Ajay Devagan : ಅಜಯ್ ದೇವ್ ಗನ್ ಎಂದೇ ಹಿಂದೆ ಖ್ಯಾತರಾದ ಇವರು ಭಾರತದ ಒಬ್ಬ ಪ್ರಮುಖ ಚಿತ್ರನಟ, ನಿರ್ದೇಶಕ, ಹಾಗೂ ನಿರ್ಮಾಪಕರಾಗಿದ್ದಾರೆ. ಅವರು ಫೂಲ್ ಔರ್ ಕಾಂಟೆ ಎಂಬ ಚಿತ್ರದ ಮೂಲಕ, 1991 ರಲ್ಲಿ, ಚಲನಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದರು ಮತ್ತು ಚೊಚ್ಚಲ ಚಿತ್ರದಲ್ಲಿನ ನಟನೆಗೆ ನೀಡುವ ಫಿಲ್ಮ್ ಫೇರ್ ಶ್ರೇಷ್ಠನಟ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅಭಿನಯದ ಮೂಲಕ ತಮ್ಮದಾಗಿಸಿಕೊಂಡರು.
ಫುಟ್ಬಾಲ್ ಕ್ರೀಡೆ ಆಧಾರಿತ ಬಹಳ ಹಿಂದೆ ತೆರೆಗೆ ಬರಬೇಕಾಗಿದ್ದ ʼಮೈದಾನ್ʼ ಸಿನಿಮಾ ಕಾರಣಾಂತರಗಳಿಂದ ಬರೋದು ತಡವಾಗಿತ್ತು. ಇದೀಗ ರಿಲೀಸ್ ಡೇಟ್ ಇದೀಗ ರಿಲೀಸ್ ಡೇಟ್ ಸಮೇತ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಜೂನ್ 23ಕ್ಕೆ ಸಿನಿಮಾ ತೆರೆಗಪ್ಪಳಿಸ್ತಿದ್ದು ಕನ್ನಡ ನಟ ರಕ್ಷಿತ್ ಶೆಟ್ಟಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಟೀಸರ್ ಶೇರ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ರಿಯಾಮಣಿ, ಗಜ್‌ರಾಜ್ ರಾವ್, ರುದ್ರಾನಿಲ್ ಘೋಷ್ ಕೂಡ ಚಿತ್ರದಲ್ಲಿದ್ದಾರೆ.
Immortalising a story through cinema! The teaser is as fab as it can get team #Maidaan, looking forward to this one with much anticipation 🤗 My heartiest wishes to @BoneyKapoor Ji and the entire team ♥️https://t.co/GruEYJzUbo
— Rakshit Shetty (@rakshitshetty) April 2, 2023
ಇದನ್ನೂ ಓದಿ-Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?
ಫುಟ್ಬಾಲ್ ಪ್ರಪಂಚದ ಜನಪ್ರಿಯ ಕ್ರೀಡೆ. ಆದರೆ ಭಾರತ ತಂಡ ವಿಶ್ವಕಪ್ ಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗುತ್ತಿದೆ. ಆದರೆ ದಶಕಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. 1952ರಿಂದ 1962ರ ಕಾಲಘಟ್ಟವನ್ನು ಭಾರತೀಯ ಫುಟ್ಬಾಲ್‌ನ 'ಸುವರ್ಣ ಯುಗ' ಎನ್ನಲಾಗುತ್ತದೆ. 1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡಲು ಭಾರತ ತಂಡ ನೇರವಾಗಿ ತೇರ್ಗಡೆ ಹೊಂದಿತ್ತು. ಆದರೆ ಟೂರ್ನಿಯಲ್ಲಿ ಆಡದಿರಲು ಎಐಎಫ್‌ಎಫ್ ನಿರ್ಧರಿಸಿತ್ತು. ಆದರೆ ಆ ನಂತರ ತಂಡ ಎಂದೂ ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ.
ಇದನ್ನೂ ಓದಿ-Pentagon : ಬೇಕು ಅಂತಲೇ 'ಪೆಂಟಗನ್' ಬಗ್ಗೆ ವಿವಾದ ಮಾಡಿದ್ರು ಕನ್ನಡಪರ ಹೋರಾಟಗಾರ ಎನಿಸಿಕೊಂಡಿರೋ ಆ ವ್ಯಕ್ತಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.