ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ತರುಣ್ - ಸೋನಲ್ : ಈ ದಿನ ನೋಡಿ ಇವರ ವಿವಾಹ

ಕನ್ನಡ ಸ್ಟಾರ್ ನಿರ್ದೇಶಕ ತರುಣ್ ಮತ್ತು ನಟಿ ಸೋನಲ್ ವಿವಾಹ ದಿನಾಂಕ ನಿಶ್ಚಯವಾಗಿದೆ.ಈ ವಿಚಾರವನ್ನು ಇವರಿಬ್ಬರು ಸಿನಿಮಾ ಶೈಲಿಯಲ್ಲಿಯೇ ಜನರ ಮುಂದಿಟ್ಟಿದ್ದಾರೆ.   

Written by - Ranjitha R K | Last Updated : Jul 22, 2024, 01:04 PM IST
  • ತರುಣ್ – ಸೋನಾಲ್ ವಿವಾಹಕ್ಕೆ ಫಿಕ್ಸ್ ಆಯ್ತು ಡೇಟ್
  • ಹಸೆಮಣೆ ಏರಲಿದ್ದಾರೆ ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್
  • ತರುಣ್ –ಸೋನಾಲ್ ಪ್ರೀತಿಬಂಧ ಥಿಯೇಟರ್ ನಲ್ಲಿ ಕ್ಯಾಪ್ಚರ್
ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ತರುಣ್ - ಸೋನಲ್ : ಈ ದಿನ ನೋಡಿ ಇವರ ವಿವಾಹ  title=

ಬೆಂಗಳೂರು : ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ.ಈ ವಿಚಾರವನ್ನ ತಮ್ಮದೇ ಸ್ಟೈಲ್ ನಲ್ಲಿ ಕ್ರಿಯೆಟಿವ್ ಆಗಿ ಅಭಿಮಾನಿಗಳು ಮತ್ತು ಸ್ನೇಹಿತರ ಮುಂದಿಟ್ಟಿದ್ದಾರೆ.

ತರುಣ್ ಸುಧೀರ್ ಮತ್ತು ಸೋನಾಲ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಈ ವಿಚಾರವನ್ನ ಸುಂದರ ವಿಡಿಯೋ ಮೂಲಕ ಹೊರ ಜಗತ್ತಿಗೆ ಸಾರಿದ್ದಾರೆ. ತರುಣ್ ಮತ್ತು ಸೋನಾಲ್ ಇಬ್ಬರು ಸಿನಿಮಾ ಇಂಡಸ್ಟ್ರೀಯವರೇ ಆಗಿರುವುದರಿಂದ ತಮ್ಮ ಪ್ರೀವೆಂಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿದ್ದಾರೆ.

ಇದನ್ನೂ ಓದಿ : ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?

ನವರಂಗ್ ಥಿಯೇಟರ್ ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಾಲ್ ವಿಡಿಯೋ ಮೂಡಿ ಬಂದಿದೆ.ಸಿನಿಮಾಟೋಗ್ರಾಫರ್ ಎ ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ವಿವಾಹ ಜರುಗಲಿದೆ.

ಸಾಮಾನ್ಯವಾಗಿ ಪ್ರೀವೆಂಡಿಂಗ್ ಅಂದರೆ ಜನರು ಸಿನಿಮಾ ಸ್ಟೈಲ್ ನಲ್ಲಿ ಇರಬೇಕು ಅಂತ ಸಿನಿಮ್ಯಾಟಿಕ್ ಆಗಿ ಶೂಟ್ ಮಾಡ್ತಾರೆ.  ಆದರೆ ತರುಣ್ ಮತ್ತು ಸೋನಾಲ್ ಇಬ್ಬರೂ ಸಿನಿಮಾ ಹಿನ್ನೆಲೆಯುಳ್ಳವರೇ ಆಗಿರುವುದರಿಂದ ಈ ವಿಡಿಯೋವನ್ನು ಥಿಯೇಟರ್ ನಲ್ಲಿ ಶೂಟ್ ಮಾಡಿದ್ದಾರೆ.ಅಲ್ಲದೆ, ತಮ್ಮ ನಿರ್ದೇಶನದ ಸಿನಿಮಾಗಳು ಶತದಿನೋತ್ಸವ ಪೂರೈಸಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ನವರಂಗ್ ನಲ್ಲಿ ತಮ್ಮ ಪ್ರೀವೆಂಡ್ಡಿಂಗ್ ಶೂಟ್ ಮಾಡಿಸಿದ್ದಾರೆ.

 

ಇದನ್ನೂ ಓದಿ : ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !

ಇನ್ನು ಪ್ರೀವೆಡ್ಡಿಂಗ್ ಶೂಟ್ ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಮಿಂಚಿದ್ದಾರೆ. ತರುಣ್ ಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದರೆ,  ಸೋನಾಲ್  ಕಾಸ್ಟೂಮ್ ಅನ್ನು ರಶ್ಮಿ   ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮ ಜೋರಾಗಿದ್ದು ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News