KCC ಯಲ್ಲಿ ಪುನೀತ್‌ ಇದ್ದ ಟೀಮ್‌ ಯಾವುದು ಗೊತ್ತಾ? ವೈರಲ್‌ ಆಗ್ತಿವೆ ಹಳೆಯ ಫೋಟೋಸ್‌

Puneeth Rajkumar in KCC : ನಿನ್ನೆ ನಟ ಡಾ. ಶಿವರಾಜಕುಮಾರ್‌ ಅವರ ನಾಯಕತ್ವದ ಒಡೆಯರ್‌ ಚಾರ್ಜಸ್‌ ತಂಡ ಮತ್ತು ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ನಡುವೆ ಮ್ಯಾಚ್‌ ನಡೆಯಿತು. ಈ ವೇಳೆ ಅಪ್ಪು ಅಭಿಮಾನಿಗಳಿಗೆ ಕೊಂಚ ಬೇಸರದ ವಿಚಾರವಾಗಿತ್ತು. 

Written by - Chetana Devarmani | Last Updated : Feb 26, 2023, 08:43 AM IST
  • KCC ಯಲ್ಲಿ ಪುನೀತ್‌ ಇದ್ದ ಟೀಮ್‌ ಯಾವುದು ಗೊತ್ತಾ?
  • ನಿನ್ನೆಯ ಪಂದ್ಯದಲ್ಲಿ ಅಪ್ಪುವನ್ನು ಮಿಸ್‌ ಮಾಡ್ಕೊಂಡ ಫ್ಯಾನ್ಸ್‌
  • ವೈರಲ್‌ ಆಗ್ತಿವೆ ಹಳೆಯ ಫೋಟೋ, ವಿಡಿಯೋಗಳು
KCC ಯಲ್ಲಿ ಪುನೀತ್‌ ಇದ್ದ ಟೀಮ್‌ ಯಾವುದು ಗೊತ್ತಾ? ವೈರಲ್‌ ಆಗ್ತಿವೆ ಹಳೆಯ ಫೋಟೋಸ್‌  title=
KCC League

Puneeth Rajkumar in KCC : ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ಚಲನ ಚಿತ್ರ ಕಪ್‌ನಲ್ಲಿ ಸಿನಿ ತಾರೆಗಳು ಮತ್ತು ಕ್ರಿಕೆಟಿಗರು ಸಮಬಲದಿಂದ ಮೈದಾನದಲ್ಲಿ ಹೋರಾಡಲಿದ್ದಾರೆ. ಆರು ತಂಡಗಳು - ರಾಷ್ಟ್ರಕೂಟ ಪ್ಯಾಂಥರ್ಸ್, ಗಂಗಾ ವಾರಿಯರ್ಸ್, ಒಡೆಯರ್ ಚಾರ್ಜ್ಸ್, ಹೊಯ್ಸಳ ಈಗಲ್ಸ್, ವಿಜಯನಗರ ಪೇಟ್ರಿಯಾಟ್ಸ್ ಮತ್ತು ಕದಂಬ ಲಯನ್ಸ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೈಪೋಟಿ ನಡೆಸಿವೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ಕ್ರಿಕೆಟಿಗರು ಸಹ ಒಂದೊಂದು ತಂಡದಲ್ಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. 

 

 

ನಿನ್ನೆ ನಟ ಡಾ. ಶಿವರಾಜಕುಮಾರ್‌ ಅವರ ನಾಯಕತ್ವದ ಒಡೆಯರ್‌ ಚಾರ್ಜಸ್‌ ತಂಡ ಮತ್ತು ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ನಡುವೆ ಮ್ಯಾಚ್‌ ನಡೆಯಿತು. ಈ ವೇಳೆ ಅಪ್ಪು ಅಭಿಮಾನಿಗಳಿಗೆ ಕೊಂಚ ಬೇಸರದ ವಿಚಾರವಾಗಿತ್ತು. ಕಾರಣ ಅಲ್ಲಿ ಪುನೀತ್‌ ಅವರನ್ನು ಎಲ್ಲರೂ ಮಿಸ್‌ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಒಂದು ವಿಶೆಷ ಕಾರಣ ಕೂಡ ಇದೆ. KCC ಲೀಗ್‌ ಶುರುವಾದ ದಿನದಿಂದಲೇ ಪುನೀತ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯ ಮ್ಯಾಚ್‌ ಬಳಿಕ ಪುನೀತ್‌ ಅವರ ಹಳೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. 

ಇದನ್ನೂ ಓದಿ : Nisha Noor: ಬಡತನದಿಂದ ವೇಶ್ಯಾವಾಟಿಕೆ.. ಏಡ್ಸ್‌ನಿಂದ ಅಂತ್ಯವಾಯ್ತು ಈ ಸುಂದರ ನಟಿಯ ಬದುಕು!

 

 

ನಿನ್ನೆಯ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ತಂಡ ಒಡೆಯರ್ ಚಾರ್ಜರ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿ ಗೆಲುವನ್ನು ಪಡೆದುಕೊಂಡಿತು. ಗಂಗಾ ವಾರಿಯರ್ಸ್ ಪರ ಮೋಹಿತ್ 61 ಎಸೆತಗಳಲ್ಲಿ 72 ರನ್ ಗಳಿಸಿ ಅಮೋಘ ಆಟವಾಡಿದರು. ಈ ಗೆಲುವಿನ ಕೃಪೆಯಿಂದ ಗಂಗಾ ವಾರಿಯರ್ಸ್ ತಂಡ ಫೈನಲ್‌ಗೆ ಅರ್ಹತೆ ಪಡೆಯಿತು. ಈ ವಿಶೇಷ ಸಂದರ್ಭದಲ್ಲಿ ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ ತಮ್ಮ ನಟನನ್ನು ತುಂಬಾ ಮಿಸ್‌ ಮಾಡಿಕೊಂಡರು. ಇದಕ್ಕೆ ಬಲುಮುಖ್ಯ ಕಾರಣವಿದೆ. 

 

 

ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಗಂಗಾ ವಾರಿಯರ್ಸ್ ತಂಡದಲ್ಲಿ ಆಡುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕತ್ವದಲ್ಲಿದ್ದ ಗಂಗಾ ವಾರಿಯರ್ಸ್ ತಂಡವನ್ನು ಅವರ ಅಗಲಿಕೆಯ ಕಾರಣ ಈ ಬಾರಿ ಡಾಲಿ ಧನಂಜಯ್‌ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಮೈದಾನದಲ್ಲಿ ಅಪ್ಪು ಆಟ, ಹುಡುಗಾಟ, ಮಾತು ಎಲ್ಲವನ್ನೂ ಅವರ ಅಭಿಮಾನಿಗಳು ಮೆಲುಕು ಹಾಕಿದ್ದಾರೆ. ಗಂಗಾ ವಾರಿಯರ್ಸ್ ತಂಡದ ಜೆರ್ಸಿ ತೊಟ್ಟ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋಗಳು, ಹಳೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

 

 

ಇದನ್ನೂ ಓದಿ : ಕ್ರೀಡಾಂಗಣದಲ್ಲೇ ಟಿಕ್‌ ಟಿಕ್‌ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಶಿವಣ್ಣ..! ವಿಡಿಯೋ ವೈರಲ್‌ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News