ಕಿರುತೆರೆ ಮೇಲೆ ಜಗನ್ಮಾತೆ ʼಶ್ರೀ ದೇವೀ ಮಹಾತ್ಮೆʼ..! ಇದೇ ಸೋಮವಾರದಿಂದ ರಾತ್ರಿ 7 ಗಂಟೆಗೆ..!

ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ ? ಹಾಗು ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ 'ಶ್ರೀ ದೇವೀ ಮಹಾತ್ಮೆ'ಯ ಮುಖ್ಯ ಉದ್ದೇಶ.

Written by - Krishna N K | Last Updated : Jun 27, 2024, 03:08 PM IST
    • ಕಿರುತೆರೆ ಮೇಲೆ 'ಪಾರ್ವತಿ'ಯ ಕಥೆ
    • ಅದೇ “ಶ್ರೀ ದೇವೀ ಮಹಾತ್ಮೆ”.
    • ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ
ಕಿರುತೆರೆ ಮೇಲೆ ಜಗನ್ಮಾತೆ ʼಶ್ರೀ ದೇವೀ ಮಹಾತ್ಮೆʼ..! ಇದೇ ಸೋಮವಾರದಿಂದ ರಾತ್ರಿ 7 ಗಂಟೆಗೆ..! title=
Star Suvarna serial

Shri Devi mahatme serial : ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗು ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ 'ಪಾರ್ವತಿ'ಯ ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ “ಶ್ರೀ ದೇವೀ ಮಹಾತ್ಮೆ”. 

ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ ? ಹಾಗು ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ 'ಶ್ರೀ ದೇವೀ ಮಹಾತ್ಮೆ'ಯ ಮುಖ್ಯ ಉದ್ದೇಶ.

ಇದನ್ನೂ ಓದಿ:ಕಲ್ಕಿ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಕಂಡೀರಾ..! ಗೆಸ್ಟ್‌ ಆಗಿ ಬಂದು ಹಿಟ್‌ ಪಡೆದ ನಟ

ಇನ್ನು ಈ ಧಾರಾವಾಹಿಯು ಅದ್ದೂರಿಯಾಗಿ, ಅಮೋಘ ಸೆಟ್‌ ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ  ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಬರ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ "ಶ್ರೀ ದೇವೀ ಮಹಾತ್ಮೆ" ನಿಮ್ಮ ಮನೆ ಮನದಂಗಳದಲ್ಲಿ ಇದೇ ಜುಲೈ 1 ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ದೇವಿಯ ಮಹಿಮೆಯನ್ನು‌ ಕಣ್ತುಂಬಿಕೊಳ್ಳುತ್ತ ಪುನೀತರಾಗಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News