ʼಕ್ಯಾಮರಾ ತಗೋಂಡು ಬೆಡ್‌ ರೂಮ್‌ ಬನ್ನಿʼ...! ಕ್ಯಾಮರಾಮೆನ್‌ ಶಾಕ್‌... ಸೈಪ್‌ ರಾಕ್‌

ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್‌, ರೆಸ್ಟೋರೆಂಟ್‌ ಇಲ್ಲವೇ ಕ್ಲಬ್‌ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ. 'ಪಾಪ್ ಸಂಸ್ಕೃತಿ' ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್‌ನಿಂದ ಇಬ್ಬರು ಫೋಟೋಗ್ರಾಫರ್‌ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.

Written by - Krishna N K | Last Updated : Mar 3, 2023, 08:49 PM IST
  • ಬಾಲಿವುಡ್ ತಾರೆಯರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿದ್ದಾರೆ.
  • ಮೊನ್ನೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್‌ನಿಂದ ಫೋಟೋ ತೆಗೆಯಲಾಗಿತ್ತು.
  • ಇಂದು ಸೈಫ್‌ ಅಲಿ ಖಾನ್‌, ಕರೀನಾ ಅವರನ್ನು ಹಿಂಬಾಲಿಸಿ ಮನೆಗೆ ಹೋಗಿದ್ದರು.
ʼಕ್ಯಾಮರಾ ತಗೋಂಡು ಬೆಡ್‌ ರೂಮ್‌ ಬನ್ನಿʼ...! ಕ್ಯಾಮರಾಮೆನ್‌ ಶಾಕ್‌... ಸೈಪ್‌ ರಾಕ್‌ title=

Saif Ali Khan viral video : ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್‌, ರೆಸ್ಟೋರೆಂಟ್‌ ಇಲ್ಲವೇ ಕ್ಲಬ್‌ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ. 'ಪಾಪ್ ಸಂಸ್ಕೃತಿ' ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್‌ನಿಂದ ಇಬ್ಬರು ಫೋಟೋಗ್ರಾಫರ್‌ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.

ಇನ್ನು ಇದೇ ರೀತಿ ಗುರುವಾರ ರಾತ್ರಿ, ಸೈಫ್ ಅಲಿ ಖಾನ್ ಕೂಡ ಪಾಪರಾಜಿಗಳ ಮೇಲೆ ಗರಂ ಆಗಿದ್ದರು. ಕಳೆದ ರಾತ್ರಿ ಸೈಪ್‌, ಕರೀನಾ ದಂಪತಿಗಳು ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಪಾಪರಾಜಿಗಳು ಸಹ ಅವರನ್ನು ಹಿಂಬಾಲಿಸಿದ್ದರು. ಕರೀನಾ ಕಪೂರ್ ಖಾನ್ ಮತ್ತು ಅವರನ್ನು ಅವರ ಮನೆಯವರೆಗೂ ಹಿಂಬಾಲಿಸಿದ ಪಾಪರಾಜಿಗಳ ಕಂಡು ಗುಡುಗಿದರು. ಈ ವೇಳೆ ಸೈಫ್‌ ಅಲಿ ಖಾನ್‌ ಕಪ್ಪು ಕುರ್ತಾ ಧರಿಸಿದ್ದರು.

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ: Yuva : ಯುವರಾಜ್ ಮೊದಲ ಚಿತ್ರಕ್ಕೆ ʼಯುವʼ ದಿ ಪವರ್ ಟೈಟಲ್ ಫಿಕ್ಸ್..!

ಅವರ ಮನೆಯ ಹೊರಗೆ ನಿಂತಿದ್ದ ಪಾಪ್‌ಗಳು ಕೂಗಲು ಪ್ರಾರಂಭಿಸಿದರು. ಅಲ್ಲದೆ ಕ್ಯಾಮರಾಗಳಿಗೆ ಪೋಸ್ ನೀಡುವಂತೆ ಕೇಳಿದರು. ಇದು ಸೈಫ್‌ಗೆ ಸ್ವಲ್ಪ ಅಸಮಾಧಾನವನ್ನುಂಟುಮಾಡಿತು. ಇದರಿಂದ ರೋಸಿಯೊದ ಸೈಫ್‌ "ಒಂದು ಕೆಲಸ ಮಾಡಿ, ನಮ್ಮ ಮಲಗುವ ಕೋಣೆಗೆ ಬನ್ನಿʼ ಎಂದು ಸೈಫ್ ಹೇಳಿದರು. ಇದರಿಂದ ಪಾಪರಾಜಿಗಳು ಸ್ವಲ್ಪ ಮುಜುಗರಕ್ಕೊಳಗಾದರು. ಅಲ್ಲದೆ, ʼಇಲ್ಲ, ಇಲ್ಲ ಸರ್, ನಾವು ನಿನ್ನನ್ನು ಪ್ರೀತಿಸುತ್ತೇವೆʼ ಅಂತ ಹೇಳಿದ್ರು. ಈ ವಿಡಿಯೋವನ್ನು ಸೆಲೆಬ್ರಿಟಿ ಪಾಪರಾಜಿ ವೈರಲ್ ಭಯಾನಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ವಿಚಾರವಾಗಿ ಮಾತನಾಡುವುದಾದ್ರೆ, ಓಂ ರಾವುತ್ ನಿರ್ದೇಶನಕದ ಆದಿಪುರುಷ ಸಿನಿಮಾದಲ್ಲಿ ಸೈಫ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 16 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಪೌರಾಣಿಕ ಕಥಾಹಂದರದ ಸಿನಿಮಾದಲ್ಲಿ, ಪ್ರಭಾಸ್ ಮತ್ತು ಕೃತಿ ಸನನ್ ಭಗವಾನ್ ರಾಮ ಮತ್ತು ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಂದ್ರೆ, ಜನವರಿ 12 ರಂದು ಸಿನಿಮಾ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಅದರ ಕಳಪೆ ವಿಎಫ್‌ಎಕ್ಸ್‌ ಸುಧಾರಿಸುವ ಸಲುವಾಗಿ ಮುಂದೂಡಲಾಯಿತು. ಕಳೆದ ವರ್ಷ ಅಕ್ಟೋಬರ್ 2 ರಂದು ಬಿಡುಗಡೆಯಾದ ಟೀಸರ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News