VIDEO: ಸಹೋದರಿ ಜೊತೆ ಕಾರಿನಲ್ಲಿ ಹಾಡಿ ಕುಪ್ಪಳಿಸಿದ ಮಲೈಕಾ

ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾಗೆ ಸಂಬಂಧಿಸಿದ ವೀಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದ ಮೇಲೆ ಭಾರಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಾರಿನಲ್ಲಿ ಕುಳಿತ ಮಲೈಕಾ ಆರೋರಾ ತಮ್ಮ ಸಹೋದರಿ ಹಾಗೂ ನಟಿ ಅಮೃತಾ ಆರೋರಾ ಜೊತೆ ತುಂಟಾಟ ನಡೆಸಿದ್ದಾರೆ.

Last Updated : Dec 16, 2019, 06:26 PM IST
VIDEO: ಸಹೋದರಿ ಜೊತೆ ಕಾರಿನಲ್ಲಿ ಹಾಡಿ ಕುಪ್ಪಳಿಸಿದ ಮಲೈಕಾ title=

ನವದೆಹಲಿ: ಯಾವಾಗಲು ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕ ಸುದ್ದಿಯಲ್ಲಿರುವ ಖ್ಯಾತ ಬಾಲಿವುಡ್ ನಟಿ ಮಲೈಕಾ ಆರೋರಾ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೋಹಕ ಭಾವಚಿತ್ರ ಹಾಗೂ ವಿಡಿಯೋಗಳನ್ನು ಹರಿಬಿಟ್ಟು ತನ್ನ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ. ಆದರೆ, ಇತೀಚೆಗೆ ಮಲೈಕಾ ಆರೋರಾ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಇದೀಗ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಲೈಕಾ ಹಾವಭಾವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ತನ್ನ ಸಹೋದರಿ ಅಮೃತಾ ಆರೋರಾ ಜೊತೆ ಕಾರಿನಲ್ಲಿ ಕುಳಿತ ಮಲೈಕಾ ಆರೋರಾ ಹಾಡನ್ನು ಹೇಳಿ ಫುಲ್ ಮಸ್ತಿ ನಡೆಸಿದ್ದಾಳೆ.

ಮಲೈಕಾ ಆರೋರಾ ತಮ್ಮ ಸಹೋದರಿ ಹಾಗೂ ಖ್ಯಾತ ಬಾಲಿವುಡ್ ನಟಿ ಅಮೃತಾ ಆರೋರಾ ಜೊತೆ ಸೇರಿಕೊಂಡು ಯು2 ಬ್ಯಾಂಡ್ ನ ಕಾನ್ಸರ್ಟ್ ವಿಕ್ಷೀಸಲು ತೆರಳಿದ್ದರು. ಈ ಕುರಿತಾದ ಕೆಲ ವಿಡಿಯೋ ಹಾಗೂ ಫೋಟೋಗಳನ್ನೂ ಸಹ ಅವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಸದ್ಯ ವೈರಲ್ ಆಗಿರುವ ಈ ವಿಡಿಯೋ ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಚಿತ್ರೀಕರಿಸಲಾಗಿದ್ದು, ಇದರಲ್ಲಿ ಮಲೈಕಾ ಹಾಗೂ  ಅಮೃತಾ ಅವರ ಎಕ್ಸೈಟ್ಮೆಂಟ್ ಕಂಡುಬಂದಿದೆ. ಕಾರಿನಲ್ಲಿ ಕುಳಿತ ಈ ಇಬ್ಬರು ಸಹೋದರಿಯರು ಕಾರ್ಯಕ್ರಮ ವಿಕ್ಷೀಸಲು ತುಂಬಾ ಉತ್ಸುಕರಾಗಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲ ಯು2 ಬ್ಯಾಂಡ್ ನ ಹಾಡನ್ನೂ ಸಹ ಅವರು ಹಾಡಿದ್ದಾರೆ. ಈ ವಿಡಿಯೋವನ್ನು ಮಲೈಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಅಡಿ ಅಪ್ಲೋಡ್ ಮಾಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದ ಮೇಲೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂದೆಡೆ ಮಲೈಕಾ ಬ್ಲೂ ಟಾಪ್ ಧರಿಸಿದ್ದಾರೆ, ಅಮೃತಾ ಬ್ಲಾಕ್ ಟಾಪ್ ಧರಿಸಿರುವುದು ಕಂಡುಬಂದಿದೆ.

ತಮ್ಮ ಫೋಟೋಗಳು ಹಾಗೂ ವಿಡಿಯೋಗಳ ಜೊತೆಗೆ ನಟ ಅರ್ಜುನ್ ಕಪೂರ್ ಅವರೊಂದಿಂಗಿನ ತಮ್ಮ ಸಂಬಂಧದ ಮೂಲಕವೂ ಕೂಡ ಮಲೈಕಾ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಆದರೆ, ತಮ್ಮ ಈ ಸಂಬಂಧವನ್ನು ಉಭಯರೂ ಕೂಡ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಯಾಕೆ ಅರ್ಜುನ್ ಕಪೂರ್ ಅವರ ಹುಟ್ಟುಹಬ್ಬದ ದಿನ ಫೋಟೋವೊಂದನ್ನು ಹರಿಬಿಟ್ಟ ಮಲೈಕಾ, ಅರ್ಜುನ್ ಕುರಿತು ತಮಗಿರುವ ಪ್ರೀತಿಯನ್ನೂ ಸಹ ವ್ಯಕ್ತಪಡಿಸಿದ್ದರು. ಆದರೆ, ಇದುವರೆಗೆ ತಮ್ಮ ಮದುವೆಯ ಕುರಿತು ಯಾವುದೇ ಹೇಳಿಕೆಯನ್ನು ಈ ಇಬ್ಬರು ನೀಡಿಲ್ಲ. ತಮ್ಮ ಮದುವೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಲೈಕಾ, ಒಂದು ವೇಳೆ ತಾವು ಅರ್ಜುನ್ ಕಪೂರ್ ಜೊತೆ ವಿವಾಹ ಬಂಧನಕ್ಕೆ ಒಳಗಾದರೆ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ ಎಂದು ಹೇಳಿದ್ದರು.

Trending News