'ಓ ಸಾಕಿ..ಸಾಕಿ..' ಹಾಡಿನ ಮೇಲೆ ಹೆಜ್ಜೆ ಹಾಕಿ ನೋರಾ ಫತೇಹಿಯನ್ನು ಮೀರಿಸಿದ್ದಾಳೆ ಈ ಬೆಡಗಿ

ಪ್ರೋನಿತಾ ವಿಜಯ್ 'ಓ ಸಾಕಿ ಸಾಕಿ' ಹಾಗಿದೆ ಜಬರ್ದಸ್ತ್ ಹೆಜ್ಜೆ ಹಾಕಿದ್ದಾರೆ ಮತ್ತು ಇದೆ ಕಾರಣದಿಂದ ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳ ಮೇಲೆ ಇದೀಗ ಭಾರಿ ವೈರಲ್ ಆಗಿದೆ.

Updated: Feb 12, 2020 , 07:05 PM IST
'ಓ ಸಾಕಿ..ಸಾಕಿ..' ಹಾಡಿನ ಮೇಲೆ ಹೆಜ್ಜೆ ಹಾಕಿ ನೋರಾ ಫತೇಹಿಯನ್ನು ಮೀರಿಸಿದ್ದಾಳೆ ಈ ಬೆಡಗಿ

ನವದೆಹಲಿ: ಕಳೆದ ವರ್ಷ ಆಗಸ್ಟ್ 15ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಚಿತ್ರ 'ಬಾಟ್ಲಾ ಹೌಸ್' ಚಿತ್ರದ ಹಾಡು 'ಓ ಸಾಕಿ ..ಸಾಕಿ ..ವ್ಯಾಪಕ ಹೆಡ್ಲೈನ್ ಗಳನ್ನು ಸೃಷ್ಟಿಸಿತ್ತು. ಇಂಟರ್ ನೆಟ್ ನಲ್ಲಿ ಇಂದಿಗೂ ಕೂಡ ಈ ಹಾಡು ಜಬರ್ದಸ್ತ್ ಹವಾ ಸೃಷ್ಟಿಸುತ್ತಿದೆ. ಈ ಹಾಡಿನಲ್ಲಿ ನೋರಾ ಫತೇಹಿ ಒಂದು ಐಟಂ ಸಾಂಗ್ ಗಾಗಿ ಹೆಜ್ಜೆ ಹಾಕಿದ್ದು, ಇಂದಿಗೂ ಕೂಡ ಈ ಹಾಡಿನ ಕ್ರೇಜ್ ನೀವು ಯುವಕರಲ್ಲಿ ಕಾಣಬಹುದಾಗಿದೆ. ಅಷ್ಟೇ ಯಾಕೆ ಹಲವು ಈ ಹಾಡಿನ ಡಾನ್ಸ್ ಸ್ಟೆಪ್ ಗಳನ್ನು ಅನುಸರಿಸಿ ತಮ್ಮದೇ ಡಾನ್ಸ್ ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಇದೀಗ ಇಂಟರ್ನೆಟ್ ಮೇಲೆ ಇದೆ ಹಾಡಿನ ಮೇಲೆ ವೃತ್ತಿಯಲ್ಲಿ ಕೊರಿಯೋಗ್ರಾಫರ್ ಆಗಿರುವ ಪ್ರೋನಿತಾ ವಿಜಯ್ ಹೆಜ್ಜೆ ಹಾಕಿದ್ದು, ಅವರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

96 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ
ಈ ಹಾಡಿಗೆ ಪ್ರೋನಿತಾ ವಿಜಯ್ ಜಬರ್ದಸ್ತ್ ಡಾನ್ಸ್ ಮಾಡಿದ್ದಾರೆ. ಇದೇ ಕಾರಣದಿಂದ ಅವರ ಡಾನ್ಸ್ ವಿಡಿಯೋ ಸಾಮಾಜಿಕ ಮಾದ್ಯಮಗಳ ಮೇಲೆ ಜಬರ್ದಸ್ತ್ ವೈರಲ್ ಆಗಿದೆ. ಕಳೆದ ವರ್ಷ ಜುಲೈ 16ರಂದು ಯೂಟ್ಯೂಬ್ ಮೇಲೆ ಪ್ರೋನಿತಾ ವಿಜಯ್ ತಮ್ಮ ವಿಡಿಯೋ ಅನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದುವರೆಗೆ 96 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ 4000 ಕ್ಕೂ ಅಧಿಕ ಕಾಮೆಂಟ್ ಗಳು ಬಂದಿದ್ದು, ಜನರು ಈ ಪ್ರೋನಿತಾ ಡಾನ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವರು ಈ ಯುವತಿ ನೋರಾ ಫತೇಹಿಗೆ ಉತ್ತಮ ಟಕ್ಕರ್ ನೀಡಿದ್ದಾಳೆ ಎಂದೂ ಕೂಡ ಹೋಗಳಿದ್ದಾರೆ.

ಈ ಹಾಡಿನ ಒರಿಜಿನಲ್ 'ಓ ಸಾಕಿ ಸಾಕಿ' ಹಾಡು ಸಂಜಯ್ ದತ್ ಅಭಿನಯದ ಚಿತ್ರ 'ಮುಸಾಫಿರ್' ನಲ್ಲಿ ಚಿತ್ರೀಕರಿಸಲಾಗಿತ್ತು. ಆಗ ಖ್ಯಾತ ನಟಿ ಕೊಯಿನಾ ಮಿತ್ರಾ ಈ ಹಾಡಿಗೆ ಜಬರ್ದಸ್ತ್ ಡಾನ್ಸ್ ಮಾಡಿದ್ದರು. ಈ ಹಾಡಿನಲ್ಲಿ ಸಂಜಯ್ ದತ್ ಕೂಡ ಇದ್ದರು. ದೇವ್ ಕೊಹ್ಲಿ ಸಾಹಿತ್ಯ ರಚಿಸಿರುವ ಈ ಹಾಡಿಗೆ ವಿಶಾಲ್ ಶೇಖರ್ ಸಂಗೀತ ನೀಡಿದ್ದು, ಸುಖವಿಂದರ್ ಸಿಂಗ್ ಹಾಗೂ ಸುನಿಧಿ ಚೌಹಾನ್ ಈ ಹಾಡಿಗೆ ತಮ್ಮ ಕಂಠ ನೀಡಿದ್ದರು. ಇನ್ನೊಂದೆಡೆ ಇತ್ತೀಚಿಗೆ ಮೂಡಿ ಬಂದ 'ಬಾಟ್ಲಾ ಹೌಸ್' ಚಿತ್ರದಲ್ಲಿ ಈ ಹಾಡನ್ನು ತನಿಶ್ಕ್ ಬಾಗಚಿ ರಿಕ್ರಿಯೆಟ್ ಮಾಡಲಾಗಿದೆ. ಈ ಹಾಡಿಗೆ ತುಳಸಿ ಕುಮಾರ್ ಹಾಗೂ ನೇಹಾ ಕಕ್ಕಡ್ ತಮ್ಮ ಧ್ವನಿ ನೀಡಿದ್ದಾರೆ.