'ಕಲ್ಕಿ' ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು?

Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.

Written by - Zee Kannada News Desk | Last Updated : Jul 16, 2024, 06:54 PM IST
  • ನಾಗ್ ಅಶ್ವಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
  • ಈ ಸಿನಿಮಾವನ್ನು ಉಲ್ಲೇಖಿಸಿ ನಾಗ್ ಅಶ್ವಿನ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ ಎಂಬುದು ಕೆಲವು ನೆಟಿಜನ್ ಗಳ ಅಭಿಪ್ರಾಯವಾಗಿದೆ
  • ಈ ಪೋಸ್ಟ್ ಗೆ ಅನುಗುಣವಾಗಿ ನಿರ್ದೇಶಕ ಸಂದೀಪ್ ಅವರ ಅನಿಮಲ್ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು
'ಕಲ್ಕಿ' ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು? title=

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.

ಇದರ ಬೆನ್ನಲ್ಲೇ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ ಈ ಕುರಿತು ನೆಟ್ಟಿಗರಿಂದ ಹಲವು ಮಾತುಗಳು ಕೇಳಿ ಬರುತ್ತಿದ್ದು ಹಂಚಿಕೊಂಡಿರುವ ಪೋಸ್ಟ್ ಏನನ್ನು ಹೇಳುತ್ತದೆ ಎನ್ನುವುದು ಶಾಕಿಂಗ್ ವಿಷಯವಾಗಿದೆ.

ಇದನ್ನು ಓದಿ : ಅನಂತ್ ಅಂಬಾನಿ ಮದುವೆಯಲ್ಲಿ ಬ್ಲ್ಯಾಕ್ ಲೆಹಂಗಾದಲ್ಲಿ ಮಿಂಚಿದ ತಮನ್ನಾ..! ಅದರ ಬೆಲೆ ಲಕ್ಷಕ್ಕೂ ಮೀರಿದ್ದು.. 

ಕಲ್ಕಿ ಸಿನಿಮಾದಲ್ಲಿ ಸ್ಟಾರ್ ನಟರುಗಳ ತಾರಾಗಣವೇ ಇದ್ದು, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ವಿಜಯ್ ದೇವರಕೊಂಡ ಹೀಗೆ ಹಲವು ನಟ ನಟಿಯರು ಈ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಇದರ ಹೈಪ್ ಹೆಚ್ಚಿಸಿದೆ.

 
 
 
 

 
 
 
 
 
 
 
 
 
 
 

A post shared by nagi (@nag_ashwin)

ನಾಗ್ ಅಶ್ವಿನ್ ಹಂಚಿಕೊಂಡಿರುವ ಈ ಪೋಸ್ಟ್ ನಲ್ಲಿ ಈ ಮೂವಿಯನ್ನು  ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ತೆರೆ ಕಂಡಿದ್ದು, ಐದು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಕಲ್ಕಿ ಸಿನಿಮಾ ಭಾರಿ ಮಟ್ಟದಲ್ಲಿ ಯಶಸ್ಸನ್ನು ಕಂಡಿದೆ. ಇದೊಂದು ಮೈಲಿಗಲ್ಲನ್ನು ನಿರ್ಮಾಣ ಮಾಡಿದ್ದು, ಇದು ನಮ್ಮ ಸಿನಿಮಾ ತಂಡಕ್ಕೆ ಬಹುದೊಡ್ಡ ಸಾಧನೆಯಾಗಿದೆ. 

ಈ ಸಿನಿಮಾ ಯಾವುದೇ ಗೊಂದಲಗಳಿಲ್ಲದೆ ಪ್ರಚೋದನಕಾರಿ ದೃಶ್ಯಗಳಿಲ್ಲದೆ, ಅಶ್ಲೀಲತೆ, ಇನ್ನಿತರ ಯಾವುದೇ ಸಮಸ್ಯೆಗಳಿಗೆ ಎಡ ಮಾಡಿಕೊಡದೆ ಈ ಯಶಸ್ಸನ್ನು ಸಾಧಿಸಲಾಗಿದೆ ಎಂಬುದು ಗಮನನಾರ್ಹವಾಗಿದೆ. ಪರೋಕ್ಷವಾಗಿ ಸಹಕರಿಸಿದ ಎಲ್ಲ ಪ್ರೇಕ್ಷಕರಿಗೂ ಹಾಗೂ ನಟರಿಗೆ ಧನ್ಯವಾದಗಳು ಎಂದು ನಾಗ್ ಅಶ್ವಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 

ಇದನ್ನು ಓದಿ : 75 ಇಂಚಿನ  Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !

ಈ ಪೋಸ್ಟ್ ಗೆ ಅನುಗುಣವಾಗಿ ನಿರ್ದೇಶಕ ಸಂದೀಪ್ ಅವರ ಅನಿಮಲ್ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು ಈ ಸಿನಿಮಾವನ್ನು ಉಲ್ಲೇಖಿಸಿ ನಾಗ್ ಅಶ್ವಿನ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ ಎಂಬುದು ಕೆಲವು ನೆಟಿಜನ್ ಗಳ ಅಭಿಪ್ರಾಯವಾಗಿದೆ. ಅನಿಮಲ್ ಚಿತ್ರ ವು 1000 ಕೋಟಿ ಕಲೆಕ್ಷನ್ ಮಾಡಿದ್ದರೂ, ಈ ಸಿನಿಮಾ ಅಶ್ಲೀಲತೆ, ರಕ್ತಪಾತ, ಮಹಿಳೆಯರನ್ನು ಅವಮಾನಿಸುವ ಪ್ರಚೋದನಾ ಕಾರ್ಯ ದೃಶ್ಯಗಳನ್ನ ಹೊಂದಿದೆ ಎನ್ನುವ ಕುರಿತು ನಾಗ್ ಅಶ್ವಿನ್ ಟೀಕೆ ಮಾಡಿದ್ದಾರೆ ಎಂದು ನೆಟ್ಟಿ ಜನಗಳು ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News