ಏಪ್ರಿಲ್ 3ರಿಂದ ಕಿರುತೆರೆ ಪ್ರೇಕ್ಷಕರ ಮನೆಗೆ ಬರುತ್ತಿದ್ದಾಳೆ ರಾಣಿ..!

Rani Serial : ಕಳೆದ 15 ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಹೊಸದೊಂದು ಧಾರವಾಹಿ ಪ್ರಾರಂಭಿಸುತ್ತಿದೆ. ಆ ಸೀರಿಯಲ್ ಹೆಸರೇ ‘ರಾಣಿ’. ಈ ಕುರಿತು ಮಾಹಿತಿ ನೀಡಲು ಇಂದು ಸೀರಿಯಲ್ ತಂಡ ಪತ್ರಿಕಾಗೋಷ್ಠಿಯನ್ನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಣಿ ಸೀರಿಯಲ್‌ಗೆ ಕಥೆ ಬರೆದು ನಿರ್ಮಾಣ ಮಾಡಿರುವ ರಾಮ್‌ಜೀ ವೇದಿಕೆ ಮೇಲೆ ಮಾತನಾಡಿ ನನ್ನ ಇಷ್ಟು ಸೀರಿಯಲ್ ಕಥೆಗಳಲ್ಲಿ ‘ರಾಣಿ’ ತುಂಬಾ ಇಷ್ಟ ಪಟ್ಟು ಬರೆದಂತ ಕಥೆ. 

Written by - Zee Kannada News Desk | Last Updated : Apr 3, 2023, 12:11 PM IST
  • ರಾಣಿ ಸೀರಿಯಲ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
  • ಒಂದಿಷ್ಟು ಸಿನಿಮಾಗಳ ಪ್ರೇರಣೆಯಿಂದ ಈ ಕಥೆಗೆ ಪಾತ್ರಗಳನ್ನು ತೆಗೆದುಕೊಳ್ಳಲಾಗಿದೆ.
  • ‘ರಾಣಿ’ಯಲ್ಲಿ ಚರಿ ಪಾತ್ರ ವಿಶೇಷವಾಗಿ ಬರಲಿದೆ.
ಏಪ್ರಿಲ್ 3ರಿಂದ ಕಿರುತೆರೆ ಪ್ರೇಕ್ಷಕರ ಮನೆಗೆ ಬರುತ್ತಿದ್ದಾಳೆ ರಾಣಿ..!  title=

Kannada Serial :  ರಾಣಿ ಸೀರಿಯಲ್‌ಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ನಮ್ಮ ತಂಡ ತುಂಬಾನೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ವಿಶೇಷತೆಗಳಿಂದ ಕೂಡಿರಲಿದೆ. ಒಂದಿಷ್ಟು ಸಿನಿಮಾಗಳ ಪ್ರೇರಣೆಯಿಂದ ಈ ಕಥೆಗೆ ಪಾತ್ರಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಥೆಯಲ್ಲಿ ನಾಯಕಿಗೆ ಕಿವಿ ಕೇಳುವುದಿಲ್ಲ, ಹಾಗಾಗಿ ನಾವು ಸೀರಿಯಲ್ ಪ್ರಸಾರವಾಗುವಾಗ ಚಿಕ್ಕ ಬಾಕ್ಸ್ನಲ್ಲಿ ಶ್ರವಣ ದೋಷ ಇದ್ದವರಿಗೆ ಅರ್ಥವಾಗುವಂತೆ ಹಾವ ಭಾವದ ಮೂಲಕ ಕೂಡ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ರಾಣಿ’ಯಲ್ಲಿ ಚರಿ ಪಾತ್ರ ವಿಶೇಷವಾಗಿ ಬರಲಿದೆ. ನಾನು ಈ ಮೊದಲು ‘ಸೋಸೆ’, ‘ಗೀತಾ’, ‘ರಾಮಾಚಾರಿ’ ಮುಂತಾದ ಸೀರಿಯಲ್‌ಗಳಿಗೆ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ’ ಎಂದು ಹೇಳಿದರು...

ನಂತರ ಈ ಸೀರಿಯಲ್ ನಿರ್ದೇಶಕ ಪ್ರಶಾಂತ್ ಮಾತನಾಡಿ, ‘ನಿರ್ಮಾಪಕರು ಹೇಳಿದಂತೆ ಶೂಟಿಂಗ್ ಮಾಡಲಾಗುತ್ತಿದೆ. ನಾನು ಈ ಮೊದಲು ‘ಮುದ್ದು ಲಕ್ಷ್ಮೀ’, ‘ಗೀತಾ’, ‘ರಾಮಾಚಾರಿ’ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದು ಈಗ ಹೊಸ ಅನುಭವದಿಂದ ರಾಣಿಯನ್ನು ನಿರ್ದೇಶಿಸುತ್ತಿದ್ದೇನೆ’ ಎನ್ನುವರು. ಇನ್ನು ರಾಣಿ ಪಾತ್ರದಾರಿ ಚಂದನ ಎಂ. ರಾವ್ ನಂಗೆ ನಟಿ ಆಗೋದು ಚಿಕ್ಕ ವಯಸ್ಸಿನ ಕನಸು. ಅದು ಈಡೇರಿದೆ. ಈ ವಾಹಿನಿಯಲ್ಲಿಯೇ ಈ ಮೊದಲು ‘ಆಕಾಶ ದೀಪ’ ಸೀರಿಯಲ್ ಮಾಡಿದ್ದೆ. ಈ ‘ರಾಣಿ’ ಪಾತ್ರ ಮಾಡೋದು ನಂಗೆ ಚಾಲೆಂಜ್ ಆಗಿತ್ತು. 

