PM Modi message to BJP cadre : ಪ್ರಧಾನಿ ನರೇಂದ್ರ ಮೋದಿ ಕೂಡ ಬಾಲಿವುಡ್ ಚಿತ್ರಗಳ ಬಹಿಷ್ಕಾರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರಿಗೆ ಹಲವು ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇದೇ ವೇಳೆ ಅವರು ಸಿನಿಮಾಗಳಿಗೆ ಸಂಬಂಧಿಸಿದ ಕೆಲವು ಸಲಹೆಗಳನ್ನೂ ನೀಡಿದರು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, "ನಾವು ಇಡೀ ದಿನ ಕೆಲಸ ಮಾಡುತ್ತೇವೆ ಮತ್ತು ಕೆಲವರು ಚಿತ್ರದ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಅದರ ನಂತರ ದಿನವಿಡೀ ಟಿವಿ ಮತ್ತು ಮಾಧ್ಯಮಗಳಲ್ಲಿ ಅದೇ ನಡೆಯುತ್ತದೆ. ಅನಗತ್ಯ ಹೇಳಿಕೆಗಳನ್ನು ತಪ್ಪಿಸಿ" ಎಂದು ಹೇಳಿದರು.
ಇದನ್ನೂ ಓದಿ : Sonu Sood : ವ್ಯಕ್ತಿಗೆ ಸಿಪಿಆರ್ ಕೊಟ್ಟು ಜೀವ ಉಳಿಸಿದ ಸೋನು ಸೂದ್
ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ, ಬಾಲಿವುಡ್ ಚಲನಚಿತ್ರಗಳ ಸುತ್ತ ವಿವಾದಗಳ ನಡುವೆ ಈ ಸಂದೇಶ ಬಂದಿದೆ. ಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೇ ದಿನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳು ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ಹಿಂಬದಿಗೆ ಹಾಕುತ್ತವೆ ಎಂದು ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಹಲವಾರು ಚಲನಚಿತ್ರಗಳು, ಟಿವಿ ಮತ್ತು ವೆಬ್ ಶೋಗಳು ಹಿಂದೂ ಭಾವನೆಗಳು ಮತ್ತು ಸಂಸ್ಕೃತಿಯನ್ನು ಘಾಸಿಗೊಳಿಸುವ ಆರೋಪಗಳನ್ನು ಎದುರಿಸುತ್ತಿರುವ ಕಾರಣ ವಿವಾದಗಳ ಕೇಂದ್ರವಾಗಿದೆ.
ಇತ್ತಿಚೆಗೆ ಬಹಿಷ್ಕಾರದ ಬಿಸಿ ಎದುರಿಸುತ್ತಿರುವ ಸಿನಿಮಾ ಎಂದರೆ ಅದು ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ. ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯನ್ನು ತೊಟ್ಟಿರುವ ಚಿತ್ರದಲ್ಲಿನ ‘ಬೇಷರಂ ರಂಗ್’ ಹಾಡಿನ ಬಗ್ಗೆ ಬಿಜೆಪಿ ನಾಯಕರಾದ ನರೋತ್ತಮ್ ಮಿಶ್ರಾ ಮತ್ತು ರಾಮ್ ಕದಂ ಸೇರಿದಂತೆ ಅನೇಕರು ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ : FACT CHECK : ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.