3 Wives Of Tiger Prabhakar: ಸ್ಯಾಂಡಲ್‍ವುಡ್ ನಟ ಟೈಗರ್ ಪ್ರಭಾಕರ್ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಆದರೆ ಅವರ ವೈಯಕ್ತಿಕ ಜೀವನ ಸಿನಿಮಾದಷ್ಟು ಚೆಂದವಾಗಿರಲಿಲ್ಲ. ಮೂರು ಮದುವೆ ಆಗಿದ್ದ ಪ್ರಭಾಕರ್ ಅವರು ಯಾರೊಂದಿಗೂ ಚೆನ್ನಾಗಿ ಬದುಕಲಿಲ್ಲ ಎನ್ನುವುದು ಕಟುಸತ್ಯ
ಸ್ಯಾಂಡಲ್‍ವುಡ್‍ನಲ್ಲಿ ಟೈಗರ್ ಪ್ರಭಾಕರ್ ಅಪಾರ ಖ್ಯಾತಿ ಪಡೆದ ನಟ. ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದ ಪ್ರಭಾಕರ್ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇಂದಿಗೂ ಸಹ ಕನ್ನಡದ ಟೈಗರ್ ಅವರನ್ನು ಅಭಿಮಾನಿಗಳು ನೆನೆಪಿಸಿಕೊಳ್ಳುತ್ತಾರೆ. 1948ರ ಮಾರ್ಚ್ 30ರಂದು ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜನಿಸಿದ ಪ್ರಭಾಕರ್ ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಬಳಿಕ ವಿಲನ್ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರು ಮುಂದೆ ಸ್ಟಾರ್ ನಟರಾಗಿ ಮೆರೆದರು. ಮುಖ್ಯವಾಗಿ ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆ ಎಂದು ಕರೆಸಿಕೊಂಡಿದ್ದಾರೆ.
ಇದನ್ನೂ ಓದಿ: ʼಹೌದು ನನ್ನ ಬಾಯ್‌ಫ್ರೆಂಡ್ ಕ್ರಿಕೆಟರ್..ʼ ಶುಭ್ಮನ್ ಗಿಲ್ ಜೊತೆಗಿನ ಲವ್ ರೂಮರ್ಸ್ ಮಧ್ಯೆ ಶಾಕಿಂಗ್ ಹೇಳಿಕೆ ನೀಡಿದ ಸಾರಾ!
70-80ರ ದಶಕದಲ್ಲಿ ಪ್ರಭಾಕರ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದ್ದವು. ಅಂದಿನ ಖ್ಯಾತ ನಟಿಯರಾದ ಜಯಮಾಲಾ, ಆರತಿ, ಭಾರತಿ, ಲಕ್ಷ್ಮಿ ಮತ್ತು ಜಯಂತಿ ಸೇರಿದಂತೆ ಅನೇಕ ಸುಪ್ರಸಿದ್ಧ ನಟಿಯರೊಂದಿಗೆ ಪ್ರಭಾಕರ್ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ಸುಮಾರು ೪೫೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡ ಪ್ರಭಾಕರ್ ಅವರ ಗತ್ತು, ಸ್ಟೈಲ್ ಹಾಗೂ ಆಕ್ಷನ್ ಸೀನ್‌ಗಳು ಇಂದಿಗೂ ಅಭಿಮಾನಿಗಳ ಸ್ಮೃತಿ ಪಟದಲ್ಲಿ ಹಾಗೆಯೇ ಇದೆ.
ಯಾವುದೇ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡ ಟೈಗರ್ ಪ್ರಭಾಕರ್ ವೈವಾಹಿಕ ಜೀವನ ಅಷ್ಟೇನೂ ಚೆನ್ನಾಗಿರಲಿಲ್ಲ. ಅವರು ಮೂರು ಮದುವೆಯಾಗಿದ್ದರು. ಪ್ರಭಾಕರ್ ಮೊದಲು ಮದುವೆಯಾಗಿದ್ದು ಮೇರಿ ಎಂಬುವರನ್ನು. ಈ ಜೋಡಿ ಪ್ರೀತಿಯ ಫಲವಾಗಿ ವಿನೋದ್, ಭಾರತಿ ಮತ್ತು ಗೀತಾ ಎಂಬ ಮೂರು ಮಕ್ಕಳು ಜನಿಸಿದರು. ಯಾವುದೇ ಕಾರಣಕ್ಕೆ ಮೇರಿಯವರಿಗೆ ವಿಚ್ಛೇದನ ನೀಡಿದ ಪ್ರಭಾಕರ್ ನಂತರ ಖ್ಯಾತ ನಟಿ ಜಯಮಾಲಾರನ್ನು ಮದುವೆಯಾದರು. ಜಯಮಾಲಾರ ಜೊತೆಗೆ ಹಲವಾರು ವರ್ಷಗಳ ಕಾಲ ಸುಖಕರ ದಾಂಪತ್ಯ ಜೀವನ ನಡೆಸಿದರು. ಈ ಜೋಡಿಗೆ ಸೌಂದರ್ಯ ಎಂಬ ಮುದ್ದಾದ ಮಗಳು ಜನಿಸಿದಳು.
ಆದರೆ ಪ್ರಭಾಕರ್ ಮತ್ತು ಜಯಮಾಲಾರ ದಾಂಪತ್ಯ ಜೀವನದಲ್ಲಿಯೂ ಬಿರುಕು ಮೂಡಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದು ದೂರವಾದರು. ನಂತರ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಅಂಜು ಅವರನ್ನು ಮದುವೆಯಾದರು. ಈ ಜೋಡಿಗೆ ಅರ್ಜುನ್ ಎಂಬ ಮಗ ಕೂಡ ಜನಿಸುತ್ತಾನೆ. ಆದರೆ ಅಂಜು ಅವರ ಜೊತೆಗೂ ಪ್ರಭಾಕರ್ ಚೆನ್ನಾಗಿ ಬಾಳಲಿಲ್ಲ. ಕೇವಲ ಒಂದೇ ವರ್ಷಕ್ಕೆ ಅವರಿಗೂ ವಿಚ್ಛೇದನ ನೀಡಿ ಒಂಟಿಯಾಗಿ ವಾಸಿಸಲು ಶುರುಮಾಡುತ್ತಾರೆ. ನಂತರ ಹಲವಾರು ವರ್ಷಗಳ ಕಾಲ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಬಳಿಕ ಕಿಡ್ನಿ ವೈಫಲ್ಯದಿಂದ ಅವರು ಬೆಂಗಳೂರಿನ ವಿಎಸ್‌ಎಚ್ ಆಸ್ಪತ್ರೆಯಲ್ಲಿ 2001ರ ಮಾರ್ಚ್ 25ರಂದು ತಮ್ಮ 52ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.