ಕೋಲ್ಕತ್ತಾ: ವಿವಾದಾತ್ಮಕ ಟ್ವೀಟ್, ಹೇಳಿಕೆಗಳಿಂದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಆಗಾಗ ಟೀಕೆಗೆ ಒಳಗಾಗತ್ತಾರೆ . ಧಾರ್ಮಿಕ ವಿಚಾರವಾಗಿ ಪ್ರತಿಕ್ರಿಯಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗುವ ಇವರು ಇದೀಗ ಮತ್ತೆ ಟೀಕೆಗೆ ಒಳಗಾಗಿದ್ದಾರೆ.
ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ರವರ ತಮ್ಮ ಪುಸ್ತಕ ಸಹಿ ಕಾರ್ಯಕ್ರಮನ್ನು ಕೋಲ್ಕತ್ತಾದ ಕ್ವೆಸ್ಟ್ ಮಾಡಲ್ ನಲ್ಲಿ ಆಯೋಜಿಸಲಾಗಿತ್ತು. ಕ್ವೆಸ್ಟ್ ಮಾಡಲ್ ಮುಸ್ಲಿಂ ಏರಿಯಾ ಆಗಿರುವುದರಿಂದ ಅದು ಸೇಫ್ ಅಲ್ಲದ ಕಾರಣ ಅರ್ಬನ್ನಕ್ಸಲ್ಸ್ ಬುಕ್ ಸೈನಿಂಗ್ ಇವೆಂಟ್ನ್ನು ಕ್ವೆಸ್ಟ್ ಮಾಲ್ನಿಂದ ಸ್ಟಾರ್ ಮಾರ್ಕ್ ಬುಕ್ ಶಾಪ್, ಸೌತ್ ಸಿಟಿ ಮಾಲ್ಗೆ ಬದಲಾಯಿಸಲಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bollywood : ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ! ಮದುವೆ ಡೇಟ್ ಕೂಡ ಫಿಕ್ಸ್?
'ಮುಸ್ಲಿಂ ಭಾರತೀಯರಿಗೆ' 'ಕಾನೂನುಬಾಹಿರವಾಗಿ ಮಾಲ್ ಅನ್ನು ಹೈಜಾಕ್ ಮಾಡಲು' ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. ಭಾರತೀಯ ಮಾಲ್ ಒಂದಕ್ಕೆ ಭಾರತೀಯ ಬರಹಗಾರನಿಗೇ ಎಂಟ್ರಿ ಇಲ್ಲ. ಇದು ನಿಜಕ್ಕೂ ದುರಂತ ಹಾಗೆಯೇ ಇದೊಂದು ಮುನ್ನೆಚ್ಚರಿಕೆಯ ಪರಿಸ್ಥಿತಿ ಎಂದು ಇದಕ್ಕೆಲ್ಲಾ ಪಶ್ಚಿಮ ಬಂಗಾದ ಆಡಳಿತ ವರ್ಗ ಕಾರಣವೆಂದು ಮುಖ್ಯಮಂತ್ರಿಯನ್ನು ಅಗ್ನಿಹೋತ್ರಿ ದೂಷಿಸಿದ್ದಾರೆ.
"ಬಂಗಾಳದಲ್ಲಿ ಈಗ ಅನೇಕ ಮಿನಿ ಕಾಶ್ಮೀರಗಳಿವೆ, ಬಂಗಾಳ ಕಾಶ್ಮೀರವಾಗುವ ಮೊದಲು, ನಾನು ಬಂಗಾಳದ ಕಥೆಯನ್ನು ಸಾರ್ವಜನಿಕರಿಗೆ ತರಲು ಬಯಸುತ್ತೇನೆ. ಬಂಗಾಳದ ರಾಜಕೀಯವು ಹೇಗೆ ಕುಸಿದಿದೆ ಎಂಬುದನ್ನು ಚಲನಚಿತ್ರದ ಮೂಲಕ ತರುತ್ತೇನೆಂದು ಕಾಶ್ಮೀರ್ ಫೈಲ್ಸ್ ನಿರ್ದೇಶಕ ಹೇಳಿದ್ದಾರೆ.
ಇದನ್ನೂ ಓದಿ: ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ತಾಯಿ ನಿಧನ
KOLKATA: ATTENTION:
This is to inform that due to security reasons the venue of book signing of #UrbanNaxals has been shifted from Quest Mall to Starmark Book Shop, South City Mall.
I’m informed that since Quest Mall is a Muslim Area it’s not safe. The tragedy of modern Bengal. pic.twitter.com/rp7KOWpwtt
— Vivek Ranjan Agnihotri (@vivekagnihotri) April 20, 2023
"ನಾನು ಬಂಗಾಳದಲ್ಲಿ ಸ್ವತಂತ್ರವಾಗಿ ತಿರುಗಾಡಲು ಸಾಧ್ಯವಿಲ್ಲ. ನಿಮ್ಮ ಮುಖ್ಯಮಂತ್ರಿ ಬಂಗಾಳದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ" ಎಂದು ದಿದಿಯನ್ನು ದೂಷಿಸಿದರು.
ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿದ ಸುಪ್ರಿಯೋ ,ನಾನು ಬಾಲಿಗಂಜ್ನ ಶಾಸಕ ಕ್ವೆಸ್ಟ್ ಮಾಲ್ ಏರಿಯಾದಲ್ಲಿ ಇದ್ದೇವೆ ನಮಗೆ ಯಾವತ್ತು ಭದ್ರತೆ ಕೊರತೆ ಆಗಿಲ್ಲ. ನಿಮಗೆ ಮಾತ್ರ ಆ ಕೊರತೆ ಕಾಣಿಸುವುದೆಂದು ಟೀಕಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.