ರೇಣುಕಾಸ್ವಾಮಿ ವಿಚಾರದಲ್ಲಿ ದರ್ಶನ್ ದುಡುಕಿದ್ರು, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು..! ನಟಿ ಶೃತಿ ಹೇಳಿಕೆ

Actress Shruti on Darshan case : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸ್ಯಾಂಡಲ್‌ವುಡ್‌ ಹಿರಿಯ ನಟಿ ಶೃತಿ ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ. ನೋಡಿ..

Written by - Krishna N K | Last Updated : Jun 26, 2024, 07:21 PM IST
    • ಕಷ್ಟದಿಂದ ಬೆಳೆದ ನಟ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ.
    • ಈ ಪ್ರಕರಣ ಹಾದಿ ನೋಡಿದ್ರೆ ದರ್ಶನ್ ದುಡುಕಿದ್ರು ಅನಿಸುತ್ತೆ.
    • ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಟಿ ಶೃತಿ ಮಾತು.
ರೇಣುಕಾಸ್ವಾಮಿ ವಿಚಾರದಲ್ಲಿ ದರ್ಶನ್ ದುಡುಕಿದ್ರು, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು..! ನಟಿ ಶೃತಿ ಹೇಳಿಕೆ title=
actor Darshan, Actress Shruti

Actress Shruti on Renukaswamy case : ನಟಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 17 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದೀಗ ಈ ಪ್ರಕರಣ ಕುರಿತು ಮೊದಲ ಬಾರಿಗೆ ಚಂದನವನದ ಹಿರಿಯ ನಟಿ ಶೃತಿ ಧ್ವನಿ ಎತ್ತಿದ್ದಾರೆ.

ನಟ ದರ್ಶನ್‌ ಬಂಧನ ವಿಚಾರವಾಗಿ ಮಾತನಾಡಿರುವ ನಟಿ ಶೃತಿ, ʼಕಾಟೇರʼ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಕ್ತು. ಅದಕ್ಕೂ ಮೊದಲು ʼಎಲ್ಲರ ಮನೆ ದೋಸೆ ತೂತುʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ಸ್ಟಾರ್ ಡಮ್ ಇದ್ರೂ ದರ್ಶನ್ ಬಳಿ ಸರಳತೆ ಇತ್ತು ಅಂತ ಶೃತಿ ಹೇಳಿದ್ದಾರೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್‌.. ಸ್ಟಾರ್‌ ಸೆಲೆಬ್ರಿಟಿ ಜೋಡಿ ವಿಚ್ಛೇದನಕ್ಕೆ ರೆಡಿ?

ಅಲ್ಲದೆ, ಕಷ್ಟದಿಂದ ಬೆಳೆದ ನಟ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಅನ್ನೋ ಜವಾಬ್ದಾರಿ ಅವರಿಗೆ ಇತ್ತು. ಮೈಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಈ ಪ್ರಕರಣಲ್ಲಿ ಸಿಕ್ಕಿಕೊಂಡಿರೊದು ನೋವು ತಂದಿದೆ ಎಂದು ನಟಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಇದರಿಂದ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಬಳಸೋ ಪದಗಳನ್ನ ಜೀರ್ಣಿಸಿಕೊಳ್ಳೋದು ಕಷ್ಟ. ಅದರಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ. ಫೇಕ್ ಅಕೌಂಟ್ ನಿಂದ ಬರೋ ಪದಗಳನ್ನ ನೋಡಿ ಒಂದು ವಾರ ನೋವು ತಿಂದ ದಿನಗಳಿವೆ. ಸೋಶಿಯಲ್ ಮೀಡಿಯಾಗೆ KYC ಮಾಡಬೇಕು ಅಂತ ಒತ್ತಾಯಿಸಿದರು.

ಇದನ್ನೂ ಓದಿ:ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹಾದಿ ನೋಡಿದ್ರೆ ದರ್ಶನ್ ದುಡುಕಿದ್ರು ಅನಿಸುತ್ತೆ. ಸದ್ಯ ವಿಚಾರಣೆ ನಡೀತಿದೆ.. ಏನಾಗುತ್ತೋ ನೋಡೋಣ. ಈ ಘಟನೆಯಿಂದ ಚಿತ್ರರಂಗ ಮಾನಸಿಕವಾಗಿ ಕುಗ್ಗಿದೆ. ಈ ಪ್ರಕರಣದ ದುಷ್ಪರಿಣಾಮ ಚಿತ್ರರಂಗದ ಮೇಲೆ ಬಿದ್ದಿದೆ ಎಂದು ಹಿರಿಯ ನಟಿ ಶೃತಿ ಕಳವಳ ವ್ಯಕ್ತ ಪಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News