾಖಿಯ ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

 
 
 
 

 
 
 
 
 
 
 
 
 

Thanks 🙏 Dear Shahrukh for helping people

A post shared by Rakhi Sawant (@rakhisawant2511) on

ರಾಖಿ ಹಂಚಿಕೊಂಡಿದ್ದ ಈ ಫೋಟೋದಲ್ಲಿ ಶಾರುಖ್ ನಗುತ್ತಿದ್ದಾರೆ. ಈ ಫೋಟೋ ಹಂಚಿಕೊಂಡ ರಾಖಿ, "ಜನರಿಗೆ ಸಹಾಯ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ನನ್ನ ಆತ್ಮೀಯ ಶಾರುಖ್  ಖಾನ್" ಎಂದು ಬರೆದುಕೊಂಡಿದ್ದಳು. ಈ ಫೇಕ್ ಭಾವಚಿತ್ರವನ್ನು ಹಂಚಿಕೊಳ್ಳುತ್ತಲೇ ಟ್ರೋಲರ್ ಗಳು ರಾಖಿಯನ್ನು ಗುರಿಯಾಗಿಸಿದ್ದಾರೆ. ರಾಖಿ ಹಂಚಿಕೊಂಡ ಈ ಚಿತ್ರಕ್ಕೆ ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ, " ಅಕ್ಕಾ... ಸ್ವಲ್ಪ ಜಾಸ್ತಿ ಆಯ್ತು.. ಸಾಕ್ ಮಾಡು ಇದೀಗ" ಎಂದು ಪ್ರತಿಕ್ರಿಯಿಸಿದ್ದಾನೆ.

ಇನ್ನೊಂದೆಡೆ ಈ ಚಿತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಎರಡನೇ ಬಳಕೆದಾರ, "ಉತ್ತಮ ಫೋಟೋ ಶಾಪ್ ಸ್ಕಿಲ್' ಎಂದಿದ್ದಾನೆ. ಇದಾದ ಬಳಿಕ ಮತ್ತೆ ಹಲವರು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ' ಅತಿಯಾಯ್ತು .. ಅವರು ನೀನ್ನನ್ನು ಫಾಲೋ ಕೂಡ ಮಾಡಿಲ್ಲ' ಎಂದು ಒಬ್ಬರು ಹೇಳಿದ್ದರೆ ಮತ್ತೊಬ್ಬರು, "ಒಮ್ಮೆ ನೀನು ಕೂಡ ಸಹಾಯ ಮಾಡು" ಎಂದು ಬರೆದಿದ್ದಾನೆ.

'ಮೈ ಹೂ ನಾ' ಚಿತ್ರದಲ್ಲಿ ಶಾರುಖ್ ಜೊತೆ ರಾಖಿ ಕೆಲಸ ಮಾಡಿರುವುದು ಇಲ್ಲಿ ಉಲ್ಲೇಖನೀಯ, 2004 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಸಾಬೀತಾಗಿತ್ತು. ಅಷ್ಟೇ ಅಲ್ಲ ಯಾವುದೇ ಒಂದು ವಿಷಯದ ಮೇಲೆ ಹಿಂಜರಿಯದೆ ಹೇಳಿಕೆಗಳನ್ನು ನೀಡುವ ಮೂಲಕ ಕೂಡ ರಾಖಿ ಯಾವಾಗಲು ಸುದ್ದಿ ಮಾಡುತ್ತಾಳೆ

Trending News