ಡಿ.23 ಕ್ಕೆ ಬಹುನಿರೀಕ್ಷಿತ ಸೋನು ಸೂದ್‌ ಕನ್ನಡ ಸಿನಿಮಾ ʼಶ್ರೀಮಂತʼ ರಿಲೀಸ್‌..!

Written by - Krishna N K | Last Updated : Dec 20, 2022, 02:29 PM IST
  • ಡಿ.23, ರೈತ ದಿನದಂದು ಶ್ರೀಮಂತಾ ಟೀಸರ್ ಲಾಂಚ್‌
  • ಸೋನು ಸೂದ್‌ ಹೀರೋ ಆಗಿರೋ ಮೊದಲ ಸಿನಿಮಾ ಟ್ರೇಲರ್‌ ಬಿಡುಗಡೆ
  • ಶ್ರೀಮಂತ ಟ್ರೇಲರ್‌ ಲಾಂಚ್‌ ಮಾಡ್ತಿದ್ದಾರೆ ಸೋನು ಸೂದ್‌
ಡಿ.23 ಕ್ಕೆ ಬಹುನಿರೀಕ್ಷಿತ ಸೋನು ಸೂದ್‌ ಕನ್ನಡ ಸಿನಿಮಾ ʼಶ್ರೀಮಂತʼ ರಿಲೀಸ್‌..! title=

Sonu Sood srimantha kannada movie will release on december 23 | ಡಿ.23 ಕ್ಕೆ ಬಹುನಿರೀಕ್ಷಿತ ಸೋನು ಸೂದ್‌ ಕನ್ನಡ ಸಿನಿಮಾ ʼಶ್ರೀಮಂತʼ ರಿಲೀಸ್‌..!

 

Sonu Sood kannada movie, srimantha kannada movie, sonu sood srimantha kannada movie, sonu sood kannada movie, sonu sood new movie, sonu sood movies, sonu sood upcoming movie, sonu sood movies, ಶ್ರೀಮಂತ ಸಿನಿಮಾ, ಸೋನು ಸೂದ್‌, ಸೋನು ಸೂದ್‌ ಕನ್ನಡ ಸಿನಿಮಾ, ಸೋನು ಸೂದ್‌ ಸಿನಿಮಾ, ಕನ್ನಡ ಸಿನಿಮಾ, ಹೊಸ ಕನ್ನಡ ಸಿನಿಮಾ, 

Sonu Sood kannada movie : ಕನ್ನಡ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನಟನೆ ಮತ್ತು ಸಾಮಾಜಿಕ ಕೆಲಸಗಳಿಗಿಂದ ಜನಮನ್ನಣೆಗೆ ಪಾತ್ರರಾಗಿರುವ ಸೋನು ಸೂದ್‌ ಅವರು ಇದೀಗ ಕನ್ನಡ ಸಿನಿಮಾ ಒಂದರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಬಡವರ ಕಷ್ಟಕ್ಕೆ ಮಿಡಿದ ಸೋನು ಇದೀಗ ʼಶ್ರೀಮಂತʼ ಸಿನಿಮಾದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕುತೂಹಲ ಮೂಡಿಸಿದೆ. 

ಇಗಾಗಲೇ ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡ್ತಿರೋ ಈ ಸಿನಿಮಾ ಇದೇ ಡಿ.23ರಂದು ರಾಷ್ಟ್ರೀಯ ರೈತರ ದಿನದಂದು ಟ್ರೇಲರ್‌ ಲಾಂಚ್‌ ಆಗ್ತಾ ಇದೆ. ಸೋನು ಸೂದ್‌ ಸ್ವತಃ ತಮ್ಮ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸೋನು ಸೂದ್‌ಗೆ ನಾಯಕಿಯರಾಗಿ ವೈಷ್ಣವಿ ಪಟ್ಟವರ್ಧನ್‌ ಹಾಗೂ ವೈಷ್ಣವಿ ಚಂದ್ರನ್‌ ನಟಿಸಿದ್ದಾರೆ. ಹಾಸನ್‌ ರಮೇಶ್‌ ಅಕ್ಷನ್‌ ಕಟ್‌ ಹೇಳಿದ್ದಾರೆ.

ಶ್ರೀಮಂತ ಸಿನಿಮಾದಲ್ಲಿ ಒಟ್ಟು 9 ಹಾಡುಗಳಿದ್ದು, ಈಗಾಗ್ಲೆ ರಿಲೀಸ್‌ ಆಗಿರೋ ಹಂಸಲೇಖ ಸಾಹಿತ್ಯ ಹಾಗೂ ಸಂಗೀತವಿದ್ದ, ಎಸ್‌.ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಹಾಡು ರಿಲೀಸ್‌ ಆಗಿ ವೈರಲ್‌ ಆಗಿದೆ. ಸಿನಿಮಾ ಶೀಘ್ರದಲ್ಲೇ ರಿಲೀಸ್‌ ಆಗ್ತಾ ಇದ್ದು. ರೈತರ ದಿನದ ಅಂಗವಾಗಿ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡ್ತಿದೆ ಸಿನಿಮಾ ಟೀಮ್‌. 

ಸೋನು ಸೂದ್ ಅವರು, ಜುಲೈ 30, 1972ರಲ್ಲಿ ಪಂಜಾಬಿನ ಮೋಗದಲ್ಲಿ ಜನಿಸಿದರು. 1999ರಲ್ಲಿ, ಕಲ್ಲಾಜ್ಹಾಗರ್ ಮತ್ತು ನೆನ್ಜಿಂಜೈಲೆಯೊಂದಿಗೆ ತಮಿಳು ಭಾಷೆಯ ಚಲನಚಿತ್ರಗಳಿಗೆ ಸೂದ್ ಪರಿಚಯಿಸಲ್ಪಟ್ಟಿದರು. ನಂತರ 2000 ರಲ್ಲಿ ನಂತರ ಅವರು ತೆಲುಗು ಚಲನಚಿತ್ರ ಹ್ಯಾಂಡ್ಸ್ ಅಪ್! ಚಲನಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಮಜುನು ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಅಲ್ಲದೆ, ಹಿಂದಿ ಭಾಷೆಯ ಶಹೀದ್-ಇ-ಅಜಮ್ನಲ್ಲಿ ಭಗತ್ ಸಿಂಗ್ ಆಗಿ ಅಭಿನಯಿಸಿದರು.

ಮಣಿ ರತ್ನಂ ಅವರ ಯುವ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರ ಸಹೋದರರಾಗಿ ನಟಿಸಿದರು. ನಂತರ ಆಶಿಕ್ ಬನಯಾ ಆಪ್ನೆ ಎಂಬ ಚಿತ್ರದಲ್ಲಿ ಸೂದ್ ನಟಿಸಿ ಮೆಚ್ಚುಗೆ ಗಳಿಸಿದರು. ಹೀಗೆ ಸಾಲು ಸಾಲು ಸಿನಿಮಾಗಳ ನಂತರ ಇದೀಗ ಕನ್ನಡದ ಶ್ರೀಮಂತ ಸಿನಿಮಾದಲ್ಲಿ ಅನ್ನದಾತನ ಪಾತ್ರದಲ್ಲಿ ತೆರೆ ಮೇಲೆ ಮಿಂಚು ಹರಿಸಲು ಸಿದ್ಧವಾಗಿದ್ದಾರೆ.
 

Trending News