Atulya Ravi : ನಟಿ ಅತುಲ್ಯಾ ರವಿ 2017ರಲ್ಲಿ ತಮಿಳಿನ ಕಾದಲ್ ಕಣ್ ಕಟ್ಟುದೆ ಸಿನಿಮಾ ಮೂಲಕ ಕಾಲಿವುಡ್ ಸಿರಂಗವನ್ನು ಪ್ರವೇಶಿಸಿದರು. ಅಲ್ಲಿಂದ ಶುರುವಾದ ಇವರ ಸಿನಿ ಪಯಣ ಸದ್ಯ ಒಂದು ಉತ್ತಮ ಸ್ಥಾನಕ್ಕೆ ಬಂದು ತಲುಪಿದೆ. ಅಲ್ಲದೇ ಇದೀಗ ನಟಿ ವರ್ಷಕ್ಕೆ ಮೂರ್ನಾಲ್ಕು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಿನಿರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ನಟಿ ಸಾಕಷ್ಟು ಕಿರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ನಟಿ ಸಂದರ್ಶನ ಒಂದರಲ್ಲಿ ಲೈಂಗಿಕ ಸಂಬಂಧದ ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ. ಅವರ ನೇರ ಮತ್ತು ದಿಟ್ಟವಾದ ಹೇಳಿಕೆ ಸದ್ಯ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ-ಒಂದೇ ಒಂದು ಫ್ಲಾಪ್ ಇಲ್ಲದ ಸೌತ್ ಇಂಡಿಯನ್ ನಿರ್ದೇಶಕರು ಇವರೇ..!
ಸಂದರ್ಶನದಲ್ಲಿ ನಟಿಗೆ "ನಿಮ್ಮ ಪ್ರಕಾರ ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸೆಷ್ಟು?" ಎಂಬ ಪ್ರಶ್ನೆಗೆ ನಟಿ ನನ್ನ ಪ್ರಕಾರ 21 ರಿಂದ 25 ವರ್ಷ ಎಂದಿದ್ದಾರೆ. ಅಲ್ಲದೇ ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ಒಳ್ಳೆಯದಾ? ಎಂದು ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ನಟಿ ಹೀಗೆ ಉತ್ತರಿಸಿದ್ದಾರೆ.
ನನ್ನ ಪ್ರಕಾರ ಮದುವೆ ಬಳಿಕದ ಲೈಂಗಿಕ ಸಂಬಂಧವೇ ಉತ್ತಮ. ಏಕೆಂದರೆ ಅದು ನಮ್ಮ ಪೂರ್ವಜರಿಂದ ನಡೆದುಬಂದ ಸಂಸ್ಕೃತಿ. ಆದರೆ ಇತ್ತೀಚೆನ ದಿನಗಳಲ್ಲಿ ಲೀವ್ ಇನ್ ರಿಲೇಷನ್ಶಿಪ್ಗಳಿಂದಾಗಿ ಇದ್ಯಾವುದು ಪಾಲನೆಯಾಗುತ್ತಿಲ್ಲ. ಅಲ್ಲದೇ ಇದು ಅವರವರ ಸ್ವಂತ ವಿಚಾರ ಅದನ್ನು ಕೇಳಲೂ ನಮಗೆ ಯಾವ ಹಕ್ಕು ಇಲ್ಲ. ಹಾಗಾಗಿ ಮದುವೆ ನಂತರದ ಲೈಂಗಿಕ ಸಂಬಂಧ ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ-ಬೇಡ ಅಂದ್ರು ಹಿಂದೆ ಬಿದ್ದ, ಮದುವೆಗೆ ಒಲ್ಲೆ ಎಂದ : ಜೈಲಿಂದಲೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.