Shubha Poonja: ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ

ಸ್ಯಾಂಡಲ್​ವುಡ್ ಖ್ಯಾತ ನಟಿ ಶುಭಾ ಪೂಂಜಾ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಸುಮಂತ್ ಅವರನ್ನು ನಟಿ ಶುಭಾ ವರಿಸಿದ್ದಾರೆ.

Written by - Malathesha M | Last Updated : Feb 24, 2022, 09:20 PM IST
  • ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ
  • ದೀರ್ಘಕಾಲದ ಗೆಳೆಯ ಸುಮಂತ್ ಅವರ ಜೊತೆಗೆ ಸಪ್ತಪದಿ ತುಳಿದ ಶುಭಾ ಪುಂಜಾ
  • ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ
Shubha Poonja: ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ  title=
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ

ಬೆಂಗಳೂರು: ಸ್ಯಾಂಡಲ್​ವುಡ್ ಖ್ಯಾತ ನಟಿ ಶುಭಾ ಪೂಂಜಾ ಸದ್ದಿಲ್ಲದೇ ವೈವಾಹಿಕ ಜೀವನ(Shubha Poonja Wedding)ಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಸುಮಂತ್ ಅವರನ್ನು ನಟಿ ಶುಭಾ ವರಿಸಿದ್ದಾರೆ. 

ನಟಿ ಶುಭಾ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಉದ್ಯಮಿ ಸುಮಂತ್ (Sumanth) ಅವರ ಜೊತೆಗೆ ಬುಧವಾರ ಸಪ್ತಪದಿ ತುಳಿದಿದ್ದಾರೆ. ಸುಮಂತ್ ಹಾಗೂ ಶುಭಾ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವಿನ ನಾಲ್ಕೈದು ವರ್ಷಗಳ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಿತು. ಶುಭಾ ಮದುವೆಯಲ್ಲಿ ಬಿಗ್ ಬಾಸ್ ವಿಜೇತ ಮಂಜು ಪಾವಗಡ (Manju Paavagada)ಅವರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

ಇದನ್ನೂ ಓದಿ: ರಾಧೆ-ಶ್ಯಾಮ್’ ರಿಲೀಸ್ ದಿನಾಂಕ ಮುಂದಕ್ಕೆ: ‘ಬಾಹುಬಲಿ’ ಫ್ಯಾನ್ಸ್ ಗೆ ನಿರಾಸೆ..!

ಈ ಕುರಿತು ಶುಭಾ ನಟಿ ಪೂಂಜಾ(Shubha Poonja) ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’ ಅಂತಾ ಬರೆದುಕೊಂಡಿದ್ದಾರೆ.

2004ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಶುಭಾ, ‘ಜಾಕ್​ಪಾಟ್’ ಸಿನಿಮಾ ಮೂಲಕ ಸ್ಯಾಂಡಲ್​ವುಡ್(Sandalwood) ಪ್ರವೇಶಿಸಿದ್ದರು. ದುನಿಯಾ ವಿಜಯ್ ಅಭಿನಯದ ‘ಚಂಡ’, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಜೊತೆಗೆ ನಟಿಸಿದ ‘ಮೊಗ್ಗಿನ ಮನಸು’ ನಟಿಗೆ ಖ್ಯಾತಿ ತಂದುಕೊಟ್ಟಿದ್ದವು.

ಇದನ್ನೂ ಓದಿ: ಟಾಲಿವುಡ್​ಗೆ ಎಂಟ್ರಿ ಕೊಟ್ಟ 'ಸಲಗ': ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ದುನಿಯಾ ವಿಜಯ್

‘ಮೊಗ್ಗಿನ ಮನಸು’ ಚಿತ್ರದ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ನಟಿ ಶುಭಾ ಪುಂಜಾ(Sandalwood Actress Shubha Poonja) ಪಡೆದುಕೊಂಡಿದ್ದರು. ಇತ್ತೀಚೆಗೆ ‘ನರಗುಂದ ಬಂಡಾಯ’ ಚಿತ್ರದಲ್ಲಿ ಶುಭಾ ಬಣ್ಣಹಚ್ಚಿದ್ದರು. 38 ವರ್ಷದ ನಟಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಬಿಗ್ ಬಾಸ್’ ಸೀಸನ್ 8ರ ರಿಯಾಲಿಟಿ ಶೋನಲ್ಲಿಯೂ ಅವರು ಕಾಣಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News