ಇದನ್ನೂ ಓದಿ-ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್ ಬಾಯ್! 

ಯಾಕಂದ್ರೆ ನಂಗೆ ಪ್ರಾಣಿ ಕಂಡ್ರೆ ಭಯ ಇದರಲ್ಲಿ ಕುರಿ ಜೊತೆ ನಟಿಸಬೇಕಿತ್ತು. ಹಾಗೂ ರಾಣಿ ಹಳ್ಳಿ ಹುಡುಗಿ ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಹಾಗಾಗಿ ಈ ಪಾತ್ರಕ್ಕೆ ತಯಾರಿ ಮಾಡಿಕೊಂಡು ಮಾಡಲಾಗುತ್ತಿದ್ದು, ಇದಕ್ಕೆ ತಂಡದ ಸಪೋರ್ಟ್ ತುಂಬಾ ಇದೆ’ ಎಂದರು..ಅಂದಹಾಗೆ ಈ ಧಾರಾವಾಹಿಯಲ್ಲಿ ನಾಯಕನಾಗಿ ಅರ್ಜುನ ಪಾತ್ರ ನಿರ್ವಹಿಸಿದ್ದಾರೆ ಪ್ರವೀಣ್ ಅಥರ್ವ. ನಾಯಕನ ತಾಯಿ ಪಾತ್ರಕ್ಕೆ ಸ್ವಾತಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾನಸ. ಇವರೇಲ್ಲಾ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು... 

ಬಾನಿಜಿ ಏಷಿಯಾ ಸಂಸ್ಥೆ ನಿರ್ಮಿಸುತ್ತಿರುವ ‘ರಾಣಿ’ ಹಳ್ಳಿಯಲ್ಲಿ ಬೆಳೆದ ಹುಡುಗಿಯ ಕಥೆ ಒಳಗೊಂಡಿದೆ. ತನ್ನೊಂದಿಗಿರುವ ಕುರಿ ಮರಿ ಚೆರ್ರಿ ಅಂದ್ರೆ ರಾಣಿಗೆ ಪಂಚಪ್ರಾಣ. ತಂದೆಯ ಪೋಷಣೆಯಲ್ಲಿ ಬೆಳೆದಿರುವ ಈಕೆ ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ತನ್ನ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ಈಕೆಯ ಮಾತು ಸಿಡಿಲಿನಂತಾಗಿದ್ರು ಮನಸು ಮಾತ್ರ ತಾಯಿಯ ಮಡಿಲಿನಂತೆ. ಇಂತಹ ಮುದ್ದು ಮೊಗದ ಚಲುವೆಗೆ ದೇವರು ಕೊಟ್ಟ ಶಾಪ ಅಂದ್ರೆ ಶ್ರವಣ ದೋಷ ಇರುವುದು. 

ಇದನ್ನೂ ಓದಿ-ಏನಿದು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್? 

ತಾಯಿ, ಅಣ್ಣನ ಜೊತೆ ರಾಣಿ ತನ್ನ ಕಿವಿಯನ್ನು ಕಳೆದುಕೊಂಡಿರುತ್ತಾಳೆ...ಈ ಘಟನೆಗೆ ಕಾರಣವಾದವರನ್ನು ಸುಮ್ಮನೆ ಬಿಡಲ್ಲ ಎಂಬ ಪಣ ತೊಟ್ಟಿರುತ್ತಾಳೆ ರಾಣಿ. ಇತ್ತ ಕಥಾ ನಾಯಕ ಅರ್ಜುನ್‌ಗೆ ತಾಯಿ ಅಂದ್ರೆ ಜೀವ. ಅಮ್ಮನ ಮಾತು ಅಂದ್ರೆ ವೇದವಾಕ್ಯ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದಿದ್ರು ಈತನಿಗೆ ಹಳ್ಳಿಯಲ್ಲಿರುವ ಹುಡುಗಿ ರಾಣಿಯ ಮೇಲೆ ಪ್ರೇಮವಾಗುತ್ತದೆ. ಆದರೆ ಅರ್ಜುನ್ ತಾಯಿ ಸೌದಾಮಿನಿಗೆ ರಾಣಿಯ ಮೇಲೆ ದ್ವೇಷವಿದೆ. 

ಇಂತಹ ಸಂದರ್ಭದಲ್ಲಿ ಅರ್ಜುನ್ ಗೆ ಪ್ರೀತಿ ಏನಾಗುತ್ತೆ, ಅಂದು ನಡೆದ ಘಟನೆಗೆ ಯಾರು ಕಾರಣ, ರಾಣಿಯ ಶ್ರವಣ ದೋಷ ಇದೆ ಎಂಬುದು ಅರ್ಜುನ್‌ಗೆ ಗೊತ್ತಾದ್ರೆ ಮುಂದೇನು ಎಂಬುದಕ್ಕೆ ಸೀರಿಯಲ್ ನೋಡಲೇಬೇಕು...

Trending News