ಕರಾವಳಿ ಕನ್ಯೆ ಸಮೃದ್ದಿ ವಿ. ಶೆಟ್ಟಿ ಮುಡಿಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟ

ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಣಪುರಂ ಫೈನಾನ್ಸ್  ಈ ಸ್ಪರ್ಧೆಯನ್ನು ಆಯೋಜಿಸಿತ್ತು.   

Written by - Ranjitha R K | Last Updated : Jan 19, 2023, 01:22 PM IST
  • ಮಿಸ್ ಕ್ವೀನ್ ಆಫ್ ಇಂಡಿಯಾ’ಸ್ಪರ್ಧೆಯಲ್ಲಿ ಕನ್ನಡತಿಗೆ ಕಿರೀಟ
  • ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿಗೆ ಗೆಲುವು
  • ಮಗಳ ಸಾಧನೆ ಬಗ್ಗೆ ಪೋಷಕರಿಗೆ ಸಂತಸ
ಕರಾವಳಿ ಕನ್ಯೆ ಸಮೃದ್ದಿ ವಿ. ಶೆಟ್ಟಿ ಮುಡಿಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟ title=

ಬೆಂಗಳೂರು : ಮಣಪುರಂ ಫೈನಾನ್ಸ್ ಆಯೋಜಿಸಿದ್ದ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಸ್ಪರ್ಧೆಯಲ್ಲಿ ಕನ್ನಡತಿ ಸಮೃದ್ದಿ ವಿ ಶೆಟ್ಟಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. 

ಸಮೃದ್ದಿ ವಿ ಶೆಟ್ಟಿ,  ಉಡುಪಿ ಮೂಲದವರು. ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ವಿಶ್ವನಾಥ್ ಶೆಟ್ಟಿ ಹಾಗೂ ಮಮತ ಶೆಟ್ಟಿ ಪುತ್ರಿ. ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಮೃದ್ದಿ ವಿ.ಶೆಟ್ಟಿ ಬ್ಯೂಟಿ ಪ್ಯಾಜೆಂಟ್ ಆಗಿಯೂ ಪ್ಯಾಶನ್ ಮುಂದುವರೆಸಿದ್ದಾರೆ. 

ಇದನ್ನೂ ಓದಿ : PM Modi : "ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ" ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

ಸ್ಪರ್ಧೆಯ ಬಗ್ಗೆ ಮಾತನಾಡಿದ ಸಮೃದ್ದಿ ವಿ ಶೆಟ್ಟಿ,  ‘ಮಿಸ್ ಕ್ವೀನ್ ಆಫ್ ಇಂಡಿಯಾ’ದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದೆ. ದೇಶದ ಎಲ್ಲಾ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸದ್ದು, ನಾನು ಕರ್ನಾಟಕವನ್ನು ಪ್ರತಿನಿಧಿಸಿದ್ದೆ. ಸೋಮವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ‘ಮಿಸ್ ಕ್ವೀನ್ ಆಫ್ ಇಂಡಿಯಾ’ಟೈಟಲ್ ವಿನ್ನರ್ ಆಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. 

ಚಿತ್ರರಂಗದ ಎಂಟ್ರಿ ಬಗ್ಗೆ ಮಾತನಾಡಿರುವ ಸಮೃದ್ದಿ ವಿ ಶೆಟ್ಟಿ ಸದ್ಯ್ಕಕ್ಕೆ ಸಿನಿಮಾ ನಟನೆ ಬಗ್ಗೆ ಆಲೋಚನೆ ಇಲ್ಲ. ಒಳ್ಳೆಯ ಸ್ಕ್ರಿಫ್ಟ್ ಬಂದರೆ ಖಂಡಿತ ನಟಿಸುತ್ತೇನೆ ಎಂದಿದ್ದಾರೆ. ಇನ್ನು ನಾನು  ಈಗಾಗಲೇ ಉದ್ಯೋಗದಲ್ಲಿರುವುದರಿಂದ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Jacqueline Fernandez: "ನನ್ನ ವೃತ್ತಿಜೀವನ ನಾಶವಾಗಿದೆ.." ಸುಕೇಶ್‌ ವಿರುದ್ದ ಜಾಕ್ವೆಲಿನ್ ಹೇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News