VIDEO: ಬಿಡುಗಡೆಯಾಗಿದೆ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ ಮೂರನೇ ಹಾಡು

'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ಇಲ್ಲೀಗಲ್ ವೆಪನ್ 2.0' ಹಾಡಿನ ವಿಡಿಯೋ ಇದೀಗ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಖ್ಯಾತ ನಟ ವರುಣ್ ಧವನ್ ಅವರಿಗೆ ಖ್ಯಾತ ನಟಿ ಶೃದ್ಧಾ ಕಪೂರ್ ತೀವ್ರ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.

Last Updated : Jan 5, 2020, 02:30 PM IST
VIDEO: ಬಿಡುಗಡೆಯಾಗಿದೆ  'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ ಮೂರನೇ ಹಾಡು title=

ನವದೆಹಲಿ: ಬಾಲಿವುಡ್ ಖ್ಯಾತ ನಟ ವರುಣ್ ಧವನ್, ಶೃದ್ಧಾ ಕಪೂರ್ ಹಾಗೂ ನೋರಾ ಫತೇಹಿ ಅಭಿನಯದ ಚಿತ್ರ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಬಿಡುಗಡೆಗೆ ಸಿದ್ಧಗೊಂಡಿದೆ. ಈಗಾಗಲೇ ಈ ಚಿತ್ರದ ಜಬರ್ದಸ್ತ್ ಟ್ರೈಲರ್ ಹಾಗೂ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ಅವುಗಳಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ಚಿತ್ರದ ಮೂರನೇ ಹಾಡು 'ಇಲ್ಲೀಗಲ್ ವೆಪನ್ 2.0' ಬಿಡುಗಡೆಗೊಂಡಿದೆ.

ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳಲ್ಲಿ ಪ್ರಭುದೇವಾ ಹಾಗೂ ನೋರಾ ಫತೇಹಿ ಅವರುಗಳ ಜಲ್ವಾ ಕಂಡುಬಂದಿತ್ತು . ಆದರೆ, ಈ ಹಾಡಿನಲ್ಲಿ ಇತರ ಎಲ್ಲರನ್ನೂ ಫೇಲ್ ಮಾಡುವಂತೆ ಶೃದ್ಧಾ ಕಪೂರ್ ಡಾನ್ಸ್ ಮಾಡಿರುವುದು ಕಂಡುಬಂದಿದೆ. ಹಾಡಿನ ಗೀತ ರಚನೆ ಕೂಡ ತುಂಬಾ ಡಿಫರೆಂಟ್ ಆಗಿದ್ದು, ಹಾಡಿನಲ್ಲಿ ವರುಣ್ ಧವನ್ ಗೆ ಶೃದ್ಧಾ ಪೈಪೋಟಿ ನೀಡುತ್ತಿರುವುದನ್ನು ತೋರಿಸಲಾಗಿದೆ. ಈ ಹಾಡಿಗೆ ಜಾಸ್ಮೀನ್  ಸೈಂಡಲ್ಸ್ ಹಾಗೂ ಗೈರಿ ಸಂಧೂ ತಮ್ಮ ಧ್ವನಿ ನೀಡಿದ್ದಾರೆ. ತನಿಷ್ಕ ಬಾಗ್ಚಿ ಅವರ ಸಂಗೀತ ನಿರ್ದೇಶನದಡಿ ಮೂಡಿ ಬಂದ ಈ ಹಾಡಿಗೆ ಪ್ರಿಯಾ ಸರೈಯಾ ಗೀತೆ ಬರೆದಿದ್ದಾರೆ.

'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರ ೨೦೧೩ರಲ್ಲಿ ತೆರೆಕಂಡ 'ABCD'  ಚಿತ್ರದ ಮೂರನೇ ಆವೃತ್ತಿಯಾಗಿದೆ. ಈ ಚಿತ್ರದ ಎರಡನೇ ಆವೃತ್ತಿ ೨೦೧೫ರಲ್ಲಿ ಬಿಡುಗಡೆಗೊಂಡಿತ್ತು. 'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರಕ್ಕೆ  ಹಿಂದಿನ ಎರಡು ಚಿತ್ರಗಳಿಗೆ ಕೆಲಸ ಮಾಡಿರುವ ಕಲಾವಿದರ ಜೊತೆಗೆ ಇದೀಗ ಖ್ಯಾತ ಡ್ಯಾನ್ಸರ್ ಹಾಗೂ ನಟಿ ನೋರಾ ಫತೇಹಿ ಕೂಡ ಎಂಟ್ರಿ ನೀಡಿದ್ದಾರೆ.

ಟಿ-ಸಿರೀಜ್ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು  ಖ್ಯಾತ ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಹೊತ್ತುಕೊಂಡಿದ್ದಾರೆ. ಈ ಚಿತ್ರ ಜನವರಿ ೨೪ಕ್ಕೆ ಬೆಳ್ಳಿ ಪರದೆಗೆ ಬರಲಿದೆ.

Trending News