SS.Rajamouli New Car : ದುಬಾರಿ ಕಾರ್ ಖರೀದಿಸಿದ ಸ್ಟಾರ್ ನಿರ್ದೇಶಕ ರಾಜಮೌಳಿ!

ಎಸ್‌ಯುವಿ ಖರೀದಿಸಿದ ರಾಜಮೌಳಿ, ಕಾರು ಫ್ಯೂಷನ್ ರೆಡ್ ಬಣ್ಣದಲ್ಲಿದ್ದು, ಕಾರಿನ ರೂಫ್ ಕಪ್ಪು ಬಣ್ಣದ್ದಾಗಿದೆ. ವೋಲ್ವೋ XC40 SUV ಆರಂಭಿಕ ಬೆಲೆ 44.50 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.

Written by - Channabasava A Kashinakunti | Last Updated : Apr 24, 2022, 02:57 PM IST
  • ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ 'ಆರ್‌ಆರ್‌ಆರ್' ಸಿನಿಮಾ
  • ರಾಜಮೌಳಿ ತನ್ನ ಗ್ಯಾರೇಜ್ ಗೆ ಹೊಸ ದುಬಾರಿ ಕಾರನ್ನು ಖರೀದಿಸಿದ್ದಾರೆ.
  • ವೋಲ್ವೋ XC40 SUV ಆರಂಭಿಕ ಬೆಲೆ 44.50 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.
SS.Rajamouli New Car : ದುಬಾರಿ ಕಾರ್ ಖರೀದಿಸಿದ ಸ್ಟಾರ್ ನಿರ್ದೇಶಕ ರಾಜಮೌಳಿ! title=

ಹೈದ್ರಾಬಾದ್ : ಸರಣಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಹೆಸರುವಾಸಿದ ಯಶಸ್ವಿ ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ 'ಆರ್‌ಆರ್‌ಆರ್' ಸಿನಿಮಾ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಸುದ್ದಿಯಲ್ಲಿರಲು ಕಾರಣ ರಾಜಮೌಳಿ ತನ್ನ ಗ್ಯಾರೇಜ್ ಗೆ ಹೊಸ ದುಬಾರಿ ಕಾರನ್ನು ಖರೀದಿಸಿದ್ದಾರೆ. ಹೌದು, ಹೊಸ Volvo XC40 SUV ಕಾರನ್ನು ಅನ್ನು ಖರೀದಿಸಿದ್ದಾರೆ. ಈ ಕುರಿತು ವೋಲ್ವೋ ಕಂಪನಿಯ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಫೋಟೋ  ಹಂಚಿಕೊಂಡಿದೆ.

ಎಸ್‌ಯುವಿ ಖರೀದಿಸಿದ ರಾಜಮೌಳಿ, ಕಾರು ಫ್ಯೂಷನ್ ರೆಡ್ ಬಣ್ಣದಲ್ಲಿದ್ದು, ಕಾರಿನ ರೂಫ್ ಕಪ್ಪು ಬಣ್ಣದ್ದಾಗಿದೆ. ವೋಲ್ವೋ XC40 SUV ಆರಂಭಿಕ ಬೆಲೆ 44.50 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.

ಇದನ್ನೂ ಓದಿ : Dr Rajkumar Birthday: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಡಾ.ರಾಜ್ ಸ್ಮರಣೆ

ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ, “ನಾವು ಸಿನಿಮಾ ನಿರ್ದೇಶಕ ಮತ್ತು ಚಿತ್ರಕಥೆಗಾರ @ssrajamouli ಅವರನ್ನು ವೋಲ್ವೋ ಕಾರ್ ಇಂಡಿಯಾ ಕುಟುಂಬಕ್ಕೆ ವಿನಮ್ರತೆಯಿಂದ ಸ್ವಾಗತಿಸುತ್ತೇವೆ. ಅವರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ನಾವು ಬಯಸುತ್ತೇವೆ ”ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದೆ.

Rajamouli buys Volvo XC40

ವೋಲ್ವೋ XC40 SUV 1969cc 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಆಟೋಮ್ಯಾಟಿಕ್  ಟ್ರಾನ್ಸ್ಮಿಷನ್ ಅನ್ನು ಹೊಂದಿದೆ. SUV ಯ ಗರಿಷ್ಠ ಟಾರ್ಕ್ 300Nm ಆಗಿದ್ದರೆ ಗರಿಷ್ಠ ಶಕ್ತಿ 187.4bhp ಆಗಿದೆ. ಆಯಾಮದ ವಿಷಯದಲ್ಲಿ, SUV 4425mm ಉದ್ದ, 2034mm ಅಗಲ ಮತ್ತು 2702mm ವ್ಹೀಲ್‌ಬೇಸ್ ಹೊಂದಿದೆ. ವೋಲ್ವೋ XC40 SUV 211mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆಯುತ್ತದೆ. SUV ಯ ಆಸನ ಸಾಮರ್ಥ್ಯವು 5 ಜನ ಕೂರಬಹುದು, ಬೂಟ್ ಸ್ಪೇಸ್ 460 ಲೀಟರ್ ಆಗಿದೆ. SUV ಯ ಗರಿಷ್ಠ ವೇಗ ಗಂಟೆಗೆ 180 ಕಿಮೀ ಆಗಿದ್ದರೆ ಟ್ಯಾಂಕ್ ಸಾಮರ್ಥ್ಯ 54 ಲೀಟರ್ ಹೊಂದಿದ್ದೆ.

ಇದನ್ನೂ ಓದಿ : ಇಂದು ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ

ರಾಜಮೌಳಿ ಈಗಾಗಲೆ ಲ್ಯಾಂಡ್ ರೇಂಜ್ ರೋವರ್ ಕಾರು ಮತ್ತು BMW 7-ಸೀರೀಸ್ ಕಾರನ್ನು ಸಹ ಹೊಂದಿದ್ದಾರೆ.  ರಾಜಮೌಳಿ ನಿರ್ದೇಶನದ ಇತ್ತೀಚೆಗೆ ಬಿಡುಗಡೆಯಾದ 'RRR' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1100 ಕೋಟಿಗೂ ಹೆಚ್ಚು ಹಣ ಗಳಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News