Animal movie leaked : ಇಂದು ತೆರೆಕಂಡ ರಣಬೀರ್‌ ʼಅನಿಮಲ್‌ʼ ಸಿನಿಮಾದ HD ಪ್ರಿಂಟ್‌ ಲೀಕ್‌..! ಎಲ್ಲಿ ಗೊತ್ತಾ..?

Animal full movie leaked : ಇಂದು ತೆರೆಕಂಡ ಅನಿಮಲ್ ಚಿತ್ರ ತಂಡಕ್ಕೆ ಪೈರಸಿ ಎಫೆಕ್ಟ್‌ ತಟ್ಟಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅನಿಮಲ್ ಫುಲ್ ಹೆಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲವು ವೆಬ್‌ಸೈಟ್‌ಗಳಲ್ಲಿ ಈ ಸಿನಿಮಾ ಲಭ್ಯವಿದ್ದು, ಸಿನಿಪ್ರೇಮಿಗಳಿಗೆ ಶಾಕ್ ನೀಡಿದೆ.

Written by - Krishna N K | Last Updated : Dec 1, 2023, 07:11 PM IST
  • ಅನಿಮಲ್ ಚಿತ್ರ ತಂಡಕ್ಕೆ ಪೈರಸಿ ಎಫೆಕ್ಟ್‌ ತಟ್ಟಿದೆ.
  • ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಲೀಕ್‌ ಆಗಿದೆ.
  • ಅನಿಮಲ್‌ ಹೆಚ್‌ಡಿ ಪ್ರೀಂಟ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
Animal movie leaked : ಇಂದು ತೆರೆಕಂಡ ರಣಬೀರ್‌ ʼಅನಿಮಲ್‌ʼ ಸಿನಿಮಾದ HD ಪ್ರಿಂಟ್‌ ಲೀಕ್‌..! ಎಲ್ಲಿ ಗೊತ್ತಾ..? title=

Animal movie leaked : ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ʼಅನಿಮಲ್ʼ ಸಿನಿಮಾ ಹೆಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ ಇಂದು ತೆರೆ ಕಂಡಿತ್ತು. ಯಥಾ ಪ್ರಕಾರ ಈ ಸಿನಿಮಾ ಸಹ ಇದೀಗ ಪೈರಸಿ ಭೂತಕ್ಕೆ ಬಲಿಯಾಗಿದ್ದು, ಅಚ್ಚರಿ ಮೂಡಿಸಿದೆ. 

ಹೌದು... ಅನಿಮಲ್‌ ಸಿನಿಮಾ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇಂದು ಬಿಡುಗಡೆಯಾದ ಈ ಚಿತ್ರ ಮೊದಲ ಪ್ರದರ್ಶನದಿಂದಲೇ ಪಾಸಿಟಿವ್ ಟಾಕ್ ಗಳಿಸುತ್ತಿದೆ. ಅಲ್ಲದೆ, ಬಾಕ್ಸ್‌ ಆಫೀಸ್‌ನಲ್ಲಿಯೂ ಸಹ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಸಂದೀಪ್‌ ಮತ್ತು ರಣಬೀರ್‌ ಕೆಮಿಸ್ಟ್ರಿಗೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದಾನೆ. 

ಇದನ್ನೂ ಓದಿ: ಪಿಂಕ್‌ ಸೀರೆಯಲ್ಲಿ ಲಂಕಾದ ಸುಂದರಿ..! ಜಾಕಿ ಫೋಟೋಸ್‌ ಇಲ್ಲಿವೆ

ಇಂತಹ ಸಮಯದಲ್ಲಿ ಈ ಚಿತ್ರತಂಡಕ್ಕೆ ದೊಡ್ಡ ಶಾಕ್ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅನಿಮಲ್‌ ಹೆಚ್‌ಡಿ ಪ್ರಿಂಟ್ ಆನ್ ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಚಿತ್ರವು ಸುಮಾರು 3 ಗಂಟೆ 21 ನಿಮಿಷ 23 ಸೆಕೆಂಡ್‌ಗಳ ರನ್‌ಟೈಮ್‌ನೊಂದಿಗೆ ರಿಲೀಸ್‌ ಆಗಿದ್ದು, ಸಂಪೂರ್ಣ ಚಲನಚಿತ್ರ ಆನ್‌ಲೈನ್‌ನಲ್ಲಿ ಲಭ್ಯವಿದೆ. 

ಅನಿಮಲ್‌ ಸಿನಿಮಾದಲ್ಲಿ ರಣಬೀರ್ ಕಪೂರ್‌ಗೆ ಜೊತೆಯಾಗಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ, ಬಬ್ಲು ಪೃಥ್ವಿರಾಜ್, ಶಕ್ತಿ ಕಪೂರ್, ಪ್ರೇಮ್ ಚೋಪ್ರಾ ಮತ್ತು ಸುರೇಶ್ ಒಬೆರಾಯ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ:Prabhas : ಮತದಾನ ಮಾಡುವುದನ್ನೇ ಮರೆತ್ರಾ ಸಲಾರ್‌ ನಟ ಪ್ರಭಾಸ್‌..! ಫ್ಯಾನ್ಸ್‌ ಪ್ರಶ್ನೆಗೆ ಉತ್ತರ ಇಲ್ಲಿದೆ

ತೆಲುಗು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್‌ ರೆಡ್ಡಿ ವಂಗ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಕುರಿತಾದ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇದೀಗ ಪೈರಸಿಗೆ ಗುರಿಯಾಗಿದೆ. ಸಧ್ಯ ಚಿತ್ರತಂಡ ಈ ಕುರಿತು ಯಾವ ನಿರ್ಧಾರ ಕೈಗೊಳ್ಳುತ್ತದೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News