ಕಾಲೇಜಿನಲ್ಲಿ ಲವ್‌, 13 ವರ್ಷದ ಪ್ರೀತಿ : ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಮ್‌ ಚರಣ್ ದಂಪತಿ..!

Ram charan Upasana anniversary : ಟಾಲಿವುಡ್‌ ಸ್ಟಾರ್‌ ನಟ ರಾಮ್‌ ಚರಣ್‌ ಮತ್ತು ಉಪಾಸನಾ ಜೋಡಿ ಇಂದು ತಮ್ಮ 13ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಶೀರ್ಘದಲ್ಲೇ ಈ ಜೋಡಿ ಮುದ್ದಾದ ಮಗುವಿನ ಪೋಷಕರಾಗುತ್ತಿದ್ದಾರೆ.

Written by - Krishna N K | Last Updated : Jun 14, 2023, 12:06 PM IST
  • ನಟ ರಾಮ್‌ ಚರಣ್‌ ಮತ್ತು ಉಪಾಸನಾ ಜೋಡಿ ಇಂದು ತಮ್ಮ 13ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.
  • ರಾಮ್ ಚರಣ್ ಹಾಗೂ ಉಪಾಸನಾ ಜೂನ್ 14, 2012 ರಂದು ವಿವಾಹವಾದದರು.
  • ಶೀರ್ಘದಲ್ಲೇ ಈ ಜೋಡಿ ಮುದ್ದಾದ ಮಗುವಿನ ಪೋಷಕರಾಗುತ್ತಿದ್ದಾರೆ.
ಕಾಲೇಜಿನಲ್ಲಿ ಲವ್‌, 13 ವರ್ಷದ ಪ್ರೀತಿ : ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಮ್‌ ಚರಣ್ ದಂಪತಿ..! title=

Ram charan Upasana : ಸೌತ್ ಇಂಡಸ್ಟ್ರಿಯ ಸುಂದರ ಜೋಡಿಗಳಲ್ಲಿ ಒಂದಾಗಿರುವ ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಇಂದು ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ 14 ಜೂನ್ 2012 ರಂದು ವಿವಾಹವಾದರು. ಇತ್ತೀಚಿಗೆ ಈ ಸ್ಟಾರ್ ದಂಪತಿಗಳು ತಂದೆ-ತಾಯಿಯಾಗುತ್ತಿರುವುದಾಗಿ ತಿಳಿಸಿದ್ದರು.

ಹೌದು.. ರಾಮ್ ಚರಣ್ ಹಾಗೂ ಉಪಾಸನಾ ಜೂನ್ 14, 2012 ರಂದು ವಿವಾಹವಾದದರು. ಇಂದು ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಾಲೇಜ್‌ನಲ್ಲಿ ಬೇಟಿ, ನಂತರ ಸ್ನೇಹ, ಆಮೇಲೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಇದೀಗ ಮುದ್ದಾದ ಮಗುವಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:ಒಂದು ಕಾಲದಲ್ಲಿ ಬಿಕಿನಿಯಲ್ಲಿ ಮಿಂಚಿದ್ದ ಬರ್ಖಾ ಮದನ್; ಇಂದು ಬೌದ್ಧ ಸನ್ಯಾಸಿನಿ..!

ಸಂದರ್ಶನವೊಂದರಲ್ಲಿ ತಮ್ಮ ಲವ್‌ ಬಗ್ಗೆ ಮಾತನಾಡಿದ್ದ ಉಪಾಸನಾ ಅವರು, ʼʼ ಮೊದಲಿಗೆ ನನ್ನ ಮತ್ತು ರಾಮ್ ನಡುವೆ ಪ್ರೀತಿಯ ಬಗ್ಗೆ ಯಾವುದೇ ಮಾತುಕತೆ ಇರಲಿಲ್ಲ, ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವು, ಅನೇಕ ವಿಷಯಗಳಲ್ಲಿ ಜಗಳವಾಡುತ್ತಿದ್ದೇವು. ಕ್ರಮೇಣ, ಭೇಟಿ ಮಾಡುವುದು ಹೆಚ್ಚಾಯಿತು, ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆವು. ಇಬ್ಬರಿಗೂ ಮೇಡ್ ಫಾರ್ ಈಚ್ ಅದರ್ ಎಂಬ ಭಾವನೆ ಶುರುವಾಯಿತು. ಮದುವೆಯಾಗಲು ನಿರ್ಧರಿಸಿದೆವು ʼʼ ಎಂದು ತಮ್ಮ ಲವ್‌ ಬಗ್ಗೆ ಹೇಳಿಕೊಂಡಿದ್ದರು.

ರಾಮ್ ಚರಣ್ ಮತ್ತು ಉಪಾಸನಾ ಅವರ 13ನೇ ವಿವಾಹ ವಾರ್ಷಿಕೋತ್ಸವವು ಈ ಬಾರಿಯ ವಿಶೇಷವಾಗಿದೆ. ಈ ಜೋಡಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. 10 ವರ್ಷಗಳ ನಂತರ ರಾಮ್ ಚರಣ್ ಮನೆಗೆ ಮಗು ಆಗಮಿಸಲಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಹೆಚ್ಚಿಸಿದೆ.

ಇದನ್ನೂ ಓದಿ: ಮೆಟ್ಟಿಲುಗಳ ಮೇಲಿಂದ ಬಿದ್ದು ಖ್ಯಾತ ನಟಿ ನಿಧನ..! ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ

ಈ ಹಿಂದೆ ಉಪಾಸನಾ ಬೇಬಿ ಶವರ್ ಪಾರ್ಟಿ ಆಯೋಜಿಸಲಾಗಿತ್ತು. ವರದಿಗಳ ಪ್ರಕಾರ ಜೂನ್ 16 ಮತ್ತು 22 ರ ನಡುವೆ ಉಪಾಸನಾ ಮಗುವಿಗೆ ಜನ್ಮ ನೀಡಬಹುದು ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ತಮ್ಮ ಸಿನಿಮಾ ಪ್ರಾಜೆಕ್ಟ್‌ಗಳ ಜೊತೆಗೆ ಉಪಾಸನಾ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.. ಈ ಕುರಿತು ಅವರ ಸೋಷಿಯಲ್‌ ಮೀಡಿಯಾದಲ್ಲಿರುವ ಫೋಟೋಸ್‌ ನೋಡಿದ್ರೆ ಗೊತ್ತಾಗುತ್ತದೆ..

ಇನ್ನು ಉಪಾಸನಾ ಕಾಮಿನೇನಿ ಅವರು ಭಾರತೀಯ ವಾಣಿಜ್ಯೋದ್ಯಮಿಯಾಗಿದ್ದು, URLife ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ, ಅಲ್ಲದೆ, ಅಪೊಲೊ ಆಸ್ಪತ್ರೆಗಳ ಉಪಾಧ್ಯಕ್ಷರು ಸಹ ಹೌದು. ಇಷ್ಟೇ ಅಲ್ಲ, ಕುಟುಂಬ ಆರೋಗ್ಯ ಯೋಜನೆ ವಿಮಾ TPA Ltd (FHPL) ನ ವ್ಯವಸ್ಥಾಪಕ ನಿರ್ದೇಶಕರು ಸಹ ಆಗಿದ್ದಾರೆ. ಇಷ್ಟೇಲ್ಲ ಇದ್ದರೂ ಸಹ ಯಾವುದೇ ಅಹಂಕಾರ ಭಾವನೆ ಇಲ್ಲದೆ ಸರಳವಾಗಿ ಇರುತ್ತಾರೆ ಉಪಾಸನಾ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News