ಬಾಲಿವುಡ್‌ಗೆ ಹೋದ್ಮೇಲೆ ಚೈತನ್ಯನನ್ನೇ ಮರೆತ ಸಮಂತಾ..! ಇಷ್ಟು ಬೇಗ ಬದಲಾದ್ರಾ ಸ್ಯಾಮ್‌..?

ನಟ ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ʼಎಮ್‌ ಮಾಯೇ ಚೇಸಾವೇʼ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಈ ಚಿತ್ರವನ್ನು ಗೌತಮ್ ವಾಸುದೇವ ಮೆನನ್ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಜೆಸ್ಸಿಯಾಗಿ ಸಮಂತಾ ಮತ್ತು ಕಾರ್ತಿಕ್ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ನಾಗ ಚೈತನ್ಯ ಈ ಸಿನಿಮಾದಲ್ಲಿ ತನಗಿಂತ ಎರಡು ವರ್ಷ ದೊಡ್ಡ ಹುಡುಗಿಯನ್ನು ಪ್ರೀತಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಯಾವ ಕ್ಷಣದಲ್ಲಿ ಜೊತೆಯಾಗಿ ಈ ಸಿನಿಮಾ ಮಾಡಿದ್ರೋ ಗೊತ್ತಿಲ್ಲ ಆ ನಂತರ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ರು.

Written by - Krishna N K | Last Updated : Feb 26, 2023, 05:00 PM IST
  • ಡಿವೋರ್ಸ್‌ ಬಳಿಕ ಸಮಂತಾ ನಾಗ ಚೈತನ್ಯನನ್ನು ಸಂಪೂರ್ಣವಾಗಿ ಮರೆತಿದ್ದಾರಂತೆ.
  • ಇಬ್ಬರು ಸ್ಟಾರ್‌ಗಳ ಮದುವೆ ಅಕ್ಟೋಬರ್ 2017 ರಲ್ಲಿ ಅದ್ಧೂರಿಯಾಗಿ ನಡೆಯಿತು.
  • ಅಕ್ಟೋಬರ್ 2021 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದಾಗಿ ಅಧಿಕೃತವಾಗಿ ಘೋಷಿಸಿದ್ದರು.
ಬಾಲಿವುಡ್‌ಗೆ ಹೋದ್ಮೇಲೆ ಚೈತನ್ಯನನ್ನೇ ಮರೆತ ಸಮಂತಾ..! ಇಷ್ಟು ಬೇಗ ಬದಲಾದ್ರಾ ಸ್ಯಾಮ್‌..? title=

Samantha Chaitanya : ನಟ ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ʼಎಮ್‌ ಮಾಯೇ ಚೇಸಾವೇʼ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಈ ಚಿತ್ರವನ್ನು ಗೌತಮ್ ವಾಸುದೇವ ಮೆನನ್ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಜೆಸ್ಸಿಯಾಗಿ ಸಮಂತಾ ಮತ್ತು ಕಾರ್ತಿಕ್ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ನಾಗ ಚೈತನ್ಯ ಈ ಸಿನಿಮಾದಲ್ಲಿ ತನಗಿಂತ ಎರಡು ವರ್ಷ ದೊಡ್ಡ ಹುಡುಗಿಯನ್ನು ಪ್ರೀತಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಯಾವ ಕ್ಷಣದಲ್ಲಿ ಜೊತೆಯಾಗಿ ಈ ಸಿನಿಮಾ ಮಾಡಿದ್ರೋ ಗೊತ್ತಿಲ್ಲ ಆ ನಂತರ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ರು.

ಇಬ್ಬರು ಸ್ಟಾರ್‌ಗಳ ಮದುವೆ ಅಕ್ಟೋಬರ್ 2017 ರಲ್ಲಿ ಅದ್ಧೂರಿಯಾಗಿ ನಡೆಯಿತು. ಅಕ್ಟೋಬರ್ 2021 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದಾಗಿ ಅಧಿಕೃತವಾಗಿ ಘೋಷಿಸಿದ್ದರು. ಡೈವೋರ್ಸ್‌ಗೂ ಮುನ್ನವೇ ಇಬ್ಬರು ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅದನ್ನು ಯಾರೂ ನಂಬಿರಲಿಲ್ಲ. ಆದರೆ ಅಂತಿಮವಾಗಿ ಇಬ್ಬರು ಬೇರ್ಪಟ್ಟಿದ್ದರು. ಈ ವಿಚಾರ ತಿಳಿದು ಚೈ ಹಾಗೂ ಸ್ಯಾಮ್‌ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.

ಇದನ್ನೂ ಓದಿ: KCC ಯಲ್ಲಿ ಪುನೀತ್‌ ಇದ್ದ ಟೀಮ್‌ ಯಾವುದು ಗೊತ್ತಾ? ವೈರಲ್‌ ಆಗ್ತಿವೆ ಹಳೆಯ ಫೋಟೋಸ್‌

ಇದೀಗ ಸಮಂತಾ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಜಿ ಪತಿಯನ್ನು ಸಂಪೂರ್ಣವಾಗಿ ಮರೆತಿದಾರೆ ಎನ್ನುವ ಮ್ಯಾಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಎಮ್‌ ಮಾಯೇ ಚೇಸಾವೇ ಸಿನಿಮಾ ರಿಲೀಸ್ ಆಗಿ 13 ವರ್ಷಗಳಾದ ಹಿನ್ನೆಲೆಯಲ್ಲಿ ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆಗುತ್ತಿವೆ.

ನಾಗ ಚೈತನ್ಯ ಅವರು ಸಮಂತಾ ಅವರೊಂದಿಗಿನ ಪೋಸ್ಟರ್ ಹಂಚಿಕೊಂಡು, ಎಮ್‌ ಮಾಯೇ ಚೇಸಾವೇ' ಚಿತ್ರ ಬಿಡುಗಡೆಯಾಗಿ 13 ವರ್ಷಗಳಾಗಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಸಮಂತಾ ನಾಗ ಚೈತನ್ಯ ಜೊತೆ ಇರುವ ಫೋಟೋವನ್ನು ಎಲ್ಲಿಯೂ ಹಂಚಿಕೊಂಡಿಲ್ಲ. ಜೆಸ್ಸಿ ಪಾತ್ರಕ್ಕೆ ಸಂಬಂಧಿಸಿದ ಫೋಟೋಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಇದರಿಂದ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News