ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಲಿದೆ ಮೆಗಾಸ್ಟಾರ್- ಕಿಚ್ಚ ಜೋಡಿ

     

Updated: Jul 12, 2018 , 03:14 PM IST
ಬೆಳ್ಳಿ ತೆರೆಯ ಮೇಲೆ ಮ್ಯಾಜಿಕ್ ಮಾಡಲಿದೆ ಮೆಗಾಸ್ಟಾರ್- ಕಿಚ್ಚ ಜೋಡಿ
Photo courtesy:Facebook

ಬೆಂಗಳೂರು: ತಮ್ಮ ಅಭಿನಯದಿಂದಲೇ ಭಾರತೀಯ ಸಿನಿಮಾ ರಂಗದಲ್ಲಿ ಕಿಚ್ಚನ್ನು ಹಚ್ಚಿರುವ ಸುದೀಪ್ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಈಗ ಮತ್ತೊಂದು ಹೊಸ ಪಾತ್ರಕ್ಕೆ ಸಿದ್ದರಾಗಿದ್ದಾರೆ.

ಹಾಗಾದ್ರೆ ಅದೆನಂತೀರಾ? ಹೌದು ಈಗ ಕಿಚ್ಚ ಸುದೀಪ್ ಈಗ ಮೆಗಾಸ್ಟಾರ್ ಚಿರಂಜೀವಿ ಅವರ ಬಹು ನಿರೀಕ್ಷಿತ ಚಿತ್ರ 'ಸೈ' ರಾ' ನರಸಿಂಹರೆಡ್ಡಿ ಚಿತ್ರದಲ್ಲಿ ಅವರ ಜೊತೆ ನಟಿಸಲಿದ್ದಾರೆ. ಸುಮಾರು 200 ಕೋಟಿ ಬಜೆಟ್ ನ ಈ ಚಿತ್ರ ಸ್ವಾತಂತ್ರ ಹೋರಾಟಗಾರ ಉಯ್ಯಲವಾಡಾ ನರಸಿಂಹ ರೆಡ್ಡಿಯವರ ಜೀವನ ಘಟನಾವಳಿ ಆಧರಿಸಿದೆ. ಚಿರಂಜೀವಿ ಜೊತೆ ಸುದೀಪ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಆ ಮೂಲಕ ಇದೆ ಮೊದಲ ಬಾರಿಗೆ ಚಿರು-ಕಿಚ್ಚ ಜೋಡಿ ಬೆಳ್ಳಿ ತೆರೆಯ ಮೇಲೆ ನಟಿಸುತ್ತಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೆಸಿಸುತ್ತಿದ್ದು ರಾಮ ಚರಣ್ ತೇಜ್ ತಮ್ಮ  ಕೊನಿಡೆಲಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ನರಸಿಂಹರೆಡ್ಡಿಯವರ ಕಥೆಯನ್ನು  ಪ್ರಚುರಿ ಸಹೋದರರು ಹೆಣೆದಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.