ಮದುವೆ ಬಳಿಕ ನಟಿ ಕಿಯಾರ ಅಡ್ವಾಣಿ ಕೊಂಡುಕೊಂಡ ಕಾರಿನ ಬೆಲೆ ಕೇಳಿದ್ರೆ ಬೆಚ್ಚಿ ಬೀಳುತ್ತಿರಿ..!

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರು ಪರಸ್ಪರ ಪ್ರೀತಿಸಿ ಈ ವರ್ಷ ಅಂದ್ರೆ ಕಳೆದ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಮದುವೆ ತುಂಬಾ ಗ್ರಾಂಡ್ ಆಗಿ ಮದುವೆ ಆಗಿದೆ. ರಾಜಸ್ಥಾನದಲ್ಲಿ ಸಾಕಷ್ಟು ಅದ್ದೂರಿಯಾಗಿ ಇವರ ಮದುವೆ ನಡೆಯಿತು. ಇತ್ತೀಚೆಗಷ್ಟೇ ಈ ದಂಪತಿ ಜಪಾನ್​ಗೆ ತೆರಳಿದ್ದರು.

Written by - YASHODHA POOJARI | Edited by - Manjunath N | Last Updated : May 31, 2023, 11:37 AM IST
  • ಇನ್ನೂ ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್​ಗೆ ಅವರು ಜೊತೆಯಾಗಿದ್ದಾರೆ
  • ಈ ಚಿತ್ರದಲ್ಲಿ ಬರೋ ಮದುವೆ ದೃಶ್ಯಕ್ಕೆ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ
  • ಭೂಲ್ ಭುಲಯ್ಯ 2’ ಹಿಟ್ ಆದ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ
ಮದುವೆ ಬಳಿಕ ನಟಿ ಕಿಯಾರ ಅಡ್ವಾಣಿ ಕೊಂಡುಕೊಂಡ ಕಾರಿನ ಬೆಲೆ ಕೇಳಿದ್ರೆ ಬೆಚ್ಚಿ ಬೀಳುತ್ತಿರಿ..! title=

ಮುಂಬೈ: ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರು ಪರಸ್ಪರ ಪ್ರೀತಿಸಿ ಈ ವರ್ಷ ಅಂದ್ರೆ ಕಳೆದ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಮದುವೆ ತುಂಬಾ ಗ್ರಾಂಡ್ ಆಗಿ ಮದುವೆ ಆಗಿದೆ. ರಾಜಸ್ಥಾನದಲ್ಲಿ ಸಾಕಷ್ಟು ಅದ್ದೂರಿಯಾಗಿ ಇವರ ಮದುವೆ ನಡೆಯಿತು. ಇತ್ತೀಚೆಗಷ್ಟೇ ಈ ದಂಪತಿ ಜಪಾನ್​ಗೆ ತೆರಳಿದ್ದರು.

ಹಾಯಾಗಿ ಗಂಡಹೆಂಡ್ತಿ ಸುತ್ತಾಡಿ ವಾಪಸ್ಸು ಬಂದಿದ್ದರು.ಈ ಜೋಡಿ ಏರ್ಪೋರ್ಟ್ ಗೆ ಆಗಮಿಸಿದ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್  ಕೂಡ ಆಗಿತ್ತು.ಕಿಯಾರ ಅಡ್ವಾಣಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.ಜೊತೆಗೆ ಇವರು ಬಹಬೇಡಿಕೆಯ ನಟಿ ಅಂದ್ರೂ ತಪ್ಪಿಲ್ಲ ನೋಡಿ.

ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!

ಇನ್ನೂ ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್​ಗೆ ಅವರು ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಬರೋ ಮದುವೆ ದೃಶ್ಯಕ್ಕೆ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ.‘ಭೂಲ್ ಭುಲಯ್ಯ 2’ ಹಿಟ್ ಆದ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.ಕಿಯಾರ ಅಡ್ವಾಣಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 2022ರಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ: Karnataka Cabinet: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ

ಈಗ  ಮ್ಯಾಟರ್ ಏನಪ್ಪಾ ಅಂದ್ರೆ ಹೊಸ ಕಾರು ಖರೀದಿಸಿ ಮತ್ತೇ ಸುದ್ದಿಯಾಗಿದ್ದಾರೆ.ಯೆಸ್ ಕಿಯಾರಾ ಅಡ್ವಾಣಿ ಅವರ ಕಾರ್ ಕಲೆಕ್ಷನ್​ಗೆ ಹೊಸದೊಂದು ಕಾರು ಸೇರ್ಪಡೆ ಆಗಿದೆ.  ಮರ್ಸೀಡಿಸ್ ಬೆಂಜ್ ಮೆಬ್ಯಾಕ್ ಕಾರನ್ನು ಖರೀದಿ ಮಾಡಿದ್ದಾರೆ. ಹೈ ಎಂಡ್​ ಮಾಡೆಲ್​ಗೆ 3.40 ಕೋಟಿ ರೂಪಾಯಿ ಇದೆ. ಕಾರಿನ ಬೆಲೆ ಕೇಳಿದ ಫ್ಯಾನ್ಸ್ ಅಲೆಲೆ ಅಂತ ಬಾಯಿ ಬಡ್ಕೋತ್ತ ಇದ್ದಾರೆ.ಮೇ 30ರಂದು  ಕಿಯಾರಾ ಅವರು ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಕಾರಿನಲ್ಲೇ ಆಗಮಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News