Sagar Biligowda: ಯುಗಾದಿ ಹಬ್ಬದಂದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡ ಸತ್ಯ ಸೀರಿಯಲ್‌ ನಟ!

Sagar-Siri Baby: ಕನ್ನಡ ಕಿರುತೆರೆಯ ನಟ-ನಟಿಯರಾದ  ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ಮನೆಗೆ ಯುಗಾದಿ ಹಬ್ಬದ ದಿನ ಮಹಾಲಕ್ಷ್ಮಿ ಆಗಮನವಾಗಿದೆ. ಈ ನಟನ ಮನೆಯಲ್ಲಿ ಸದ್ಯ ಹಬ್ಬದ ಸಡಗರದ ಜೊತೆಗೆ ಮನೆಗೆ ಮಗು ಬಂದಿರುವ ಖುಷಿ, ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 10, 2024, 10:38 AM IST
  • ವಿಶೇಷ ದಿನದಂದು ಮನೆಗೆ ಮಹಾಲಕ್ಷ್ಮಿಯ ಆಗಮನವಾದ ಕಾರಣ, ಸಾಗರ್‌ ಹಾಗೂ ಸಿರಿ ಎರಡೂ ಕುಟುಂಬದಲ್ಲಿ ಸಂಭ್ರಮ ದುಪ್ಪಟ್ಟು ಆಗಿದೆ.
  • ಮದುವೆಯಾದ ಒಂದು ವರ್ಷದ ಬಳಿಕ ಒಂದು ಮಗುವಿಗೆ ಜನ್ಮ ನೀಡಿದ್ದಾರೆ.ಈ ಜೋಡಿ ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  • ಈ ಬಾರಿ ನಟಿ ತೇಜಸ್ವಿನಿ ಪ್ರಕಾಶ್‌ ಹಾಗೂ ನಟಿ ಕಾವ್ಯಾ ಗೌಡ ಸಹ ತಮ್ಮ ಮಗುವಿನ ಜೊತೆ ಹಬ್ಬವನ್ನು ಆಚರಿಸಿದ್ದಾರೆ.
Sagar Biligowda: ಯುಗಾದಿ ಹಬ್ಬದಂದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡ ಸತ್ಯ ಸೀರಿಯಲ್‌ ನಟ! title=

Sagar Biligowda And Siri Raju Baby: ಕನ್ನಡ ಕಿರುತೆರೆಯ ನಟ ಸಾಗರ್ ಬಿಳಿ ಗೌಡ ಹಾಗೂ ನಟಿ ಸಿರಿ ರಾಜು ಯುಗಾದಿ ಹಬ್ಬದ ದಿನ ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ಇದೀಗ ಸಾಗರ್‌ ಮತ್ತು ಸಿರಿ ಇಬ್ಬರ ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದೆ. ವಿಶೇಷ ದಿನದಂದು ಮನೆಗೆ ಮಹಾಲಕ್ಷ್ಮಿಯ ಆಗಮನವಾದ ಕಾರಣ, ಸಾಗರ್‌ ಹಾಗೂ ಸಿರಿ ಎರಡೂ ಕುಟುಂಬದಲ್ಲಿ ಸಂಭ್ರಮ ದುಪ್ಪಟ್ಟು ಆಗಿದೆ. 

ನಟ ಸಾಗರ್‌ ಬಿಳಿಗೌಡ ಹಾಗೂ ಸಿರಿ ರಾಜು ಇಬ್ಬರು ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿದವರು, ಕಳೆದ ವರ್ಷ ಅಂದರೆ 2023 ಜನವರಿ 26 ರಂದು ದಾಂಪತ್ಯಕ್ಕೆ ಹೆಜ್ಜೆಹಾಕಿದ್ದರು. ಮದುವೆಯಾದ ಒಂದು ವರ್ಷದ ಬಳಿಕ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಈ ಜೋಡಿ ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಈ ಸಂತೋಷದ ವಿಚಾರವನ್ನು ವಿಡಿಯೋ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by C R Siri (@siri_rajuu_)

ಇದನ್ನೂ ಓದಿ: Ramayana: ʻರಾಮಾಯಣʼದಲ್ಲಿ ರಣಬೀರ್‌ ರಾಮನ ಪ್ರಾತ್ರಕ್ಕೆ ಹಾಗೂ ಸಾಯಿ ಪಲ್ಲವಿ ಸೀತಾ ರೋಲ್‌ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಸಾಗರ್‌ ಬಿಳಿಗೌಡ ಮತ್ತು ಸಿರಿ ರಾಜು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ವಿಡಿಯೋದಲ್ಲಿ ಸಾಗರ್‌ ಬೆನ್ನು ತೋರಿಸಿ ನಿಂತಿದ್ದರೇ, ಸಿರಿ ಕೈಯಲ್ಲಿ ಸ್ಕ್ಯಾನ್‌ ಮಾಡಿರುವ ಪುಟ್ಟ ಪೋಟೋ ಹಾಗೂ ಇನ್ನೊಂದು ಕೈಯಲ್ಲಿ ಶೋಸ್‌ ಹಿಡಿದುಕೊಂಡಿದ್ದರು. ಕ್ಯಾಪ್ಶನ್‌ನಲ್ಲಿ ʻಪುಟ್ಟ ದೇವತೆಯ ಆಗಮನವಾಗಿದೆಂದು ಘೋಷಿಸಲು ಪುಣ್ಯ ಮಾಡಿದ್ದೇವೆʼ ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಕೂಡ ಕಳೆದ ವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಿಹಿ ಸುದ್ದಿಯನ್ನು ಸೋಶೀಯಲ್ ಮೀಡಿಯಾದಲ್ಲಿ ಶೇರ್‌ ಮಾಡುವವುದರ ಮೂಲಕ ಸಂಭ್ರಮಿಸಿದ್ದರು. ಇದೀಗ ಕಿರುತೆರೆ ನಟಿ ಸಿರಿ ರಾಜು ಯುಗಾದಿ ಹಬ್ಬದಂದು ಅಂದವಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಾರಿ ನಟಿ ತೇಜಸ್ವಿನಿ ಪ್ರಕಾಶ್‌ ಹಾಗೂ ನಟಿ ಕಾವ್ಯಾ ಗೌಡ ಸಹ ತಮ್ಮ ಮಗುವಿನ ಜೊತೆ ಹಬ್ಬವನ್ನು ಆಚರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News