Video: ಕೂತಲ್ಲಿಂದ ಮೇಲೇಳಲು ಹರಸಾಹಸ ಪಟ್ಟ ಸಲ್ಮಾನ್‌ ಖಾನ್‌! ವಿಡಿಯೋ ನೋಡಿ ಬೇಸರಗೊಂಡ ಫ್ಯಾನ್ಸ್‌

Salman Khan viral Video: ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಲ್ಮಾನ್ ಖಾನ್ ಯುವಕರು ಮಾತ್ರವಲ್ಲದೆ ಯುವತಿಯರಲ್ಲಿಯೂ ತುಂಬಾ ಜನಪ್ರಿಯರಾಗಿದ್ದಾರೆ. ಸಲ್ಲು ಭಾಯ್‌ ಎಂದರೆ ಇಂದಿಗೂ ಕೂಡ ಯುವತಿಯರು ಹುಚ್ಚದ್ದು ಕುಣಿಯುತ್ತಾರೆ. ಆದರೆ ಇದೀಗ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಈ ದೃಶ್ಯ ನೋಡಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ.

Written by - Zee Kannada News Desk | Last Updated : Sep 1, 2024, 12:12 PM IST
  • ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಈ ದೃಶ್ಯ ನೋಡಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ.
  • ಸೋಫಾದಿಂದ ಎದ್ದೇಳಲು ಕಷ್ಟಪಡುತ್ತಿರುವುದು ಕಂಡುಬಂದಿದ್ದು, ಅವರ ಈ ಸ್ಥಿತಿಯನ್ನು ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
Video: ಕೂತಲ್ಲಿಂದ ಮೇಲೇಳಲು ಹರಸಾಹಸ ಪಟ್ಟ ಸಲ್ಮಾನ್‌ ಖಾನ್‌! ವಿಡಿಯೋ ನೋಡಿ ಬೇಸರಗೊಂಡ ಫ್ಯಾನ್ಸ್‌ title=

Salman Khan viral Video: ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಲ್ಮಾನ್ ಖಾನ್ ಯುವಕರು ಮಾತ್ರವಲ್ಲದೆ ಯುವತಿಯರಲ್ಲಿಯೂ ತುಂಬಾ ಜನಪ್ರಿಯರಾಗಿದ್ದಾರೆ. ಸಲ್ಲು ಭಾಯ್‌ ಎಂದರೆ ಇಂದಿಗೂ ಕೂಡ ಯುವತಿಯರು ಹುಚ್ಚದ್ದು ಕುಣಿಯುತ್ತಾರೆ. ಆದರೆ ಇದೀಗ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಈ ದೃಶ್ಯ ನೋಡಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ.

ಆಗಸ್ಟ್ 28 ರಂದು, ಸಲ್ಮಾನ್ ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ತಕ್ಷಣ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ಸಲ್ಮಾನ್ ಖಾನ್ ಸೋಫಾದಲ್ಲಿ ಕುಳಿತಿದ್ದಾರೆ. ಆದರೆ, ಅವರು ಸೋಫಾದಿಂದ ಎದ್ದೇಳಲು ಕಷ್ಟಪಡುತ್ತಿರುವುದು ಕಂಡುಬಂದಿದೆ. ಸಲ್ಮಾನ್ ಖಾನ್ ಅವರ ಈ ಸ್ಥಿತಿಯನ್ನು ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. 

ನಟಿ ಸೋನಾಲಿ ಬೇಂದ್ರೆ ಕಾಣಿಸಿಕೊಂಡಾಗ ಸೋಫಾದಲ್ಲಿ ಕುಳಿತಿದ್ದ ಸಲ್ಮಾನ್ ಖಾನ್ ಎದ್ದು ನಿಲ್ಲಲು ಪ್ರಯತ್ನಿಸುತ್ತಾರೆ. ಆದರೆ, ಅವರ ಕೈಯಿಂದ ಸುಲಭವಾಗಿ ಮೇಲೇಳಲು ಸಾಧ್ಯವಾಗುವುದಿಲ್ಲ.  ಈ ವಿಡಿಯೋ ನೋಡಿದ ಅಭಿಮಾನಿಗಳು ಸಲ್ಮಾನ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

 

 

ಒಬ್ಬ ಬಳಕೆದಾರ, 'ಓ ಮೈ ಗಾಡ್...ನಮ್ಮ ಮೆಚ್ಚಿನ ವಜ್ರಕ್ಕೆ ವಯಸ್ಸಾಗುತ್ತಿದೆ..' ಎಂದು ಕಾಮೆಂಟ್‌ ಮಾಡಿದರೆ, ಮೊತ್ತಬ್ಬರು "ನಮ್ಮ ಬಾಲ್ಯದ ನೆಚ್ಚಿನ ನಟನಿಗೆ ವಯಸ್ಸಾಗುತ್ತಿದೆ ಮತ್ತು ನಮಗೂ ವಯಸ್ಸಾಗುತ್ತಿದೆ ... ಎಲ್ಲವೂ ಶಾಶ್ವತವಲ್ಲ ಎಂದು ನೆನಪಿಡಿ." ಎಂದು ಬರೆದಿದ್ದಾರೆ.

ಸಲ್ಮಾನ್ ಖಾನ್ ‘ಬಚ್ಚೆ ಬೋಲೆ ಮೋರಿಯಾ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಗಣೇಶೋತ್ಸವ ಆಚರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಂದು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಕೂಡ ಉಪಸ್ಥಿತರಿದ್ದರು. ಇದಲ್ಲದೇ ಮುಂಬೈ ಮುನ್ಸಿಪಲ್ ಕಮಿಷನರ್ ಮತ್ತು ಮುಂಬೈ ಪೊಲೀಸ್ ಕಮಿಷನರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದ ವಿಡಿಯೋ ಇದೀಗ ವೈರಲ್‌ ಅಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News